ನವದೆಹಲಿ:ಕುಖ್ಯಾತ ಪಾತಕಿ ವಿಕಾಸ್​ ದುಬೆ ಪರಾರಿಯಾಗುವ ಯತ್ನದಲ್ಲಿ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ತಂಡದ ಮೇಲೆ 9 ಗುಂಡುಗಳನ್ನು ಸಿಡಿಸಿದ್ದ. ಅವುಗಳಲ್ಲಿ 3 ಗುಂಡುಗಳು ​ ಸಿಬ್ಬಂದಿಗೆ ತಗುಲಿ, ಗಾಯಗೊಂಡಿದ್ದರು. ಆತ್ಮರಕ್ಷಣೆಗಾಗಿ ವಿಶೇಷ ಕಾರ್ಯಪಡೆಯ ಸಿಬ್ಬಂದಿ ಸಿಡಿಸಿದ 6 ಗುಂಡುಗಳ ಪೈಕಿ ಮೂರು ಗುಂಡುಗಳು ನಿಖರವಾಗಿ ದುಬೆಯನ್ನು ಸೀಳಿದ್ದವು ಎಂದು ಉತ್ತರ ಪ್ರದೇಶ ಸರ್ಕಾರ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದೆ.
ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ ಘಟನೆಯ ವಿವರಣೆ ನೀಡಿರುವ ಸರ್ಕಾರ, ದುಬೆಯನ್ನು ಕರೆತರುತ್ತಿದ್ದಾಗ ಭಾರಿ ಮಳೆಯಾಗುತ್ತಿತ್ತು. ಇದರಿಂದಾಗಿ ಹತ್ತಿರ ಹೋಗುವವರೆಗೂ ವಾಹನದ ಚಾಲಕನಿಗೆ ಎದುರಿಗೆ ಹೋಗುತ್ತಿದ್ದ ದನಗಳ ಹಿಂಡು ಕಾಣಿಸಿರಲಿಲ್ಲ. ಅದು ಕಾಣಿಸುತ್ತಲೇ ಆತ ಹಠಾತ್ತನೆ ಬ್ರೇಕ್​ ಹಾಕಲು ಯತ್ನಿಸಿದ್ದ. ಹಾಗಾಗಿ ವಾಹನ ಪಲ್ಟಿಯಾಯಿತು. ಆಗ ವಾಹನದಲ್ಲಿದ್ದ ನಾಲ್ವರು ಪೊಲೀಸ್​ ಸಿಬ್ಬಂದಿ ಪ್ರಜ್ಞೆ ತಪ್ಪಿದರು. ಅವರ ಬಳಿ ಇದ್ದ ಬಂದೂಕನ್ನು ಅಪಹರಿಸಿದ ದುಬೆ, ವಾಹನದ ಹಿಂಬಾಗಿಲು ಒಡೆದು ಪರಾರಿಯಾಗಿದ್ದ.
ಈ ವಾಹನದ ಹಿಂದೆ ಇದ್ದ ವಿಶೇಷ ಕಾರ್ಯಪಡೆ ಸಿಬ್ಬಂದಿ ಇದನ್ನು ಗಮನಿಸಿ ದುಬೆಯನ್ನು ಬೆನ್ನಟ್ಟಿದರು. ಆಗ ಆತ ತಾನು ಅಪಹರಿಸಿದ್ದ ಬಂದೂಕಿನಿಂದ ಗುಂಡು ಸಿಡಿಸಲು ಆರಂಭಿಸಿದ. ಆತ ಒಟ್ಟು 9 ಗುಂಡುಗಳನ್ನು ಸಿಡಿಸಿದ. ಅದರಲ್ಲಿ ಆರು ಗುಂಡುಗಳು ಗುರಿತಪ್ಪಿದರೂ, 3 ಗುಂಡುಗಳು ಸಿಬ್ಬಂದಿಗೆ ತಗುಲಿದವು. ಆತ್ಮರಕ್ಷಣೆಗಾಗಿ ಸಿಬ್ಬಂದಿ ಸಿಡಿಸಿದ 6 ಗುಂಡುಗಳ ಪೈಕಿ ಮೂರು ಗುಂಡುಗಳು ದುಬೆಯ ದೇಹವನ್ನು ಹೊಕ್ಕಿದ್ದರಿಂದ ಆತ ಗಂಭೀರವಾಗಿ ಗಾಯಗೊಂಡ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ:12ನೇ ತರಗತಿಯಲ್ಲಿ ಪಾಸ್​ ಆದರೂ ಸಾಕು, ದೊರೆಯುತ್ತೆ ಐಐಟಿಗೆ ಪ್ರವೇಶ
ವಿಶೇಷ ಕಾರ್ಯಪಡೆಯ ಡೆಪ್ಯುಟಿ ಎಸ್​ಪಿ ಟಿ.ಬಿ. ಸಿಂಗ್​, ದುಬೆ ಸಿಡಿಸಿದ ಒಂದು ಗುಂಡು ನನ್ನ ಎದೆಗೆ ತಗುಲಿತು. ಆದರೆ, ಬುಲೆಟ್​ಪ್ರೂಫ್​ ಜಾಕೆಟ್​ ಧರಿಸಿದ್ದರಿಂದ, ಅಪಾಯದಿಂದ ಪಾರಾದೆ. ಆದರೆ, ಮುಖ್ಯ ಪೇದೆ ಸರ್ವಿಂದರ್​ ಸಿಂಗ್​ ಸೆನಗಾರ್​ ಅವರ ಎಡಗೈಗೆ ದುಬೆ ಸಿಡಿಸಿದ ಗುಂಡು ತಗುಲಿ ಗಾಯಗೊಂಡರು. ಅದರಂತೆ ಪೇದೆ ಬಿಮಲ್​ ಕುಮಾರ್​ ಅವರ ಎಡತೊಡೆಗೆ ದುಬೆಯ ಮತ್ತೊಂದು ಗುಂಡು ಹೊಕ್ಕಿದ್ದಾಗಿ ಹೇಳಿದರು.
ದುಬೆ ಪರಾರಿಯಾಗಲು ಯತ್ನಿಸುತ್ತಿದುದರಿಂದ ಪೊಲೀಸರು ಸಿಡಿಸಿದ ಗುಂಡುಗಳು ಆತನ ಬೆನ್ನಿಗೆ ನಾಟಬೇಕಿತ್ತು. ಅದರ ಬದಲು ದೇಹದ ಮುಂಭಾಗಕ್ಕೆ ನಾಟಿದ್ದು ಹೇಗೆ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿರುವ ವಿಶೇಷ ಕಾರ್ಯಪಡೆ ಸಿಬ್ಬಂದಿ, ಆತ ನಮ್ಮ ಮೇಲೆ ಗುಂಡು ಸಿಡಿಸಲು ಮುಂದೆ ತಿರುಗಿದ್ದ. ಆಗ ಗುಂಡುಗಳು ಆತನ ದೇಹವನ್ನು ಮುಂಭಾಗದಿಂದ ಹೊಕ್ಕವು ಎಂದು ಸ್ಪಷ್ಟಪಡಿಸಿದರು.
ದುಬೆ ಇಬ್ಬರು ಪೊಲೀಸ್​ ಸಿಬ್ಬಂದಿಯ ನಡುವೆ ಕುಳಿತುಕೊಂಡಿದ್ದ. ವಾಹನ ಪಲ್ಟಿ ಹೊಡೆದಾಗ ಪೊಲೀಸ್​ ಸಿಬ್ಬಂದಿ ಪ್ರಜ್ಞಾಹೀನರಾದರೂ ಸಣ್ಣ ಗಾಯ ಕೂಡ ಇಲ್ಲದೇ ದುಬೆ ಪಾರಾಗಿದ್ದು ಹೇಗೆ ಎಂಬ ಬಗ್ಗೆ ವಿವರಣೆ ನೀಡಲು ಪೊಲೀಸ್​ ಸಿಬ್ಬಂದಿ ವಿಫಲರಾಗಿದ್ದಾರೆ. ಆದರೆ, 15 ಜನ ಪೊಲೀಸ್​ ಸಿಬ್ಬಂದಿಯ ನೆರವಿನೊಂದಿಗೆ ಆತನನ್ನು ಕರೆತರಲಾಗುತ್ತಿದುದರಿಂದ, ಆತನಿಗೆ ಕೈಕೋಳ ತೊಡಿಸಿರಲಿಲ್ಲ ಎಂದು ಹೇಳಿದರು.
ಜೋಗಿ ಪ್ರೇಮ್​ ಅವರ ತಾಯಿ ಭಾಗ್ಯಮ್ಮ ವಿಧಿವಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 2 =
Remember me
