ಮುಂಬೈ:ಬಾಲಿವುಡ್​ನಲ್ಲಿ ಹಲವು ಚಿತ್ರಗಳು ಸೂಪರ್ ಹಿಟ್ ಆಗುತ್ತಿವೆ. ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ. ಬ್ಲಾಕ್‌ಬಸ್ಟರ್ ಚಿತ್ರ ಗದರ್ 2 ಯಶಸ್ಸಿನ ಸಂತೋಷದಲ್ಲಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಕುಂಠ ಪೂರ್ತಿ ಕುಡಿದು ಮದ್ಯದ ನಶೆಯಲ್ಲಿ ಮಂಗಳವಾರ ರಾತ್ರಿ ಮುಂಬೈನ ಜುಹು ಸರ್ಕಲ್‌ನಲ್ಲಿ ರಸ್ತೆ ತುಂಬಾ ತೂರಾಡುತ್ತಾ ಓಡಾಡುತ್ತಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಮದ್ಯಪಾನ ಮಾಡಿರುವ ನಟ ಸನ್ನಿ ಡಿಯೋಲ್ ರಸ್ತೆಯ ಮಧ್ಯದಲ್ಲಿ ತೂರಾಡುತ್ತಾ ಓಡಾಡಿದ್ದಾರೆ. ಕ್ಯಾಶುಯಲ್ ಬಿಳಿ ಶರ್ಟ್ ಮತ್ತು ಜೀನ್ಸ್ ಧರಿಸಿರುವ ಸನ್ನಿ ಡಿಯೋಲ್ ರಸ್ತೆಯ ಮಧ್ಯದಲ್ಲಿ ತೂರಾಡುತ್ತಾ ನಡೆಯುತ್ತಿದ್ದರು. ಇದನ್ನು ಗಮನಿಸಿದ ವ್ಯಕ್ಯಿಯೊಬ್ಬ ಆಟೋ ನಿಲ್ಲಿಸಿ ಬಂದು ಸನ್ನಿ ಡಿಯೋಲ್ ಅವರನ್ನು ತನ್ನ ಆಟೋದೊಳಗೆ ಕುಳಿತುಕೊಳ್ಳಲು ಸಹಾಯ ಮಾಡುತ್ತಾನೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.
https://twitter.com/single_soul1/status/1732105943557546327
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ನಟನ ಅಭಿಮಾನಿಗಳು ಅವರು ನಿಜವಾಗಿಯೂ ಕುಡಿದಿದ್ದಾರೆಯೇ ಅಥವಾ ಅವರ ಮುಂಬರುವ ಚಿತ್ರಗಳ ಚಿತ್ರೀಕರಣವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದು ಸಿನಿಮಾ ಚಿತ್ರೀಕರಣ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.
ಈ ವಿಡಿಯೋ ಸನ್ನಿ ಡಿಯೋಲ್ ಅವರ ಮುಂದಿನ ಸಿನಿಮಾ ಚೀತ್ರೀಕರಣ ವಿಡಿಯೋ ಆಗಿದೆ. ಶಶಾಂಕ್ ಉದ್ರಾಪುರ್ಕರ್ ನಿರ್ದೇಶನದ ತನ್ನ ಮುಂಬರುವ ಚಿತ್ರ ಸಫರ್‌ನ  #SAFAR ಚಿತ್ರೀಕರಣ ಮಾಡುತ್ತಿದ್ದಾರೆ ಎನ್ನಲಾಗಿದೆ.
Haters are spreading fake news regarding this video that Sunny paji spotted drinker at juhu .@iamsunnydeolis shooting#Safardirected by shashank udrapurkar ❤️❤️❤️.#SunnyDeol#Film#Newpic.twitter.com/RtPDKJH8p4
— #Lahore1947 #SunnyDeol #BobbyDeol #Dharam #Kanguva (@LegendDeols)December 6, 2023

ಸನ್ನಿ ತನ್ನ ಸಂದರ್ಶನವೊಂದರಲ್ಲಿ ತಾನು ಕುಡಿಯುವವನು ಅಲ್ಲ. ಜನರು ಮದ್ಯವನ್ನು ಹೇಗೆ ಇಷ್ಟಪಡುತ್ತಾರೆ ಮತ್ತು ಸಹಿಸಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು  ಈ ಹಿಂದೆ ಒಮ್ಮೆ ಹೇಳಿದ್ದರು.
ಸನ್ನಿಯ ಗದರ್ 2, ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆಗಳನ್ನು ಛಿದ್ರಗೊಳಿಸಿತು ಮತ್ತು ಇದು 2023 ರ ಟಾಪ್ 5 ಅತಿ ಹೆಚ್ಚು ಗಳಿಕೆಯ ಚಲನಚಿತ್ರಗಳಲ್ಲಿ ಒಂದಾಗಿದೆ.
Gold, Silver Price; 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ ಕೊಂಚ ಇಳಿಕೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
