ಬಿಹಾರ:ವರ ಕಂಠಪೂರ್ತಿ ಕುಡಿದು ಮುಹೂರ್ತದ ಸಮಯಕ್ಕೆ ಸರಿಯಾಗಿ ಬರದೆ ಕುಡಿದ ಮತ್ತಿನಲ್ಲಿ ತಡವಾಗಿ ಬಂದಿದದ್ದಕ್ಕೆ ಕೋಪಗೊಂಡ ವಧು ಮದುವೆ ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಈ ಘಟನೆ ಬಿಹಾರದ ಕತಿಹಾರ್​ ಜಿಲ್ಲೆಯ ಕುರ್ಸೆಲಾ ಗ್ರಾಮದಲ್ಲಿ ನಡೆದಿದೆ.
ನಡೆದಿದ್ದೇನು?:ಮಂಜಿತ್ ಚೌಧರಿ ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್ ನಿವಾಸಿ. ಈತನಿಗೆ ಮನಿಷಾ ಕುಮಾರಿ ಎನ್ನುವ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಕುರ್ಸೇಲದ ಕಲ್ಯಾಣ ಮಂಟಪದಲ್ಲಿ ವಧುವಿನ ಕುಟುಂಬಸ್ಥರು ಮದುವೆ ತಯಾರಿ ನಡೆಸಿದ್ದರು. ಆದರೆ ವರ ಮಾತ್ರ ಮಂಟಪಕ್ಕೆ ಬರಲಿಲ್ಲ. ಇದರಿಂದ ಕುಪಿತಗೊಂಡ ವಧು ಮನಿಷಾ ಕುಮಾರಿ ಕುಟುಂಬಸ್ಥರು ಮಂಜಿತ್‌ಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ರಸ್ತೆಯಲ್ಲಿ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದಿದ್ದನು. ಬೆಳಗ್ಗೆ ಮದುವೆ ಸ್ಥಳಕ್ಕೆ ಕರೆತಂದಾಗ ಆತ ಪಾನಮತ್ತನಾಗಿದ್ದ. ಭಾವಿ ಪತಿಯ ಸ್ಥಿತಿ ನೋಡಿ ಮನೀಶಾ ಮದುವೆಯಾಗಲು ನಿರಾಕರಿಸಿದಳು.
ಮದುವೆ ಮಂಟಪಕ್ಕೆ ಬರುತ್ತಿದ್ದ ವೇಳೆ ಮಂಜಿತ್ ಮದ್ಯ ಸೇವಿಸಿದ್ದಾನೆ. ನಾನು ಮದುವೆಯಾಗುವುದಿಲ್ಲ. ಮದುವೆ ಖರ್ಚಿಗೆ 4 ಲಕ್ಷ ರೂ.ಗಳನ್ನು ನನ್ನ ಮನೆಯವರಿಗೆ ಕೊಡುವವರೆಗೂ ವರನ ತಂದೆ-ತಾಯಿಯನ್ನು ಬಿಡುವುದಿಲ್ಲ ಎಂದು ವಧು ಹೇಳಿದ್ದಾರೆ. ಮಂಜಿತ್ ಮತ್ತು ಆತನ ಪೋಷಕರನ್ನು ಒತ್ತೆಯಾಳಾಗಿಟ್ಟು ಹಣ ಪಾವತಿಸುವವರೆಗೂ ಇರಿಸಲಾಗಿತ್ತು. ಇದಕ್ಕೆ ಸ್ಥಳೀಯರು ಸಹ ಒಪ್ಪಿಗೆ ಸೂಚಿಸಿದ್ದಾರೆ.
ವರನ ಸಂಬಂಧಿಕರು ವಧುವಿನ ಕುಟುಂಬಕ್ಕೆ ಪಾವತಿಸ ಬೇಕಾದ ಹಣವನ್ನು ವ್ಯವಸ್ಥೆ ಮಾಡಿದರು. ಆ ಬಳಿಕ ವಧುವಿನ ಮನೆಯವರು ಮದುವೆ ಮಂಟಪದಿಂದ ಹೊರಬರಲು ಅವಕಾಶ ಮಾಡಿಕೊಟ್ಟರು. ಈ ಸಂಬಂಧ ವಧು ಪೊಲೀಸರಿಗೂ ದೂರು ನೀಡಿರಲಿಲ್ಲ.
ಮಾಧ್ಯಮದವರ ಬಳಿ ಮಾತನಾಡಿದ ಮಂಜಿತ್ .. ನಾನು ಮದುವೆ ಸ್ಥಳಕ್ಕೆ ಬರುತ್ತಿದ್ದಾಗ ನನ್ನ ಸ್ನೇಹಿತರು ಕೆಲವರು ಕಾರಿನಲ್ಲಿ ಬಂದು ಮದ್ಯ ಕುಡಿಸುವಂತೆ ಒತ್ತಾಯಿಸಿದರು. ಅವರು ನನಗೆ ಕುಡಿಯಲು ಏನು ಮಾಡಿದರು ಎಂದು ನನಗೆ ನಿಖರವಾಗಿ ತಿಳಿದಿಲ್ಲ. ಮದುವೆ ಮಂಟಪಕ್ಕೆ ತಡವಾಗಿ ಬಂದೆ. ಮನೀಶಾ ನನ್ನನ್ನು ಮದುವೆಯಾಗಲು ನಿರಾಕರಿಸಿದರೂ ನಾನು ನಶೆಯಲ್ಲಿದ್ದೆ ಎಂದು ಮಂಜಿತ್ ಹೇಳಿದ್ದಾರೆ.
ಆದರೆ ಮಂಜಿತ್ ವಿಪರೀತ ಕುಡುಕ, ಆತನ ಮನೆಯವರು ಸುಳ್ಳು ಹೇಳುತ್ತಿದ್ದಾರೆ. ಮದ್ಯವ್ಯಸನಿಗೆ ಮದುವೆ ಮಾಡಿ ಕೊಟ್ಟು ತಂಗಿಯ ಜೀವನ ಹಾಳು ಮಾಡಬೇಕಾ’ ಎಂದು ವಧುವಿನ ಸಹೋದರ ಹೇಳಿದ್ದಾರೆ.
ಹೆಂಡತಿಯರು ಬಾಡಿಗೆಗೆ ಸಿಗ್ತಾರೆ!; ಹಣ ಕೊಟ್ಟರೆ ಸಾಕು, ಕರ್ಕೊಂಡು ಹೋಗ್ತಾ ಇರಬಹುದು….

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + 20 =
Remember me
