ಮುಂಬೈ:ಕುಡಿದ ಮತ್ತಿನಲ್ಲಿ ಗಗನಸಖಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್​ ಪ್ರಜೆಯನ್ನು ಮುಂಬೈ ಪೊಲೀಸರು ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ಧಾರೆ.
ಇಂಡಿಗೋ ವಿಮಾನ(GE-1052)ದಲ್ಲಿ ಗುರುವಾರ ಘಟನೆ ನಡೆದಿದ್ದು ಬಂಧಿತ ಆರೋಪಿಯನ್ನು ಕ್ಲಾಸ್​ ಎರಿಕ್​ ಜೊನಾಸ್​ ವೆಸ್ಟ್​​ಬರ್ಗ್​​(63) ಎಂದು ತಿಳಿದು ಬಂದಿದೆ.
ಬ್ಯಾಂಕಾಕ್​ನಿಂದ ಪ್ರಯಾಣಿಸುವ ವೇಳೆ ಆರೋಪಿ ಸಿಬ್ಬಂದಿ ಊಟ ಬಡಿಸುವ ಸಮಯದಲ್ಲಿ ಅನುಚಿತವಾಗಿ ವರ್ತಿಸಿದ್ದು ಈ ಬಗ್ಗೆ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಎಚ್ಚರಿಕೆ ಬಳಿಕ ಸುಮ್ಮನಾಗದ ಆರೋಪಿಯೂ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಆಗ ಗಗನ ಸಖಿಯೂ ತನ್ನ ರಕ್ಷಣೆಗಾಗಿ ಜೂಗಿಕೊಂಡಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಒತ್ತುವರಿ ತೆರವು ಕಾರ್ಯಾಚರಣೆಗೆ ವಿರೋಧ; ಗುಡಿಸಿಲಿಗೆ ಬೆಂಕಿ ಹಚ್ಚಿ ಪ್ರಾಣ ಕಳೆದುಕೊಳ್ಳಲು ಮುಂದಾದ ಮಹಿಳೆ
ಗಗನಸಖಿ ಸಹಾಯಕ್ಕೆ ದಾವಿಸಿದವರ ಜೊತೆ ಆರೋಪಿಯೂ ವಾಗ್ವಾದ ನಡೆಸಿದ್ದು ಸಹ ಪ್ಯಾಸೆಂಜರ್ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ವಿಮಾನ ಮುಂಬೈನಲ್ಲಿ ಲ್ಯಾಂಡಿಂಗ್​ ಆಗುತ್ತಿದ್ದಂತೆ ಸಿಬ್ಬಂದಿ ಆರೋಪಿಯನ್ನು ಸಹರ್​ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅಂಧೇರಿ ಮೆಟ್ರೋಪಾಲಿಟನ್​ ಕೋರ್ಟ್​ಗೆ ಹಾಜರುಪಡಿಸಿದ್ದಾರೆ ಮತ್ತು ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ 20,000 ಸಾವಿರ ದಂಡವಬನ್ನು ವಿಧಿಸಿ ಜಾಮೀನಿನ ಮೇಲೆ ಬಿಟ್ಟು ಕಳುಹಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
