ನವದೆಹಲಿ:ಅನ್ಯಧರ್ಮದ ಹುಡುಗಿಯೊಂದಿಗಿನ ಪರಿಚಯ 18 ವರ್ಷದ ಪ್ರಾಯದ ಹುಡುಗನ ಸಾವಿಗೆ ಕಾರಣವಾಗಿದೆ. ಹುಡುಗಿಯ ಮನೆಯವರು ಹುಡುಗನನ್ನು ಥಳಿಸಿ, ಹತ್ಯೆ ಮಾಡಿರುವ ಘಟನೆ ದೆಹಲಿಯ ಆದರ್ಶ ನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಪ್ರಾಪ್ತರು ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಹುಲ್​ (18) ಮೃತ ಹುಡುಗ. ಈತ ಪಶ್ಚಿಮ ದೆಹಲಿಯ ಆದರ್ಶ ನಗರ ನಿವಾಸಿ. ರಾಹುಲ್​ ಮೇಲೆ ದಾಳಿ ಮಾಡುವ ಮುನ್ನ ಆತ​ ಹುಡುಗಿಯೊಂದಿಗೆ ಮಾತನಾಡುತ್ತ ನಿಂತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೇರೆ ಬೇರೆ ಧರ್ಮದವರಾಗಿದ್ದರಿಂದ ರಾಹುಲ್​ನೊಂದಿಗಿನ ಸ್ನೇಹ ಹುಡುಗಿ ಕುಟುಂಬಕ್ಕೆ ಇಷ್ಟವಿರಲಿಲ್ಲ. ಇದೇ ವಿಚಾರವಾಗಿ ಹುಡುಗಿಯ ಸಹೋದರ ಮತ್ತು ಕುಟುಂಬದ ಇನ್ನಿತರರು ಸೇರಿ ರಾಹುಲ್​ನನ್ನು ಚೆನ್ನಾಗಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆಂದು ತನಿಖಾ ವೇಳೆ ಹಿರಿಯ ಪೊಲೀಸ್​ ಅಧಿಕಾರಿ ವಿಜಯಂತಾ ಆರ್ಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಪಾಕ್​ ಉಗ್ರರ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲ: ಭಾರತೀಯ ಸೇನೆಯ ಸ್ಫೋಟಕ ಕಾರ್ಯಾಚರಣೆ!
ಅಕ್ಟೋಬರ್​ 7ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಂದು ರಾತ್ರಿ ಟ್ಯೂಷನ್​ ಮುಗಿಸಿ ಮನೆ ಹೊರಡಬೇಕಾದರೆ ಹುಡುಗಿ ಮನೆಯವರು ರಾಹುಲ್​ನನ್ನು ಸುತ್ತುವರಿದು ಚೆನ್ನಾಗಿ ಥಳಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಗಂಭೀರ ಆಂತರಿಕ ಗಾಯಗಳಿಂದ ರಾಹುಲ್​ ಮೃತಪಟ್ಟಿರುವುದು ಶವಪರೀಕ್ಷೆಯಲ್ಲಿ ದೃಢವಾಗಿದೆ.
ರಾಹುಲ್​ ಮನೆಯಲ್ಲೂ ಸಹ ಕೆಲವರಿಗೆ ಪಾಠ ಬೋಧನೆ ಮಾಡುತ್ತಿದ್ದ. ದೆಹಲಿ ಯೂನಿವರ್ಸಿಟಿಯಲ್ಲಿ ಬ್ಯಾಚುಲರ್​ ಆಫ್​ ಆರ್ಟ್ಸ್​ನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದ. ರಾಹುಲ್​ ಮೇಲೆ 8 ರಿಂದ 10 ಮಂದಿ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. ನಮಗೆ ಏನು ಬೇಡ, ನ್ಯಾಯ ಸಿಕ್ಕರೆ ಸಾಕು ಎಂದು ರಾಹುಲ್​ ತಂದೆ ಹೇಳಿದ್ದಾರೆ.(ಏಜೆನ್ಸೀಸ್​)
ವಿದ್ಯಾಗಮ ತಾತ್ಕಾಲಿಕ ಸ್ಥಗಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
