ದುಬೈ:ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಚಿಕಿತ್ಸೆ ಬಲು ದುಬಾರಿ. ಆದರೆ ಕೆಲವೊಂದು ಕಾರಣಕ್ಕೆ ಗೊತ್ತೋ ಗೊತ್ತಿಲ್ಲದೆಯೋ ಖಾಸಗಿ ಆಸ್ಪತ್ರೆಗಳ ಮೊರೆ ಹೋಗಿ ಪೇಚಿಗೆ ಸಿಲುಕುವ ಕರೊನಾ ಸೋಂಕಿತರು ಅದೆಷ್ಟೋ ಮಂದಿ.
ಅಂಥದ್ದೇ ಒಂದು ಘಟನೆ ದುಬೈನಲ್ಲಿ ನಡೆದಿದೆ. ಹೇಳಿ- ಕೇಳಿ ದುಬೈ. ಕೇಳಬೇಕೆ? ಎಲ್ಲವೂ ಡಬಲ್‌ ರೇಟ್‌. ತೆಲಂಗಾಣದ ವ್ಯಕ್ತಿಯೊಬ್ಬರು ದುಬೈನಲ್ಲಿ ಎರಡು ವರ್ಷಗಳಿಂದ ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಚಿಕಿತ್ಸೆಯ ಅಗತ್ಯವಿದ್ದುದರಿಂದ ಅವರು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿಬಿಟ್ಟರು. ಸತತ 80 ದಿನಗಳ ಕಾಲ ಅವರಿಗೆ ಅಲ್ಲಿ ಚಿಕಿತ್ಸೆ ನೀಡಲಾಯಿತು. ಸಂಪೂರ್ಣ ಗುಣಮುಖರಾದ ಮೇಲೆ ಇನ್ನೇನು ಅವರು ಬಿಡುಗಡೆಯಾಗುವ ಸಮಯ.
ಸರಿ ಆಸ್ಪತ್ರೆಯ ಬಿಲ್ಲಿಂಗ್‌ ಕೌಂಟರ್‌ಗೆ ಬಂದರು. ಬಿಲ್‌ ನೋಡಿ ಅವರ ತಲೆ ತಿರುಗಿತು. ಏಕೆಂದರೆ ಆಸ್ಪತ್ರೆಯ ಬಿಲ್‌ 1.52 ಕೋಟಿ ರೂಪಾಯಿಯಾಗಿತ್ತು. ಕಟ್ಟಡ ಕಾರ್ಮಿಕನೊಬ್ಬನ ಬಳಿ ಇಷ್ಟು ಮೊತ್ತ ಇರುವುದಾದರೂ ಹೇಗೆ?
ಇದನ್ನೂ ಓದಿ:ಸೋಂಕಿತರ ಮಗುವಿಗೆ ತಿಂಗಳಮಟ್ಟಿಗೆ ಅಮ್ಮನಾದ ವೈದ್ಯೆ
ಆದರೆ ಮುಂದೆ ಆದದ್ದೆಲ್ಲವೂ ವಿಚಿತ್ರವೇ. ಇವರ 1.52 ಕೋಟಿ ಶುಲ್ಕವೂ ಮನ್ನಾ ಆಯಿತು. ಆಸ್ಪತ್ರೆಯಿಂದ ಗೌರವಯುತವಾಗಿ ಬೀಳ್ಕೊಡುಗೆ ಕೂಡ ಕೊಡಲಾಯಿತು, ಸಾಲದು ಎಂಬುದಕ್ಕೆ ತೆಲಂಗಾಣಕ್ಕೆ ತೆರಳಲು ಉಚಿತ ವಿಮಾನ ಟಿಕೆಟ್‌ ಕೂಡ ಕೊಟ್ಟು ಕಳುಹಿಸಲಾಯಿತು!
ಅಷ್ಟಕ್ಕೂ ಆಗಿದ್ದೇನೆಂದರೆ, ಕರೊನಾ ಸೋಂಕಿತ ಕಟ್ಟಡ ಕಾರ್ಮಿಕ ಆಸ್ಪತ್ರೆಗೆ ದಾಖಲಾದ ದಿನದಿಂದಲೂ ವರ್ಕರ್ಸ್ ಪ್ರೊಟೆಕ್ಷನ್ ಸೊಸೈಟಿ ಅಧ್ಯಕ್ಷ ಗುಂಡೆಲ್ಲಿ ನರಸಿಂಹಯ್ಯ ಅವರ ಸಂಪರ್ಕದಲ್ಲಿ ಇದ್ದರು. ಮೊದಮೊದಲು ಆಸ್ಪತ್ರೆಯ ಬಿಲ್‌ ಇಷ್ಟೆಲ್ಲಾ ಆಗುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.
ಆಸ್ಪತ್ರೆಯ ಬಿಲ್‌ ನೋಡಿ ಹೌಹಾರಿದ ಅವರು, ಭಾರತೀಯ ಕೌನ್ಸುಲೇಟ್ ವಾಲಂಟಿಯರ್ ಸುಮಂತ್ ರೆಡ್ಡಿ ಅವರನ್ನು ಸಂಪರ್ಕಿಸಿದರು. ಅಲ್ಲಿಂದ ಸ್ವಾಮಿನಾರಾಯಣ ಟ್ರಸ್ಟ್ ಸಂಪರ್ಕಿಸಲಾಯಿತು. ನಂತರ, ಸ್ವಯಂಸೇವಕರೂ ಸೇರಿ ಆಸ್ಪತ್ರೆಗೆ ಮನವಿ ಮಾಡಿ, ಮಾನವೀಯ ಆಧಾರದಲ್ಲಿ ಶುಲ್ಕವನ್ನು ರದ್ದು ಮಾಡುವಂತೆ ಕೇಳಿಕೊಂಡರು. ಅಚ್ಚರಿಯ ರೀತಿಯಲ್ಲಿ ಆಸ್ಪತ್ರೆ ಕೂಡ ಅದಕ್ಕೆ ಸ್ಪಂದಿಸಿದೆ.
ವಿಮಾನ ಟಿಕೆಟ್‌ ಕೊಟ್ಟು ಕಾರ್ಮಿಕನನ್ನು ಊರಿಗೆ ಕಳುಹಿಸಿದೆ! ಅದೃಷ್ಟ ಚೆನ್ನಾಗಿದ್ದರೆ ಹೀಗೆಲ್ಲ ಆಗುವುದಿದೆ.(ಏಜೆನ್ಸೀಸ್‌)
ಡ್ರಗ್‌ ದೊರೆಗೆ ಸಿಎಂ ಸಾಥ್‌! ದಿಟ್ಟ ಪೊಲೀಸ್‌ ಅಧಿಕಾರಿಯಿಂದ ಮಣಿಪುರ ಮುಖ್ಯಮಂತ್ರಿ ಗಡಗಡ

ಅಕ್ರಮವಾಗಿ ವಾಸವಾಗಿದ್ದ ದಲಿತ ದಂಪತಿ ಮೇಲೆ ಪೊಲೀಸ್‌ ದೌರ್ಜನ್ಯ- ವಿಡಿಯೋ ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + seventeen =
Remember me
