ಭೂಪಾಲ್‌:ಮದ್ಯದ ವಿಚಾರವಾಗಿ ಬಿಜೆಪಿ ನಾಯನೊಬ್ಬ ತನ್ನ ಹೆಂಡತಿಗೆ ಗುಂಡು ಹಾರಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.ಇದನ್ನೂ ಓದಿ:ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ಹಿನ್ನೆಲೆ: ಮಿಮ್ಸ್‌ಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿರಾಜೇಂದ್ರ ಪಾಂಡೆ ಕೊಲೆ ಆರೋಪಿಯಾಗಿದ್ದು,ಕುಡಿತದ ಚಟ ಹೊಂದಿದ್ದಾನೆ. ಸೋಮವಾರದಂದು ಮನೆಯಲ್ಲಿಯೇ ಕುಳಿತು ಸಂಬಂಧಿಕರೊಬ್ಬರ ಜತೆ ಮದ್ಯ ಸೇವಿಸುತ್ತಿದ್ದ ವೇಳೆ ಪತ್ನಿ ಶೀಲ ವಿರೋಧಿಸಿದಾಗ ಜಗಳವಾಡಿದ್ದಾರೆ. ಈ ವೇಳೆ ಹಿರಿಯ ಮಗಳು ತನ್ನ ಪತಿಯೊಂದಿಗೆ ಮನೆಗೆ ಬಂದು ಅಜ್ಜನಿಗೆ ಈ ವಿಷಯ ತಿಳಿಸಿದ್ದಳು.
ಕೊನೆಗೆಕುಡಿದ ಮತ್ತಿನಲ್ಲಿದ್ದ ಬಿಜೆಪಿ ಮುಖಂಡ ರಾಜೇಂದ್ರ, ಸಿಟ್ಟಿಗೆದ್ದು ತನ್ನ ಪತ್ನಿಗೆ ಗುಂಡು ಹಾರಿಸಿದ್ದಾನೆ. ಸೊಂಟಕ್ಕೆ ಗುಂಡು ತಗುಲಿದ್ದು, ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಈ ವೇಳೆ ರಾಜೇಂದ್ರನ ಮಗಳು ಮತ್ತು ಅಳಿಯ ಮನೆಯಲ್ಲಿದ್ದು, ಕೊಲೆ ಮಾಡಿದ ಬಳಿಕ ಆರೋಪಿ ಮನೆಯಿಂದ ಓಡಿ ಹೋಗಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸ್ ತಂಡ ಶೋಧ ಆರಂಭಿಸಿದೆ.ಆರೋಪಿ ರಾಜೇಂದ್ರ ಈ ಹಿಂದೆ ಬಿಜೆಪಿಯ ಟಿಟಿ ನಗರ ಮಂಡಲದ ಕ್ಷೇತ್ರದ ಉಪಾಧ್ಯಕ್ಷರಾಗಿದ್ದರು. ಆದರೆ ಪ್ರಸ್ತುತ ಸ್ಥಾನಮಾನದ ಬಗ್ಗೆ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 1 =
Remember me
