ಪುಣೆ:ಕುಡಿದ ಅಮಲಿನಲ್ಲಿ ಬಸ್ ಚಾಲಕರೊಬ್ಬರು ಬಸ್​ ಅನ್ನು ರಿವರ್ಸ್​ ಚಲಾಯಿಸಿದ್ದು, ಇದರಿಂದ ಗಾಬರಿಗೊಂಡ ಪ್ರಯಾಣಿಕರು ಸಹಾಯಕ್ಕಾಗಿ ಜೋರಾಗಿ ಕಿರುಚಾಡಿದ ಘಟನೆ ಭಾನುವಾರ (ಅಕ್ಟೋಬರ್ 22) ಪುಣೆಯ ವೆಟಲ್ ಬಾಬಾ ಚೌಕ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಬಾತ್ಮೀದಾರನೇ ಸಿಸಿಬಿ ಅಧಿಕಾರಿಯಾದ ರೋಚಕ ಕಥೆ..! ಕೊನೆಗೆ ಏನಾಯಿತು ಗೊತ್ತಾ..?
ಮದ್ಯದ ಅಮಲಿನಲ್ಲಿ ವಾಹನವನ್ನು ರಿವರ್ಸ್ ಗೇರ್‌ನಲ್ಲಿ ಚಲಾಯಿಸಿ ಇತರ ವಾಹನಗಳಿಗೆ ಹಾನಿ ಮಾಡಿದ್ದಲ್ಲದೇ, ಪ್ರಯಾಣಿಕರನ್ನು ಭಯಭೀತರನ್ನಾಗಿ ಮಾಡಿದ ಚಾಲಕ ಕೆಲವು ಸಮಯ ಸ್ಥಳೀಯರಲ್ಲಿ ತೀವ್ರ ಆತಂಕವನ್ನು ಉಂಟು ಮಾಡಿದ್ದಾನೆ. ಈ ಘಟನೆ ಮಹಾರಾಷ್ಟ್ರದ ಪುಣೆಯ ವೆಟಲ್ ಬಾಬಾ ಚೌಕ್‌ನಲ್ಲಿ ಸಂಭವಿಸಿದೆ.
50ಕ್ಕೂ ಹೆಚ್ಚು ಪ್ರಯಾಣಿಕರನ್ನು ಒಳಗೊಂಡಿದ್ದ ಬಸ್​ ಅನ್ನು ಚಾಲಕ ಕುಡಿದ ನಶೆಯಲ್ಲಿ ರಿವರ್ಸ್​ ಗೇರ್​ನಲ್ಲಿ ಓಡಿಸಿದ್ದಾನೆ. ಕೂಡಲೇ ಬಸ್​ನಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರು ಚಾಲಕನಿಗೆ ಈ ರೀತಿ ಮಾಡಬೇಡಿ ಎಂದು ಬುದ್ದಿ ಹೇಳಿದರೂ ಸಹ ಆ ಮಾತುಗಳನ್ನು ಲೆಕ್ಕಿಸದೆ ಚಲಾಯಿಸಿದ್ದಾನೆ. ಘಟನೆ ತೀವ್ರವಾಗುವ ಮುನ್ನ ಕೃಷ್ಣ ಜಾಧವ್ ಎಂಬ ಯುವಕ ಬಸ್ಸಿನ ಗಾಜನ್ನು ಒಡೆದು ಚಾಲಕನನ್ನು ಬಸ್​ ನಿಲ್ಲಿಸುವಂತೆ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನೂ ಓದಿ:ಕರ್ನಾಟಕ ಲೋಕಾಯುಕ್ತಗೆ ಬರುವ ಮೊದಲು ಕೂಪಮಂಡೂಕನಾಗಿದ್ದೆ: ಸಂತೋಷ್ ಹೆಗ್ಡೆ
ಕುಡಿದ ಮತ್ತಿನಲ್ಲಿದ್ದ ಬಸ್​ ಚಾಲನೆ ಮಾಡಿದ ಚಾಲಕನನ್ನು ನೀಲೇಶ್ ಸಾವಂತ್ ಎಂದು ಗುರುತಿಸಲಾಗಿದ್ದು, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಲೆ ಕೂಡ ಘಟನೆಯ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಮುನ್ಸಿಪಲ್ ಕಮಿಷನರ್ ಮತ್ತು ಪುಣೆ ಪೊಲೀಸ್ ಕಮಿಷನರ್ ಅವರು ಸಂಪೂರ್ಣ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುವ ಅವಶ್ಯಕತೆಯಿದೆ ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಬರೆದು ಟ್ವಿಟರ್​ನಲ್ಲಿ ಪೋಸ್ಟ್‌ ಮಾಡಿದ್ದಾರೆ,(ಏಜೆನ್ಸೀಸ್).
ಅ.23 ಪ್ರಭಾಸ್​ ಜನ್ಮದಿನ; ಹೊರಬೀಳಲಿದೆ ಬಹುನಿರೀಕ್ಷಿತ ಸಿನಿಮಾದ ಹೊಸ ಅಪ್ಡೇಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
