ಬಿಹಾರ: ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಗೋಪಾಲ್‌ಗಂಜ್​​​ಗೆ ಭೇಟಿ ನೀಡಿದರು. ಈ ವೇಳೆ ‘ತಾವೆ’ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಹತುವಾ ಡಿಎಸ್‌ಪಿ ಲಾಲು ಯಾದವ್‌ಗೆ ಛತ್ರಿಯನ್ನು ಹಿಡಿದಿದ್ದರು. ಸದ್ಯ ಈ ಫೋಟೋ ಮೇಲೆ ಈಗ ರಾಜಕೀಯ ಗಲಾಟೆ ನಡೆಯುತ್ತಿದ್ದು, ಈ ಬಗ್ಗೆ ಬಿಜೆಪಿ ನಿತೀಶ್ ಸರ್ಕಾರವನ್ನು ಟೀಕಿಸಿದೆ.
ಬಿಜೆಪಿ ನಾಯಕ ಸುಶೀಲ್ ಮೋದಿ ಟ್ವೀಟ್ ಮಾಡಿ, ‘ಲಾಲು ಮುಖ್ಯಮಂತ್ರಿಯಾಗಿದ್ದಾಗ ಐಎಎಸ್ ಅಧಿಕಾರಿಗಳು ಉಗುಳು ಎತ್ತುತ್ತಿದ್ದರು, ಈಗ ಡಿಎಸ್‌ಪಿ ಲಾಲುಗೆ ಕೊಡೆ ಹಿಡಿದಿರುವುದು ಹೆಮ್ಮೆಯ ನಂಗತಿ. ಇದು ನಿತೀಶ್ ಜೀಯವರ ಉತ್ತಮ ಆಡಳಿತವೇ?’ ಎಂದು ಟ್ವೀಟ್ ಮಾಡಿದ್ದಾರೆ.
https://twitter.com/SushilModi/status/1693888523479417051/history
ಸದ್ಯ ಲಾಲೂ ಪ್ರಸಾದ ಯಾದವ್ ಮತ್ತು ರಾಬ್ರಿ ದೇವಿ ಸುಮಾರು ಆರು ವರ್ಷಗಳ ನಂತರ ತಮ್ಮ ಪೂರ್ವಜರು ವಾಸಿಸುವ ಸ್ಥಳ ಗೋಪಾಲ್‌ಗಂಜ್​​​ಗೆ ತೆರಳಿದ್ದಾರೆ. ಈ ಪ್ರವಾಸದ ವೇಳೆ ಲಾಲು ತಮ್ಮ ಅತ್ತೆಯ ಮನೆ ಫಲಾ‌ ಕಾಲಾಕ್ಕೂ ಭೇಟಿ ನೀಡಲಿದ್ದಾರೆ. ಬಹಳ ದಿನಗಳ ನಂತರ ಆರ್​​​​​ಜೆಡಿ ವರಿಷ್ಠರು ಅತ್ತೆಯ ಮನೆಗೆ ಹೋಗುತ್ತಿರುವ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಕೂಡ ಬಹಳ ಸಮಯದ ನಂತರ ತಮ್ಮ ತಾಯಿಯ ಮನೆಗೆ ಹೋಗುತ್ತಿದ್ದಾರೆ.
ಸುಧೀರ್ಘ ಸಮಯದ ನಂತರ ಗೋಪಾಲ್‌ಗಂಜ್ ತಲುಪಿದ ಅರ್‌ಜೆಡಿ ಮುಖ್ಯಸ್ಥ ಲಾಲು ತಮ್ಮ ಹಳೆಯ ಸ್ನೇಹಿತರನ್ನು ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅತ್ತೆಯ ಮನೆಗೆ ಹೋಗುತ್ತಿದ್ದೇವೆ ಎಂದು ಹೇಳಿದ ಲಾಲು, ಅಲ್ಲೇ ದೇವಸ್ಥಾನವೂ ಇದೆ, ಹಾಗಾಗಿ ಭೇಟಿ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿ ಡ್ಯಾಶಿಂಗ್ ಎಂಟ್ರಿ ನೀಡಿದ ಆರ್ ಪ್ರಜ್ಞಾನಂದ ಯಾರು?, ‘ಚದುರಂಗ’ ಕಲಿತದ್ದು ಯಾರಿಂದ?

Sign in to your account
Please enter an answer in digits:8 + fourteen =
Remember me
