ಲಖನೌ:ಮಳೆ ಬರುತ್ತಿದ್ದರು ವ್ಯಕ್ತಿಯೊಬ್ಬರು ರಸ್ತೆಯ ಮಧ್ಯದಲ್ಲಿ ಕುರ್ಚಿಯ ಮೇಲೆ ಕುಳಿತು ವಾಹನಗಳ ಓಡಾಟಕ್ಕೆ ತೊಂದರೆಯನ್ನುಂಟು ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಶ್ಚರ್ಯ ಎಂದರೆ ಪೊಲೀಸ್ ಬೂತ್ ಎದುರು ವ್ಯಕ್ತಿ ಈ ರೀತಿ ವರ್ತಿಸಿದ್ದಾನೆ. ಬಹುಶಃ ಅಲ್ಲಿ ಯಾವೊಬ್ಬ ಪೊಲೀಸರು ಇರಲಿಲ್ಲ ಎಂದು ಕಾಣಿಸುತ್ತದೆ. ಕೊನೆಗೆ ಆ ರಸ್ತೆಯಲ್ಲಿ ಬಂದ ಟ್ರಕ್​​ವೊಂದು ಆತನಿಗೆ ಡಿಕ್ಕಿ ಹೊಡಿದಿದೆ. ​
ಇದನ್ನು ಓದಿ:ಜೆಸಿಬಿಯಿಂದ ಪ್ರವಾಹದಲ್ಲಿ ಸಿಲುಕಿದ 9 ಮಂದಿ ರಕ್ಷಣೆ; ಈ ರಿಯಲ್​ ಹೀರೋ ಕೆಲಸಕ್ಕೆ ಎಲ್ಲೆಡೆ ಶ್ಲಾಘನೆ
ಸದ್ಯ ಈ ವಿಡಿಯೋ ಉತ್ತರ ಪ್ರದೇಶದ ಪ್ರತಾಪಗಢದ್ದು ಎನ್ನಲಾಗಿದೆ. 17 ಸೆಕೆಂಡ್​ಗಳಿರುವ ಈ ಕ್ಲಿಪ್​ನಲ್ಲಿ ಜನರು ಮತ್ತು ವಾಹನಗಳು ಓಡಾಡುವ ರಸ್ತೆಯಲ್ಲಿ ಕಪ್ಪು ಬಣ್ಣದ ಶಾರ್ಟ್ಸ್​​ ಧರಿಸಿ ಬೇರೆ ಯಾವುದೇ ಬಟ್ಟೆ ತೊಡದೆ ರಸ್ತೆ ಮಧ್ಯದಲ್ಲಿ ಕುರ್ಚಿ ಮೇಲೆ ಕುಳಿತಿರುವುದನ್ನು ಕಾಣಬಹುದು. ಅವರನ್ನು ಅಲ್ಲಿ ಓಡಾಡುವವರೆಲ್ಲಾ ನೋಡುತ್ತಾ ಅಪಹಾಸ್ಯ ಮಾಡಿದರು ಆ ವ್ಯಕ್ತಿ ತನಗು ಅದಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ಕುಳಿತಿದ್ದಾನೆ. ಅಷ್ಟರಲ್ಲಿ ಅದೇ ರಸ್ತೆಯಲ್ಲಿ ಬಂದ ಟ್ರಕ್​ ಒಂದು ಆತನಿಗೆ ಡಿಕ್ಕಿ ಹೊಡೆದಿದೆ. ಆ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ಅಲ್ಲಿದ್ದವರು ಟ್ರಕ್ ಚಾಲಕನಿಗೆ ಸಿಗ್ನಲ್ ಮಾಡಿ ಮುಂದೆ ಹೋಗುವಂತೆ ಹೇಳಿದ್ದಾರೆ. ಕೆಳಗೆ ಬಿದ್ದವನು ಸುತ್ತ ನೋಡುತ್ತಾ ನಾನೇಗೆ ಬಿದ್ದೆ ಎಂದು ಆಲೋಚಿಸಿತ್ತಿದ್ದಾನೆ ಎನ್ನುವುದು ವಿಡಿಯೋದಲ್ಲಿ ನೋಡಬಹುದು.
उत्तर प्रदेश के प्रतापगढ़ जिले का एक वीडियो सोशल मीडिया पर खूब चर्चा में है। वीडियो में देखा जा सकता है कि एक व्यक्ति नशे की हालत में दबंगई के साथ, पुलिस बूथ के सामने, सड़क के बीचोंबीच कुर्सी डालकर बैठा हुआ है। इसी दौरान, पीछे से एक तेज रफ्तार ट्रक आता है और उस व्यक्ति को टक्कर…pic.twitter.com/vUFtKkOPun
ಘಟನೆ ಬಳಿಕ ಆ ವ್ಯಕ್ತಿಗೆ ಗಾಯವಾಗದೆ ಸಂಪೂರ್ಣವಾಗಿ ಚೆನ್ನಾಗಿದ್ದಾನೆ ಎಂಬುದು ತಿಳಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಟ್ರಕ್ ಚಾಲಕ ಸರಿಯಾದ ಕೆಲಸ ಮಾಡಿದ್ದಾರೆ, ಆ ವ್ಯಕ್ತಿಗೆ ಏನಾದರೂ ಆಗಿದ್ದರೆ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿತ್ತು ಆಗ ಟ್ರಕ್ ಚಾಲಕ ಪರಾರಿಯಾಗಬೇಕಿತ್ತು, ಕೆಳಗೆ ಬಿದ್ದ ವ್ಯಕ್ತಿ ಸಿಂಹಾಸನದಿಂದ ನನ್ನನ್ನು ಕೆಳಗಿಳಿಸಿದವರು ಯಾರು ಎಂದು ಆಶ್ಚರ್ಯ ಪಡುತ್ತಿದ್ದಾನೆ ಎಂದು ಹೀಗೆ ಕಾಮೆಂಟ್​ ಮಾಡಿದ್ದಾರೆ.
ವಿಡಿಯೋ ನೋಡಿ ವಿಚಾರ ತಿಳಿದು ತನಿಖೆ ನಡೆಸಿದ ಪೊಲೀಸರು ಆ ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದು, ಆತನನ್ನು ಆತನ ಕುಟುಂಬಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್​)
ಮಾಲಿವುಡ್​ನಲ್ಲಿ #Metoo; ಇದೊಂದು ಐತಿಹಾಸಿಕ ಕ್ಷಣ ಎಂದ ನಟಿ ಪಾರ್ವತಿ ಮೆನನ್​​
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 7 =
Remember me
