ನವದೆಹಲಿ:ಯುವಜನತೆಯ ಉದ್ಯಮಶೀಲತಾ ಕೌಶಲ್ಯಗಳ ಅಭಿವೃದ್ಧಿಗೆ ಸೂಕ್ತ ವೇದಿಕೆ ಕಲ್ಪಿಸಲು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಎಐಸಿಟಿಇ ಸಹಯೋಗದೊಂದಿಗೆ ನಿಗದಿತ ಡಿಟಿಎಚ್ ಚಾನೆಲ್ ಅನ್ನು ಶೀಘ್ರವೇ ಆರಂಭಿಸಲಿದೆ.
ಈ ಯೋಜನೆ ಅಭಿವೃದ್ಧಿಗೊಳಿಸಲು ಪ್ರಸಾರ ಭಾರತಿಯ ಮಾಜಿ ಮುಖ್ಯಸ್ಥ ಎ ಸೂರ್ಯ ಪ್ರಕಾಶ್ ನೇತೃತ್ವದಲ್ಲಿ ಒಂಬತ್ತು ಸದಸ್ಯರ ಉನ್ನತ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಣದ ಸವಾಲುಗಳನ್ನು ಎದುರಿಸಲು ಕೇಂದ್ರ ಡಿಟಿಎಚ್ ಮತ್ತು ರೇಡಿಯೊ ವಿಧಾನಗಳತ್ತ ವಿಶೇಷವಾಗಿ ಗಮನಹರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಯೋಚಿಸಲಾಗಿದೆ.
ಇದನ್ನೂ ಓದಿ :ಕಲೆಗೆ ಧರ್ಮದ ಹಂಗಿಲ್ಲ ಎಂದು ಸಾಬೀತುಪಡಿಸಿದ ಮುಸ್ಲಿಂ ಮಹಿಳೆ
“ಯಾವುದೇ ರಾಷ್ಟ್ರದ ಪ್ರಗತಿಗೆ ನವೋನ್ವೇಷಣೆ ನಿರ್ಧಾರಕ ಅಂಶವಾಗಿದೆ. ನಾವೀನ್ಯತೆಗೆ ಮೀಸಲಾಗಿರುವ ಒಂದು ಪ್ರಮುಖ ಚಾನಲ್ ತರುವಲ್ಲಿ ಕಾರ್ಯನಿರತವಾಗಿರುವುದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ಎಐಸಿಟಿಇಯ ಉತ್ತಮ ನಡೆಯಾಗಿದೆ ಎಂದು ಎ ಸೂರ್ಯ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.ಮುಂದಿನ ವಾರದಿಂದಲೇ ಸಮಿತಿ ಕಾರ್ಯ ಆರಂಭಿಸುವ ನಿರೀಕ್ಷೆ ಇದೆ.
“ ದೇಶದ ಯುವ ಜನತೆಯ ಕೌಶಲ ಅಭಿವೃದ್ಧಿಗೆ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸಬಲ್ಲ ಚಾನಲ್ ಅನ್ನು ತರುವುದು ಈ ಯೋಜನೆಯ ಉದ್ದೇಶವಾಗಿದೆ. ಇದು ದೇಶ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಹಾಗೂ ಇತ್ತೀಚಿನ ಆವಿಷ್ಕಾರ ಮತ್ತು ಸಂಶೋಧನೆಗಳ ಮೇಲೆ ಬೆಳಕು ಚೆಲ್ಲುವುದರ ಜತೆಗೆ ಯುವ ಉದ್ಯಮಿಗಳು ಮಾಡಿದ ಸಾಧನೆಗಳನ್ನು ಸಹ ತೋರಿಸುತ್ತದೆ ”ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಂತಾರಾಷ್ಟ್ರೀಯ ಸ್ಪೀಡ್ ಪೋಸ್ಟ್ ಸೇವೆ ಮರು ಆರಂಭಿಸಿದ ಅಂಚೆ ಇಲಾಖೆ
‘ಒನ್ ಕ್ಲಾಸ್ ಒನ್ ಚಾನೆಲ್’ ಯೋಜನೆಯಡಿ ಶಾಲಾ ಮಕ್ಕಳಿಗೆ 12 ಡಿಟಿಎಚ್ ಚಾನೆಲ್‌ಗಳನ್ನು ತರಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಕಾರ್ಯನಿರತವಾಗಿರುವಾಗಲೇ ಈ ಕ್ರಮದ ಬಗ್ಗೆಯೂ ಯೋಜಿಸಿದೆ.ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್-19 ಪರಿಹಾರ ಪ್ಯಾಕೇಜ್‌ನಲ್ಲಿ ಒನ್ ಕ್ಲಾಸ್ ಒನ್ ಚಾನೆಲ್ ಯೋಜನೆಯನ್ನು ಉಲ್ಲೇಖಿಸಿದ್ದರು.
ಕೋವಿಡ್-19: ರಾಜ್ಯ ಸರ್ಕಾರದ ಹೊಸ ಪರೀಕ್ಷಾ ನೀತಿ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 4 =
Remember me
