ನವದೆಹಲಿ:ಕುಖ್ಯಾತ ರೌಡಿ, ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣದ ತನಿಖೆಗೆ ರಚಿಸಲಾಗಿರುವ ತನಿಖಾ ಆಯೋಗಕ್ಕೆ ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎಸ್.ಚೌಹಾಣ್ ಅವರನ್ನು ನೇಮಕ ಮಾಡಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿದೆ.
ಇದೊಂದು ನಕಲಿ ಎನ್‌ಕೌಂಟರ್‌ ಆಗಿದೆ ಎಂಬ ಬಗ್ಗೆ ಹಲವಾರು ಆರೋಪಗಳು ಇರುವ ಹಿನ್ನೆಲೆಯಲ್ಲಿ, ಈ ಬಗ್ಗೆ ತನಿಖೆಗೆ ಕೋರ್ಟ್‌ ನ್ಯಾಯಮೂರ್ತಿ ಚೌಹಾಣ್‌ ಅವರ ನೇಮಕ ಮಾಡಿದೆ.
ಈ ಸಮಿತಿಯು ದುಬೆ ಎನ್‌ಕೌಂಟರ್ ಮಾತ್ರವಲ್ಲದೇ, ಇಷ್ಟು ವರ್ಷಗಳವರೆಗೆ ಅಂದರೆ ಸುಮಾರು ಮೂರು ದಶಕಗಳಿಂದ ದುಬೆ ಪದೇ ಪದೇ ಜಾಮೀನು ಅಥವಾ ಪರೋಲ್‌ ಪಡೆದು ಜೈಲಿನಿಂದ ಬಿಡುಗಡೆಗೊಳ್ಳುತ್ತಿದುದು ಹೇಗೆ ಎಂಬ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೋಬ್ಡೆ, ಸುಪ್ರೀಂಕೋರ್ಟ್‌, ಆ ಬಗ್ಗೆಯೂ ತನಿಖೆ ಮಾಡುವಂತೆ ಆಯೋಗಕ್ಕೆ ಹೇಳಿದೆ.
65ಕ್ಕೂ ಅಧಿಕ ಕೊಲೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಒಬ್ಬ ವ್ಯಕ್ತಿಗೆ ಇಷ್ಟೊಂದು ಸಲ ಜಾಮೀನು ಸಿಗಲು ಕಾರಣವೇನು ಎಂಬ ಬಗ್ಗೆ ತನಿಖೆ ಮಾಡುವಂತೆ ಕೋರ್ಟ್‌ ಹೇಳಿರುವ ಹಿನ್ನೆಲೆಯಲ್ಲಿ ದುಬೆಗೆ ಕಳೆದ 30 ವರ್ಷಗಳಿಂದ ಜಾಮೀನು ಸಿಗುತ್ತಾ ಬಂದಿರುವ ಸಮಯದಲ್ಲಿ ಆಡಳಿತದಲ್ಲಿ ಇದ್ದ ಎಲ್ಲಾ ಸರ್ಕಾರಗಳು ಸಂಕಷ್ಟಕ್ಕೆ ಸಿಲುಕಿವೆ.
ಇದನ್ನೂ ಓದಿ:ಬಂದು ಶರಣಾಗು..ಇಲ್ಲದಿದ್ದರೆ ನಿನ್ನನ್ನೂ ಪೊಲೀಸರು ಕೊಲ್ಲುತ್ತಾರೆ: 2ನೇ ಮಗನಿಗೆ ಮನವಿ ಮಾಡಿದ ಸರಳಾದೇವಿಯಾವುದೇ ಆರೋಪಿಗೆ ಜಾಮೀನು ನೀಡುವುದು ಕೋರ್ಟ್‌ ಆದರೂ, ಆ ಆರೋಪಿ ಅಥವಾ ಅಪರಾಧಿ ವಿರುದ್ಧ ಸರ್ಕಾರ ಸರಿಯಾದ ವಾದ ಮಂಡನೆ ಮಾಡುವ ಅಗತ್ಯವಿದೆ. ಒಂದು ವೇಳೆ ತಪ್ಪಿತಸ್ಥರ ವಿರುದ್ಧವಾಗಿ ಸರಿಯಾಗಿ ವಾದ ಮಂಡನೆಯಾಗದಿದ್ದರೆ ಅಥವಾ ಅವರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ಸರ್ಕಾರದ ಪರ ವಕೀಲರು ಸಲ್ಲಿಸದೇ ಹೋದರೆ ಅನಿವಾರ್ಯವಾಗಿ ಹಲವು ಬಾರಿ ಕೋರ್ಟ್‌ ಜಾಮೀನು ಮಂಜೂರು ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದುಬೆಗೆ ಬೇಲ್‌ ಸಿಕ್ಕಿರುವ ಔಚಿತ್ಯದ ಕುರಿತೂ ತನಿಖೆ ಆಗಬೇಕು ಎಂದು ಕೋರ್ಟ್‌ ಹೇಳಿದೆ.
ನ್ಯಾ.ಚೌಹಾಣ್ ಅವರು ಈ ಹಿಂದೆ ಕಾನೂನು ಆಯೋಗದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 2009 ಮತ್ತು 2014ರ ನಡುವೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. ಸಮಿತಿಯಲ್ಲಿ ಅಲಹಾಬಾದ್ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಶಶಿ ಕಾಂತ್ ಅಗರವಾಲ್ ಮತ್ತು ನಿವೃತ್ತ ಡಿಜಿಪಿ ಕೆ.ಎಲ್. ಗುಪ್ತಾ ಸದಸ್ಯರಿದ್ದಾರೆ.
ಸಿಎಂ ರಾಜೀನಾಮೆ ನೀಡಿದ್ದ ಕೊಲೆ ಕೇಸ್‌: 11 ಪೊಲೀಸರಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + seven =
Remember me
