ಕಾನ್ಪುರ:ಬೇಕರಿ ಮಾಲೀಕನ ಜತೆ ಪಾನಮತ್ತ ಪೊಲೀಸ್​ ಅಧಿಕಾರಿಯೊಬ್ಬರು ವಾಗ್ವಾದಕ್ಕೆ ಇಳಿದು, ಗಲಾಟೆ ಮಾಡಿರುವುದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಧಿಕಾರಿಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಾಲೀಕನ ಪ್ರಕಾರ ಬೇಕರಿಯಲ್ಲಿ ದಾಂಧಲೆ ಎಬ್ಬಿಸಿದ್ದು ಓರ್ವ ಪೊಲೀಸ್​ ಇನ್ಸ್​ಪೆಕ್ಟರ್. ಖರೀದಿಸಿ ತಿನಿಸಿಗೆ ಹಣ ಪಾವತಿಸುವಂತೆ ಬೇಕರಿ ಮಾಲೀಕ ಕೇಳಿದಾಗ ತಾಳ್ಮೆ ಕಳೆದುಕೊಂಡ ಇನ್ಸ್​ಪೆಕ್ಟರ್​, ನನ್ನನ್ನೇ ಹಣ ಕೇಳುತ್ತೀಯಾ ಅಂತ ಬೇಕರಿಯಲ್ಲಿ ಹೈಡ್ರಾಮ ಮಾಡಿದ್ದಾರೆ. ಅಧಿಕಾರಿಯ ಅನುಚಿತ ವರ್ತನೆಯ ದೃಶ್ಯವನ್ನು ಬೇಕರಿಯಲ್ಲಿದ್ದ ಬೇರೊಬ್ಬರು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಇದನ್ನೂ ಓದಿ:ಚಿಲ್ಲರೆ ಸಿಗುವ ಖಾತೆ ಸಿಕ್ಕಿದೆಯೆಂದು ಎಂ.ಬಿ.ಪಾಟೀಲ್ ವಿಲವಿಲ ಒದ್ದಾಡುತ್ತಿದ್ದಾರೆ: ಪ್ರತಾಪ್ ಸಿಂಹ ವ್ಯಂಗ್ಯ
कानपुर के कल्याणपुर में पनकी रोड पर एक दुकान में दरोगा का आतंक। आरोप, मिठाई खरीदकर पैसे नहीं दे रहा था। पैसे मांगने पर क्या किया, वो विडियो में दिख रहा है।CCTV और स्मार्ट फोन सही समय पर आ गए, वरना आम आदमी का दर्द कभी दिख न पाता।#Kanpur#UPPolice@NBTLucknowpic.twitter.com/Y3i83VNlKL
— Praveen Mohta (@MohtaPraveenn)June 18, 2023

ಮೊದಲು ಹಣ ಕೊಡದೇ ಸತಾಯಿಸಿ, ಗಲಾಟೆ ಮಾಡಿದ ಇನ್ಸ್​ಪೆಕ್ಟರ್​, ಯಾವಾಗ ಮೊಬೈಲ್​ನಲ್ಲಿ ವಿಡಿಯೋ ಮಾಡುತ್ತಿರುವುದು ಗೊತ್ತಾಯಿತೋ ಇದ್ದಕ್ಕಿದ್ದಂತೆ ಸುಮ್ಮನಾಗಿಬಿಡುತ್ತಾರೆ. ಬೇಕರಿಯ ಕೌಂಟರ್​ನಲ್ಲಿ ನಿಂತು ಫೋನ್​ ಹಿಡಿದು ಯಾರೊಂದಿಗೆ ಮಾತನಾಡುವ ದೃಶ್ಯ ವಿಡಿಯೋದಲ್ಲಿದೆ.
ಮತ್ತೊಂದು ವಿಡಿಯೋದಲ್ಲಿ ತನ್ನ ಬಿಲ್​ ಎಷ್ಟಾಯಿತು ಎಂದು ಮಾಲೀಕನನ್ನು ಇನ್ಸ್​ಪೆಕ್ಟರ್​ ಕೇಳಿದ್ದಾರೆ. ಅದಕ್ಕೆ ಮಾಲೀಕ 110 ರೂ. ಎಂದು ಹೇಳುತ್ತಾರೆ. ಬಳಿಕ ಪಾನಮತ್ತ ಇನ್ಸ್​ಪೆಕ್ಟರ್​ ಯುಪಿಐ ಸ್ಕ್ಯಾನ್​ ಮಾಡಿ ಹಣ ಪಾವತಿಸಲು ಯತ್ನಿಸುತ್ತಾರೆ. ಆದರೆ, ಕಂಠಪೂರ್ತಿ ಕುಡಿದಿದ್ದರಿಂದ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಪೊಲೀಸ್​ ಅಧಿಕಾರಿ ಎಷ್ಟು ಕುಡಿದಿದ್ದರು ಅಂದರೆ, ಪಾವತಿಗಾಗಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಲು ಸಹ ಸಾಧ್ಯವಾಗಲಿಲ್ಲ ಎಂದು ಮಾಲೀಕ ಹೇಳಿದ್ದಾರೆ.
ಇದನ್ನೂ ಓದಿ:ಎಮ್ಮೆಗಳ ಜತೆ ಸೇರಲು ಬಿಡುತ್ತಿಲ್ಲವೆಂದು ದಾಳಿ: ಕೋಣನ ಹಳೆಯ ದ್ವೇಷಕ್ಕೆ ವ್ಯಕ್ತಿ ಬಲಿ!
पार्ट-2#Kanpur#UPPolice@NBTLucknowpic.twitter.com/pJUPNfoTU8
— Praveen Mohta (@MohtaPraveenn)June 18, 2023

ಕೆಲ ನೆಟ್ಟಿಗರು ಇನ್ಸ್​ಪೆಕ್ಟರ್​ ಅನುಚಿತ ವರ್ತನೆಯ ವಿಡಿಯೋಗಳನ್ನು ಕಾನ್ಪುರ ಮತ್ತು ಉತ್ತರ ಪ್ರದೇಶ ಪೊಲೀಸ್​ ಇಲಾಖೆಗೆ ಟ್ಯಾಗ್​ ಮಾಡಿ, ಕಠಿಣ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನ್ಪುರ ಪೊಲೀಸರು, ಆ ಅಧಿಕಾರಿಯನ್ನು ಸಸ್ಪೆಂಡ್​ ಮಾಡಿರುವುದಾಗಿ ತಿಳಿಸಿದ್ದಾರೆ. ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
VIDEO | ಬೈಕ್ ಚಲಾಯಿಸುತ್ತಿದ್ದ ಯುವಕ ಹೃದಯಾಘಾತದಿಂದ ಮೃತ್ಯು

ರಾಮನಗರದಲ್ಲಿ ನಿಲ್ಲದ ಆನೆ ಹಾವಳಿ: ಜಮೀನಿಗೆ ತೆರಳುತ್ತಿದ್ದ ಸಹೋದರಿಯರ ಮೇಲೆ ದಾಳಿ, ಓರ್ವ ಮಹಿಳೆ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 6 =
Remember me
