ನವದೆಹಲಿ:ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ರಾಷ್ಟ್ರದ ಮೂಲೆ ಮೂಲೆಗಳಲ್ಲೂ ಪ್ರತಿಭಾವಂತರಿದ್ದಾರೆ. ಆದರೆ, ಅವಕಾಶ ಸೀಮಿತವಾಗಿದೆ. ಹೀಗಾಗಿ ಎಷ್ಟೋ ಪ್ರತಿಭೆಗಳು ಎಲೆಮರೆ ಕಾಯಿಯಂತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದ್ದು, ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬರುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬ ತನ್ನ ಸುಮಧುರ ಗಾಯನದಿಂದ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾರೆ.
24 ವರ್ಷದ ಯುವಕ ಜೈಲಿನಲ್ಲಿದ್ದುಕೊಂಡೇ ಹಾಡಿರುವ ಭೋಜ್‌ಪುರಿ ಹಾಡು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ, ಯುವಕನನ್ನು ಕನ್ನಯ್ಯ ಕುಮಾರ್ ಎಂದು ಗುರುತಿಸಲಾಗಿದೆ. ಮದ್ಯ ಸೇವಿಸಿದ್ದಕ್ಕಾಗಿ ಮತ್ತು ಬಿಹಾರದ ಮದ್ಯ ನಿಷೇಧ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ. ಆದರೆ, ಕನ್ನಯ್ಯ, ಜೈಲಿನಲ್ಲಿದ್ದುಕೊಂಡೇ ಭೋಜ್‌ಪುರಿ ಹಾಡನ್ನು ಸುಂದರವಾಗಿ ಹಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ವಿಡಿಯೋವನ್ನು ಡಾ. ಶಲಭ್ ಮಣಿ ತ್ರಿಪಾಠಿ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ, ಕುಮಾರ್ ಜನಪ್ರಿಯ ಭೋಜ್‌ಪುರಿ ಹಾಡನ್ನು ಹಾಡುವುದನ್ನು ಕೇಳಬಹುದು, “ದರೋಗಾಜಿ ಹೋ.. ಸೋಚಿ, ಸೋಚಿ ಜಿಯಾ ಹಮ್ರೋ ಕಹೆ ಘಬ್ರತಾ” ಎಂಬ ಭೋಜಪುರಿ ಹಾಡನ್ನು ಹಾಡಿದ್ದಾರೆ.
TV के पूर्व सहयोगी@cmohan_patके माध्यम से संपर्क करने पर पता चला कि ये कैमूर का गरीब युवक कन्हैया है,नशे में मिलने पर बिहार पुलिस ने इसे जेल भेजा,इनकी कानूनी मदद के उपरांत इन्हें सुधारने का प्रयास होगा,साथ ही UP के मशहूर त्रिनेत्र स्टूडियो में गाने का अवसर भी उपलब्ध कराया जाएगाpic.twitter.com/Id8HrJV2HZ
— Dr. Shalabh Mani Tripathi (@shalabhmani)January 8, 2023

ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕನ್ನಯ್ಯ ಧ್ವನಿಗೆ ಫಿದಾ ಆಗಿದ್ದಾರೆ. ಅನನ್ಯ ಪ್ರತಿಭೆಯು ಅನೇಕ ಸಂಗೀತ ಪ್ರೇಮಿಗಳ ಗಮನವನ್ನು ಸೆಳೆದಿದೆ. ಹಾಡು ಕೇಳಿ ಸಂಗೀತ ಉದ್ಯಮದಿಂದ ಅನೇಕ ಆಫರ್​ಗಳು ಬರುತ್ತಿವೆ. ಆತನನ್ನು ಬಂಧಿಸಿದ ಜೈಲು ಅಧಿಕಾರಿಗಳು ಕೂಡ ಆತನ ಕೌಶಲ್ಯವನ್ನು ಶ್ಲಾಘಿಸಿ, ವಾಹ್ ವಾಹ್ ಎಂದು ಹೇಳುವುದನ್ನು ಕೇಳಬಹುದು.
ವಿಡಿಯೋ ಶೇರ್​ ಮಾಡಿದಾಗಿನಿಂದ ಈವರೆಗೂ 8 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 8 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದು, ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ ಗಾಯಕ ಅಂಕಿಒತ್​ ತಿವಾರಿ ಕೂಡ ಧ್ವನಿಗೆ ಫಿದಾ ಆಗಿದ್ದು, ತನ್ನ ಮ್ಯೂಸಿಕ್​ ಕಂಪನಿಗೆ ಹಾಡಲು ಆಫರ್​ ನೀಡಿದ್ದಾರೆ. ಅಲ್ಲದೆ, ಜೈಲಿನಿಂದ ಬಿಡುಗಡೆ ಮಾಡಿಸಲು ಕಾನೂನು ನೆರವು ನೀಡುವುದಾಗಿಯೂ ಹೇಳಿದ್ದಾರೆ.
ಸೋಷಿಯಲ್ ಮೀಡಿಯಾ ಸೆನ್ಸೇಷನ್ ರಾಣು ಮೊಂಡಲ್ ಅವರು ಲತಾ ಮಂಗೇಶ್ಕರ್ ಅವರ ‘ಯೇ ಪ್ಯಾರ್ ಕಾ ನಗ್ಮಾ ಹೈ’ ಹಾಡಿನ ಮೂಲಕ ರಾತ್ರೋರಾತ್ರಿ ಮನ್ನಣೆ ಗಳಿಸಿದ್ದರು. ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾ ಹಾಡಿದ ವೈರಲ್​ ಆಗಿ, ಬಾಲಿವುಡ್​ನಿಂದ ಆಫರ್​ಗಳು ಬಂದಿದ್ದವು. ಇದೀಗ ಕನ್ನಯ್ಯ ಪಾಲಿಗೆ ಅದೃಷ್ಟ ಒದಗಿ ಬಂದಿದೆ.(ಏಜೆನ್ಸೀಸ್​)
ನರೇಶ್​-ಪವಿತ್ರಾ ಲೋಕೇಶ್​ ಮದುವೆ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಟಾಲಿವುಡ್​ನ ಹಿರಿಯ ನಿರ್ಮಾಪಕ!

ನಿಮ್ಮ ಕಣ್ಣಿಗೊಂದು ಸವಾಲ್​: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ಗೊರಿಲ್ಲಾ ಪತ್ತೆ ಹಚ್ಚಿ!

64ನೇ ವಯಸ್ಸಿನಲ್ಲಿ ಮೂರನೇ ಮದುವೆ! ಹಿರಿಯ ನಟಿ ಜಯಸುಧಾ ಕೊಟ್ಟ ಸ್ಪಷ್ಟನೆ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 16 =
Remember me
