ಹೈದರಾಬಾದ್‌:ಹುಟ್ಟು ಮೂಕ ಹಾಗೂ ಕಿವುಡ ಮಹಿಳೆಯ ಮೇಲೆ ಯುವಕನೊಬ್ಬ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಾಯಿ ಎಂಬ ಆರೋಪಿಯನ್ನು ಬಂಧಿಸಲಾಗಿದ್ದು, ವಿಜಯನಗರ ಕಾಲೋನಿಯ ಮಹಿಳೆ ಹುಟ್ಟಿನಿಂದಲೇ ಕಿವುಡ ಮತ್ತು ಮೂಕಳಾಗಿದ್ದಳು. ಆಕೆಯ ಪತಿಯೂ ಮೂಕನಾಗಿದ್ದು ಇಬ್ಬರು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆರೋಪಿಯು ಈ ಮಹಿಳೆಯನ್ನು ದಿಟ್ಟಿಸಿ ನೋಡುತ್ತಿದ್ದು, ಸಮಯಕ್ಕಾಗಿ ಕಾಯುತ್ತಿದ್ದನು.ಇದನ್ನೂ ಓದಿ:ನವಜಾತ ಶಿಶುವಿಗೆ ಹಾಲುಣಿಸಿ ಮಲಗಿದ್ದ ತಾಯಿಯ ಸಾವು: ಅಮ್ಮನ ಪ್ರೀತಿ ಕಳೆದುಕೊಂಡ ಹಸುಗೂಸುಈ ವೇಳೆ ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಾಯಿ ಮಹಿಳೆ ಮನೆಗೆ ನುಗ್ಗಿದ್ದು, ಬಳಿಕ ಆಕೆಯನ್ನು ಬಾತ್ ರೂಂನಲ್ಲಿ ಕಟ್ಟಿ ಹಾಕಿ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಮೂಕಳಾಗಿದ್ದರಿಂದ ಅವಳಿಗೆ ಕಿರುಚಲು ಸಹ ಸಾಧ್ಯವಾಗಿರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಯುವಕ ಮೃಗನಂತೆ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಅತ್ಯಾಚಾರದ ನಂತರ ಆಕೆಯನ್ನು ಅಲ್ಲಿಯೇ ಬಿಟ್ಟಿದ್ದ.ಸ್ವಲ್ಪ ಹೊತ್ತಿನ ನಂತರ ಪತಿ ಮನೆಗೆ ಬಂದು ಬಾತ್ ರೂಂ ಬಾಗಿಲು ತೆರೆದಾಗ ಪತ್ನಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಕೂಡಲೇ ಆತ ಆಕೆಗೆ ಉಪಚರಿಸಿದ್ದಾನೆ. ಬಳಿಕ ಆಕೆ ಸನ್ನೆಯ ಮುಖಾಂತರ ಪತಿಗೆ ವಿಷಯ ತಿಳಿಸಿದ್ದು, ಕೂಡಲೇ ಇಬ್ಬರು ಸೇರಿಕೊಂಡು ಹುಮಾಯೂನ್ ನಗರ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 20 =
Remember me
