ಗುವಾಹಟಿ:ಅತಿದೊಡ್ಡ ಮಾದಕವಸ್ತು ಕಳ್ಳಸಾಗಾಣೆ ಪ್ರಕರಣ ಒಂದನ್ನು ಬೇದಿಸಿರುವ ಅಸ್ಸಾಂ ಪೊಲೀಸರು 100 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್​ ಹಾಗೂ ನಾಲ್ವರುನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯು ಅಸ್ಸಾಂನ ಕರೀಮ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ.
ಅಸ್ಸಾಂ ಪೊಲೀಸ್‌ನ ವಿಶೇಷ ಕಾರ್ಯ ಪಡೆ(STF) ಮತ್ತು ಕರೀಮ್‌ಗಂಜ್ ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಜಪ್ತಿ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Assam | In a joint operation, the Special Task Force (STF) of Assam Police and Karimganj district Police seized a large quantity of contraband drugs worth Rs 100 crores in Karimganj district today. The security personnel also arrested four persons.5.1 kg of heroin and 64,000…pic.twitter.com/g941pzB81l
ಇದನ್ನೂ ಓದಿ:BTS ಭೇಟಿಯಾಗಲು ಮನೆ ಬಿಟ್ಟ ಹೋದ ಬಾಲಕಿಯರಿಗೆ ಕಾದಿತ್ತು ಶಾಕ್​!
ಈ ಕುರಿತು ಪ್ರತಿಕ್ರಿಯಿಸಿರುವ STF ಡಿಐಜಿ ಪಾರ್ಥಸಾರಥಿ ಮಹಾಂತ, ಮಿಜೋರಾಂನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್​ ಕಳ್ಳಸಾಗಾಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ನೀಲಂ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಪ್ರಕಂಡಿ ಬಳಿ ಮಧ್ಯಾಹ್ನ 2:15ರ ಸುಮಾರಿಗೆ ಒಂದು ಕಾರನ್ನು ನಾವು ತಡೆದು ತಪಾಸಣೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ 5.1 ಕೆ.ಜಿ ಹೆರಾಯಿನ್, 64,000 ಯಬಾ ಟ್ಯಾಬ್ಲೆಟ್ಸ್ ಮತ್ತು ನಾಲ್ಕು ಪ್ಯಾಕ್ ವಿದೇಶಿ ಸಿಗರೇಟ್ ಪತ್ತೆಯಾಗಿದೆ. ಮೂವರು ಆರೋಪಿಗಳು ಮಿಜೋರಾಂ ಮೂಲದವರಾಗಿದ್ದು, ಓರ್ವ ಅಸ್ಸಾಂನ ಕರೀಮ್​ಗಂಜ್​ನವನು ಎಂದು ತಿಳಿದು ಬಂದಿದೆ. ವಶಪಡಿಸಿಕೊಂಡ ಡ್ರಗ್ಸ್ ಮೌಲ್ಯ ಸುಮಾರು ₹100 ಕೋಟಿಯಾಗಿದ್ದು, ಈಶಾನ್ಯ ಭಾರತದಲ್ಲಿ ಈವರೆಗೆ ಜಪ್ತಿಯಾದ ಅತ್ಯಧಿಕ ಮೌಲ್ಯದ ಡ್ರಗ್ಸ್ ಇದಾಗಿದೆ ಎಂದು STF ಡಿಐಜಿ ಪಾರ್ಥಸಾರಥಿ ಮಹಾಂತ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 12 =
Remember me
