ನವದೆಹಲಿ:ದುಬೈನಿಂದ ಅಮೃತಸರಕ್ಕೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರೊಬ್ಬರಿಗೆ ತಕ್ಷಣ ವೈದ್ಯಕೀಯ ಸಹಾಯ ಅಗತ್ಯವಿದ್ದ ಕಾರಣ ಲ್ಯಾಡಿಂಗ್ ಮಾಡಲಾಯಿತು ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ:ಪಾಕ್​ ಆಟಗಾರರ ಎದುರು “ಜೈಶ್ರೀರಾಮ್” ಘೋಷಣೆ; ರಾಜಕೀಯ ತಿರುವು ಪಡೆದ ವಿವಾದ
ಏರ್‌ಲೈನ್‌ನ ವಕ್ತಾರರ ಪ್ರಕಾರ, ಕರಾಚಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ಸೇವೆಗಳನ್ನು ಒದಗಿಸಲಾಯಿತು. ಪ್ರಯಾಣಿಕರಿಗೆ ಚಿಕಿತ್ಸೆ ನೀಡಿದ ಬಳಿಕ ಹಾರಾಟಕ್ಕೆ ಅನುಮತಿ ದೊರಕಿತು. ತದನಂತರದಲ್ಲಿ ವಿಮಾನವು ಕರಾಚಿಯಿಂದ ಅಮೃತಸರಕ್ಕೆ ಮಧ್ಯಾಹ್ನ 2:30ಕ್ಕೆ ಹೊರಟಿತು ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು, “ದುಬೈ-ಅಮೃತಸರ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಹಠಾತ್ ವೈದ್ಯಕೀಯ ತೊಡಕುಗಳನ್ನು ಹೊಂದಿದ್ದರು (ಅಕ್ಟೋಬರ್ 14) ಮತ್ತು ಸಿಬ್ಬಂದಿ ಕರಾಚಿಗೆ ಸ್ಥಳಾಂತರಿಸಲು ಕೂಡಲೇ ನಿರ್ಧರಿಸಿದರು” ಎಂದು ಹೇಳಿದರು.
ಇದನ್ನೂ ಓದಿ:ಸಂಭ್ರಮ ಸಡಗರದಿಂದ ನಡೆದ ರಾಣೆಬೆನ್ನೂರ ಕಾ ರಾಜಾ ಗಣಪತಿ ಶೋಭಾಯಾತ್ರೆ
“ತಕ್ಷಣದ ವೈದ್ಯಕೀಯ ನೆರವು ನೀಡಲು ಕರಾಚಿ ಹತ್ತಿರದ ಸ್ಥಳವಾದ ಕಾರಣ ವಿಮಾನವು ದುಬೈನಿಂದ ಸ್ಥಳೀಯ ಸಮಯ 08.51ಕ್ಕೆ ಹೊರಟು, ಮಧ್ಯಾಹ್ನ 12.30ಕ್ಕೆ ಕರಾಚಿಯಲ್ಲಿ ಲ್ಯಾಡಿಂಗ್ ಆಯಿತು” ಎಂದು ಹೇಳಿದರು,(ಏಜೆನ್ಸೀಸ್).
ಲಿಪ್​ ಲಾಕ್​ ಸೀನ್​​ ಸ್ಕ್ರಿಪ್ಟ್​ನಲ್ಲಿರುತ್ತ ಅಥವಾ ನೀವೇ ಇರಲಿ ಎಂದು ಕೇಳ್ತೀರಾ?; ಪತ್ರಕರ್ತರ ಪ್ರಶ್ನೆಗೆ ನಾನಿ ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + six =
Remember me
