ಎತಾವಾ, ಉತ್ತರ ಪ್ರದೇಶ :ಜನ ಮರುಳೋ, ಜಾತ್ರೆ ಮರುಳೋ ಎನ್ನುವುದು ಸುಮ್ಮನೆ ಅಲ್ಲ. ಗುಂಪು ಸೇರಿದಾಗ ಒಮ್ಮೊಮ್ಮೆ ನಡೆಯಬಾರದ ಘಟನೆಗಳು ನಡೆಯುತ್ತವೆ. ಅಂಥದ್ದೇ ಒಂದು ದುರದೃಷ್ಟಕರ ಘಟನೆ ಹೋಳಿ ಆಚರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶದಿಂದ ವರದಿಯಾಗಿದೆ.
ಎತಾವಾ ನಗರದ ಮೇವತಿ ತೋಲಾ ಪ್ರದೇಶದಲ್ಲಿ ತಮ್ಮ ಮನೆಯ ಮುಂದೆ ಭಾಂಗ್ ಕುಡಿದು ಹೋಳಿ ಆಚರಿಸುತ್ತಿದ್ದ ಜನರನ್ನು ವಿರೋಧಿಸಿದ 60 ವರ್ಷದ ವೃದ್ಧೆಯನ್ನು ಥಳಿಸಿ ಸಾಯಿಸಿರುವ ಘಟನೆ ನಡೆದಿದೆ. ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಮತ್ತಿನಲ್ಲಿದ್ದ ಜನರ ಗುಂಪು, ಮೃತಳ ಮನೆಯೊಳಗೆ ನುಗ್ಗಿ ಆಕೆಯ ಮೇಲೆ ಕಲ್ಲು ಮತ್ತು ಕೋಲುಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಇದನ್ನೂ ಓದಿ:ರಿಯಾದ್‌ನಲ್ಲಿದ್ದ ಪಾರ್ಶ್ವವಾಯು ಪೀಡಿತ ಸುರಕ್ಷಿತವಾಗಿ ತಾಯ್ನಡಿಗೆ
ಆಕೆಯನ್ನು ಬಚಾವ್ ಮಾಡಲು ಹೋದ ಕುಟುಂಬದ ಇತರ ಸದಸ್ಯರ ಮೇಲೂ ಆ ಗುಂಪು ಹಲ್ಲೆ ಮಾಡಿದೆ. ಹೀಗಾಗಿ ಮನೆಯ ಇಬ್ಬರು ಮಹಿಳೆಯರು ಮತ್ತು ಮೂರು ಮಕ್ಕಳು ಕೂಡ ಗಾಯಗೊಂಡಿದ್ದಾರೆ. ಈ ಬಗ್ಗೆ ಕೇಸು ದಾಖಲಿಸಿದ್ದು, ಹಲ್ಲೆಕೋರ ಗುಂಪಿನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಎಎಸ್ಪಿ ಪ್ರಶಾಂತ್​ಕುಮಾರ್ ತಿಳಿಸಿದ್ದಾರೆ.
ಎಕಡೀಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಪ್ರಸಂಗದಲ್ಲಿ ಕುಡಿದ ಮತ್ತಿನಲ್ಲಿ ಯುವಕನೊಬ್ಬ ಅತಿವೇಗದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದು, ಆರು ಜನರು ಗಾಯಗೊಂಡಿದ್ದಾರೆ. ಟ್ರ್ಯಾಕ್ಟರ್ ವಿದ್ಯುತ್ ಕಂಭಕ್ಕೆ ಡಿಕ್ಕಿ ಹೊಡೆದು ಜಖಂಗೊಂಡಿದೆ. ಸ್ಥಳೀಯರು ಯುವಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.(ಏಜೆನ್ಸೀಸ್)
ಮನೆಯಲ್ಲೇ ಬಣ್ಣದ ಹಬ್ಬ : ನಟ ಅಕ್ಷಯ್​​ ಕುಮಾರ್

VIDEO | ಹೊಸದಾಗಿ ಬಂದಿದೆ… ಮೂಗಿಗೆ ಮಾತ್ರ ಹಾಕುವ ಮಾಸ್ಕ್ !

‘ಸುಳ್ಳು ಸುದ್ದಿ’ ಎಂದು ಹೌಹಾರಿದ ಕಾಂಗ್ರೆಸ್ ನಾಯಕ… ಮತ್ತೆ ‘ಸಾರಿ’ ಕೇಳಿದ್ದೇಕೆ ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
