ಲಖನೌ:ಬೆಳ್ಳಂಬೆಳಗ್ಗೆ ಕುಖ್ಯಾತ ರೌಡಿ ವಿಕಾಸ್‌ ದುಬೆ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಘಟನೆ, ಇದೀಗ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.ನಿನ್ನೆ ಸಂಜೆ ದುಬೆಯನ್ನು ಪೊಲೀಸರು ಅರೆಸ್ಟ್‌ ಮಾಡಿದ ಸಂದರ್ಭದಲ್ಲಿ, ಇದು ಪೊಲೀಸರು ದುಬೆಯನ್ನು ಬಂಧಿಸಿದ್ದಲ್ಲ, ಬದಲಿಗೆ ಆತನೇ ಪೊಲೀಸರಿಗೆ ಶರಣಾಗಿದ್ದಾನೆ ಎಂಬ ಬಗ್ಗೆ ಘಂಟಾಘೋಷವಾಗಿ ಸಾರಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಇಂದು ಕೂಡ ಇದೊಂದು ಫೇಕ್‌ ಎನ್‌ಕೌಂಟರ್‌ ಎಂದು ಕಿಡಿ ಕಾರಿದ್ದಾರೆ.
ವಾಸ್ತವವಾಗಿ ದಬೆ ಇರುವ ಕಾರು ಉರುಳಿಲ್ಲ, ಬದಲಿಗೆ ಸರ್ಕಾರದ ರಹಸ್ಯ ಬಹಿರಂಗಗೊಂಡು ಅದು ಉರುಳದಂತೆ ಮಾಡುವ ಸಂಬಂಧ ಮಾಡಿರುವ ನಾಟಕವಿದು ಎಂದು ಟ್ವಿಟರ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕಾನ್ಪುರ ಪೊಲೀಸರ​ ಹತ್ಯೆ ಪ್ರಕರಣ: ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಎನ್​ಕೌಂಟರ್​
दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh)July 10, 2020

‘ಏನು ಅಂದುಕೊಂಡಿದ್ದೆವೋ ಹಾಗೆಯೇ ಆಯಿತು, ಹೀಗೇ ಆಗುತ್ತದೆ ಎಂದು ಮೊದಲೇ ಗೊತ್ತಿತ್ತು’ ಎಂದುಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ದುಬೆಗೆ ಅನೇಕ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳ ಸಂಪರ್ಕವಿತ್ತು. ಅವೆಲ್ಲಾ ರಹಸ್ಯ ಎಲ್ಲಿ ಹೊರಬರುವುದೋ ಎನ್ನುವ ಕಾರಣಕ್ಕೆ ಎನ್‌ಕೌಂಟರ್‌ ನಾಟ ಮಾಡಲಾಗಿದೆ. ದುಬೆಯ ಇತರ ಇಬ್ಬರು ಸಹವರ್ತಿಗಳನ್ನೂ ಎನ್‌ಕೌಂಟರ್‌ ಮಾಡಲಾಗಿದ್ದು, ಎಲ್ಲವೂ ಏಕರೀತಿಯಲ್ಲಿಯೇ ನಡೆದಿರುವುದು ನೋಡಿದರೆ ಇದೊಂದು ದೊಡ್ಡ ಷಡ್ಯಂತ್ರ ಎನ್ನುವುದರಲ್ಲಿ ಯಾವುದೇ ಸಂದೇಹ ಇಲ್ಲ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮುಖಂಡ ಓಮನ್‌ ಅಬ್ದುಲ್ಲಾ ಕೂಡ ಟ್ವೀಟ್‌ ಮಾಡಿದ್ದು, ಸತ್ತ ವ್ಯಕ್ತಿ ಏನನ್ನೂ ಹೇಳಲು ಸಾಧ್ಯವಿಲ್ಲ. ಪೊಲೀಸರು ಹಾಗೂ ರಾಜಕಾರಣಿಗಳ ಗುಟ್ಟು ಅವನ ಜತೆಯೇ ಸತ್ತುಹೋಯಿತು. ಅದನ್ನೀಗ ಹೇಳಲು ಆತ ಬದುಕಿಲ್ಲ ಎಂದಿದ್ದಾರೆ.
मैं शिवराज जी से विकास दुबे की गिरफ़्तारी या सरेंडर की न्यायिक जॉंच की मॉंग करता हूँ। इस कुख्यात गेंगस्टर के किस किस नेता व पुलिसकर्मियों से सम्पर्क हैं जॉंच होना चाहिए। विकास दुबे को न्यायिक हिरासत में रखते हुए इसकी पुख़्ता सुरक्षा का ध्यान रखना चाहिए ताकि सारे राज़ सामने आ सकें
— digvijaya singh (@digvijaya_28)July 9, 2020

ಕಾಗೆ ಹಿಕ್ಕೆ ಹಾಕಿತೆಂದು ಎರ್ರಾಬಿರ್ರಿ ಗುಂಡು ಹಾರಿಸಿದ್ದ ದುಬೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − eight =
Remember me
