ಬೆಂಗಳೂರು:ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ತಲೆಮರೆಸಿಕೊಂಡಿರುವ ಶಾಸಕ ಜಮೀರ್​ ಅಹ್ಮದ್​ರ ಆಪ್ತ, ಕ್ಯಾಸಿನೋ ಶೇಖ್ ಫಾಝಿಲ್​ನ ಸ್ಫೋಟಕ ರಹಸ್ಯ ಬಯಲಾಗಿದೆ.
ಜಮೀರ್ ಅಹ್ಮದ್​ರ ಮಗನ ಟೇಕ್ ಕೇರ್ ಮಾದರಿಯಲ್ಲಿದ್ದ ಶೇಖ್​ ಫಾಝಿಲ್, ಆತನ ಎಲ್ಲ ವ್ಯವಹಾರದಲ್ಲೂ ಭಾಗಿಯಾಗುತ್ತಿದ್ದ. ಆತನ ಸಿನಿಮಾದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಫಾಝಿಲ್​, ಬಾಲಿವುಡ್ ಸ್ಟಾರ್ ನಟರ ಸಂಪರ್ಕ ಮಾಡಿಕೊಟ್ಟಿದ್ದ. ಫಾಸಿಲ್​ಗೆ ಕ್ಯಾಸಿನೋ ವ್ಯವಹಾರ ಅಷ್ಟೇ ಅಲ್ಲ, ಕ್ರಿಕೆಟ್ ನಂಟೂ ಇದೆ. ಪ್ರತಿಷ್ಠಿತ ಕ್ರಿಕೆಟ್ ಲೀಗ್‌ನಲ್ಲಿ ಫಾಸಿಲ್ ಬಂಡವಾಳ ಹೂಡಿದ್ದು, ಕರ್ನಾಟಕ ಟಸ್ಕರ್ಸ್ ತಂಡದ ಪ್ರಮುಖ ಸ್ಪಾನ್ಸರ್ ಬೆಲೀಸ್ ಕ್ಯಾಸಿನೋ!
ಇದನ್ನೂ ಓದಿರಿಕೊಲಂಬೋ ಪ್ರವಾಸ; ಜಮೀರ್​ ಹೇಳಿಕೆಗೆ ತಿರುಗೇಟು ಕೊಟ್ಟ ಕುಮಾರಸ್ವಾಮಿ
ಬೆಲೀಸ್ ಕ್ಯಾಸಿನೋದ ಮಾರ್ಕೆಟಿಂಗ್ ಡೈರೆಕ್ಟರ್ ಆಗಿರುವ ಶೇಖ್ ಫಾಝಿಲ್​, ಅಬುದಾಬಿ ಟಿ-10 ಲೀಗ್‌ನಲ್ಲೂ ಬಂಡವಾಳ ಹೂಡಿಕೆ ಮಾಡಿದ್ದಾನೆ. ಕರ್ನಾಟಕ ಟಸ್ಕರ್ಸ್ಫ್ರಾಂಚೈಸಿ ಸ್ಟಾರ್ ಆಟಗಾರರನ್ನು ಹೊಂದಿದ್ದು, 2019ರಲ್ಲಿ ಈ ತಂಡಕ್ಕೆ ಬೆಲೀಸ್ ಕ್ಯಾಸಿನೋ ಸ್ಪಾನ್ಸರ್​ಶಿಪ್​ ಆಗಿತ್ತು. ಟೂರ್ನಿ ಯುದ್ದಕ್ಕೂ ಟಸ್ಕರ್ಸ್ ತಂಡದೊಂದಿಗೆ ಶೇಖ್ ಫಾಝಿಲ್​ ಗುರುತಿಸಿಕೊಂಡಿದ್ದು, ಪ್ರಮುಖ ಕ್ರಿಕೆಟ್​ ಆಟಗಾರ ಜತೆ ನಂಟು ಹೊಂದಿದ್ದಾನೆ. ಸಿನಿ ಸೆಲೆಬ್ರೆಟಿಗಳ ಲಿಂಕ್​ ಕೂಡ ಈತನಿಗಿದೆ.
10 ವರ್ಷದ ಹಿಂದೆ ಮೆಕ್ಯಾನಿಕ್​ ಆಗಿದ್ದ ಶೇಖ್​ ಫಾಝಿಲ್​ ಈಗ ಫುಲ್ ಹೈಫೈ ಆಗಿದ್ದೇಗೆ? ಅಷ್ಟೊಂದು ಹಣ ಹೇಗೆ ಬಂತು? ಎಂಬೆಲ್ಲ ಪ್ರಶ್ನೆಗಳಿಗೆ ಸಿಸಿಬಿ ತನಿಖೆಯಲ್ಲೇ ಉತ್ತರ ಹೊರಬೀಳಬೇಕಿದೆ.
ಜಮೀರ್ ಅಹ್ಮದ್​ರ ಮತ್ತೊಬ್ಬ ಆಪ್ತ ರೋಹನ್ ಎಂಬಾತನೊಂದಿಗೆ ಶೇಖ್​ ಫಾಝಿಲ್​ ಸಂಪರ್ಕ ಹೊಂದಿದ್ದ. ರೋಹನ್​ ಮೂಲಕ ಜಮೀರ್ ಮಗನ ಸ್ನೇಹವನ್ನು ಫಾಝಿಲ್​ ಬೆಳೆಸಿದ್ದ. ಬಳಿಕ ಆತನ ಎಲ್ಲ ಎಲ್ಲ ವ್ಯವಹಾರದಲ್ಲೂ ಭಾಗಿಯಾಗುತ್ತಿದ್ದ ಎಂದು ಗೊತ್ತಾಗಿದೆ.(ದಿಗ್ವಿಜಯ ನ್ಯೂಸ್​)
ಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​

ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

‘ಡ್ರಗ್ಸ್​ ದಂಧೆಯಲ್ಲಿ 32 ರಾಜಕಾರಣಿಗಳು! ಸಾಕ್ಷಿ ಸಮೇತ ಗೃಹ ಸಚಿವರ ಕೈ ಸೇರಲಿದೆ ಲಿಸ್ಟ್’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
