ಮಧ್ಯಪ್ರದೇಶ:ಪಾನಮತ್ತ ಪೊಲೀಸ್ ಪೇದೆಯೊಬ್ಬ ರಸ್ತೆಮಧ್ಯೆ ವ್ಯಕ್ತಿಯೊಬ್ಬನೊಂದಿಗೆ ಗಲಾಟೆ ಮಾಡುತ್ತಿರುವ ವಿಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಡಿ.23ರಂದು ಹರ್ದಾ ಜಿಲ್ಲೆಯ ಪೊಲೀಸ್ ಪೇದೆಯೊಬ್ಬರು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನೊಂದಿಗೆ ಗಲಾಟೆ ಮಾಡಿ, ಎಲ್ಲರ ಮುಂದೆಯೇ ತಮ್ಮ ಸಮವಸ್ತ್ರವನ್ನು ಬಿಚ್ಚಿ ಎಸೆದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೇದೆಯನ್ನು ಎಸ್​​ಪಿ ಮನೀಶ್ ಕುಮಾರ್ ಅಗರ್ವಾಲ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಸದ್ಯ ಅಶಿಸ್ತು ತೋರಿದ ಪೇದೆ ಸುಶೀಲ್ ಮಾಂಡ್ವಿ ಎಂಬಾತನನ್ನು ಹರ್ದಾ ಎಂಬಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಈ ವೇಳೆ ಮದ್ಯಪಾನ ಸೇವಿಸಿ ಬಂದಿದ್ದಾನೆ. ನಂತರ ವ್ಯಕ್ತಿಯೊಬ್ಬನೊಂದಿಗೆ ಕುಡಿತದ ಅಮಲಿನಲ್ಲಿ ಗಲಾಟೆ ಮಾಡಿಕೊಂಡು ಧರಿಸಿದ್ದ ಪೊಲೀಸ್ ಯೂನಿಫಾರಂ ಅನ್ನೇ ಕೊನೆಗೆ ಕಿತ್ತೆಸೆದಿದ್ದಾನೆ. ಇವರಿಬ್ಬರ ಜಗಳವನ್ನು ಜನರು ಗುಂಪುಗೂಡಿ ನೋಡಿದ್ದಾರೆ.
वीडियो देखिये : वर्दी उतार कर फेंकते दिख रहे आरक्षक को एसपी ने किया निलंबित#mpnews#hardanews#hardapolice#Naiduniahttps://t.co/gj2bsMBIhlpic.twitter.com/uGXsm9YS1R— NaiDunia (@Nai_Dunia)December 23, 2022
वीडियो देखिये : वर्दी उतार कर फेंकते दिख रहे आरक्षक को एसपी ने किया निलंबित#mpnews#hardanews#hardapolice#Naiduniahttps://t.co/gj2bsMBIhlpic.twitter.com/uGXsm9YS1R
ಸಂಜೆ 5 ಗಂಟೆ ಸುಮಾರಿಗೆ ನಗರದ ರೈಲು ನಿಲ್ದಾಣದ ಬಳಿ ಕುಡಿದ ಮತ್ತಿನಲ್ಲಿ ಪೇದೆ ವ್ಯಕ್ತಿಯೊಬ್ಬನೊಂದಿಗೆ ಜಗಳ ಮಾಡಿಕೊಂಡಿದ್ದಾನೆ ಎಂದು ಎಂದು ಪ್ರತ್ಯಕ್ಷದರ್ಶಿ ಮುಜಾಹಿದ್ ಅಲಿ ತಿಳಿಸಿರುವುದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
