
ಕಣ್ಣೂರು:ಕುಡಿದ ಮತ್ತಿನಲ್ಲಿ ರಸ್ತೆ ಅಂದುಕೊಂಡು ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ವ್ಯಕ್ತಿಯನ್ನು ಕಣ್ಣೂರು ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಜಯಪ್ರಕಾಶ್​ ಎಂದು ಗುರುತಿಸಲಾಗಿದೆ. ಈತ ಕೇರಳದ ಅಂಚರಕಂಡಿ ಮೂಲದ ನಿವಾಸಿ. ಥಾಜೆ ಛೋವಾ ರೈಲ್ವೆ ಗೇಟ್​ ಬಳಿ ಸುಮಾರು 15 ಮೀಟರ್​ ದೂರ ಹಳಿ ಮೇಲೆಯೇ ಕಾರು ಚಲಾಯಿಸಿದ್ದಾನೆ. ಈ ವೇಳೆ ಕಾರು, ಹಳಿಗಳ ನಡುವೆ ಸಿಲುಕಿದ ಪರಿಣಾಮ ಸ್ಥಳದಲ್ಲಿಯೇ ಆಫ್​ ಆಯಿತು.
ಇದನ್ನೂ ಓದಿ:ಉಕ್ಕೇರಿದ ಕಾಗಿಣಾ-ಮುಲ್ಲಾಮಾರಿ ; ಮಳಖೇಡ ಸೇತುವೆ ಮುಳುಗಿ ಕಲಬುರಗಿ -ಸೇಡಂ ಸಂಚಾರ ಬಂದ್
ರೈಲ್ವೆ ಗೇಟ್​ ಕೀಪರ್​ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಳಿಗಳ ನಡುವೆ ಸಿಲುಕಿದ್ದ ಕಾರನ್ನು ತೆಗೆದು, ಚಾಲಕ ಜಯಪ್ರಕಾಶ್​ನನ್ನು ಸ್ಥಳದಲ್ಲಿಯೇ ಬಂಧಿಸಿ, ಠಾಣೆಗೆ ಕರೆದೊಯ್ದರು.
ಬಂಧಿಸಿದ ಕೆಲವೇ ಗಂಟೆಗಳಲ್ಲಿ ಜಯಪ್ರಕಾಶ್​ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆದರೆ, ಆತನ ಕಾರನ್ನು ಬಿಡುಗಡೆ ಮಾಡದೇ ನ್ಯಾಯಾಲಯದ ಮುಂದೆ ಪೊಲೀಸರು ಹಾಜರುಪಡಿಸಲಿದ್ದಾರೆ.(ಏಜೆನ್ಸೀಸ್​)
ಬಾಗಿಲು ಬಡಿದ ಮೂವರು ಕಿಡಿಗೇಡಿಗಳು; ಹೊರಬಂದ ಮನೆ ಮಾಲೀಕನ ಮೇಲೆ ಗುಂಡಿನ ದಾಳಿ!
ಈ ಮಹಿಳೆ, ಅಧ್ಯಕ್ಷರಾದದ್ದು ಪ್ರಧಾನಿ ಮೋದಿಯಂತೆ ಚಹಾ ಮಾರಿ!
Heavy Rain All Over Karnataka | ರಾಜ್ಯದ ಹಲವೆಡೆ ವರುಣನ ಆರ್ಭಟ; ಜನಜೀವನ ಅಸ್ತವ್ಯಸ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
