ಚೆನ್ನೈ:ಕುಡಿದ ಮತ್ತಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಆರು ಮಹಿಳೆಯ ಮೇಲೆ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿ, ಅವರನ್ನು ಬಂಧಿಸಿದ್ದಾರೆ. ಆರು ಮಹಿಳೆಯರು ಕೂಡ ಚೆನ್ನೈನ ಕನ್ನಗಿ ನಗರದ ನಿವಾಸಿಗಳು ಎಂದು ತಿಳಿದುಬಂದಿದೆ.
ಈ ಘಟನೆ ಸೋಮವಾರ ನಡೆದಿದ್ದು, ಮಹಿಳೆಯರೆಲ್ಲರು ಕ್ಯಾಟರಿಂಗ್​ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿದ ಬಳಿಕ ಎಲ್ಲರು ಮದ್ಯ ಸೇವನೆ ಮಾಡಿದರು. ಇದೇ ಮತ್ತಿನಲ್ಲಿ ಜನನಿಬಿಡ ರಸ್ತೆ ಪ್ರವೇಶಿಸಿದ ಮಹಿಳೆಯರು ಮತ್ತಿನಲ್ಲಿ ಸಾರ್ವಜನಿಕವಾಗಿಯೇ ಗದ್ದಲ ಸೃಷ್ಟಿಸಿದರು. ವಾಹನಗಳಿಗೆ ಅಡ್ಡ ಹಾಕಿ ಸಂಚಾರಕ್ಕೆ ಅಡ್ಡಿಪಸಿದರು.
ಇದೇ ಸಂದರ್ಭದಲ್ಲಿ ಸಂಬಳ ಹಂಚಿಕೆ ವಿಚಾರವಾಗಿ ಮಹಿಳೆಯರ ನಡುವೆ ವಾಗ್ವಾದ ಕೂಡ ನಡೆಯಿತು. ಅಲ್ಲದೆ, ಘರ್ಷಣೆಗೂ ಕಾರಣವಾಯಿತು. ಆರೋಪಿಗಳು ಬಸ್ ಸೇರಿದಂತೆ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದರು. ಇವರ ವರ್ತನೆ ನೋಡಿ ಬೇಸತ್ತ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಮೊಬೈಲ್​ನಲ್ಲಿ ಮಾತನಾಡ್ತಿದ್ದ ಮಹಿಳೆಗೆ ಮುತ್ತಿಟ್ಟು ಪರಾರಿಯಾಗಿದ್ದ ನಟೋರಿಯಸ್​ ಸೀರಿಯಲ್​ ಕಿಸ್ಸರ್ ಅಂದರ್​!
ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಚಾರ ತಡೆ ಮತ್ತು ಗಲಾಟೆ ಮಾಡಿದ್ದಕ್ಕಾಗಿ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದೆಡೆ ಮಹಿಳೆಯರ ಹೈಡ್ರಾಮದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.(ಏಜೆನ್ಸೀಸ್​)
ನಾವ್ಯಾರು ತಾಲಿಬಾನ್​ಗಳಲ್ಲ..ಉರಿಗೌಡ, ನಂಜೇಗೌಡ ವಾಸ್ತವಿಕ ಸತ್ಯ ಮನವರಿಕೆ ಮಾಡಿಕೊಡುತ್ತೇವೆ; ಸಿಟಿ ರವಿ

ಸಹಕಾರಿ ಸಂಸ್ಥೆಯ ಸಾಲ ಬಾಧೆ ತಾಳಲಾರದೆ ವಿಷ ಸೇವಿಸಿ ಪ್ರಾಣ ಬಿಟ್ಟ ರೈತ

ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟ್; ನಟ ಚೇತನ್​ಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
