ಹೈದರಾಬಾದ್:ಹಲವು ಮಹಾನಗರಗಳಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಗತ್ಯ ವಸ್ತುಗಳನ್ನು ಡೆಲಿವರಿ ಮಾಡುವ ಸೇವೆಯಲ್ಲಿ ತೊಡಗಿರುವ ಡನ್ಜೊ ಕಂಪೆನಿ, ಇದೀಗ ಕ್ರಾಂತಿಕಾರಿ ಯೋಜನೆಯೊಂದಕ್ಕೆ ಕೈಹಾಕಿದೆ. ತೆಲಂಗಾಣ ಸರ್ಕಾರದ ‘ಆಕಾಶದಿಂದ ಔಷಧಿಗಳು’ ಯೋಜನೆಯಡಿ, ಸ್ಕೈ ಏರ್​ ಕಂಪೆನಿಯ ಸಹಕಾರದಲ್ಲಿ ದೂರದ ಪ್ರದೇಶಗಳಿಗೆ ಡ್ರೋನ್​ ಮೂಲಕ ಅಗತ್ಯ ಔಷಧಿ, ಲಸಿಕೆಗಳನ್ನು ತಲುಪಿಸುವ ಪ್ರಯತ್ನ ಇದಾಗಿದೆ.
ದೇಶಾದ್ಯಂತ ಹೆಚ್ಚು ಜನಸಂಖ್ಯೆಯುಳ್ಳ ಪ್ರದೇಶಗಳೊಂದಿಗೆ ದೂರದ ಪ್ರದೇಶಗಳಿಗೂ ಅಗತ್ಯ ಔಷಧಿ ಮತ್ತು ಲಸಿಕೆಗಳನ್ನು ಅತಿಶೀಘ್ರವಾಗಿ ಒದಗಿಸುವ ಪ್ರಯತ್ನದಲ್ಲಿ ನಾವು ತೊಡಗಿದ್ದೇವೆ ಎಂದು ಡನ್ಜೋ ಸಿಇಒ ಕಬೀರ್​ ಬಿಸ್ವಾಸ್ ಹೇಳಿದ್ದಾರೆ. ಡ್ರೋನ್​ ತಂತ್ರಜ್ಞಾನವನ್ನು ಬಳಸಿಕೊಂಡು 12 ಕಿಲೋಮೀಟರ್​ ಅಂತರದವರೆಗೆ 18 ನಿಮಿಷಗಳ ಅವಧಿಯಲ್ಲಿ ಔಷಧಿಗಳ ಸರಬರಾಜು ಮಾಡುವ ಗುರಿ ಹೊಂದಲಾಗಿದೆ.
ಇದನ್ನೂ ಓದಿ:ಪಾಕ್‌ ಪ್ರೇಮಿ ಸಿಧು ಸಿಎಂ ಆದ್ರೆ ದೇಶಕ್ಕೆ ಅಪಾಯ ಎಂದ ಅಮರೀಂದರ್‌: ಯಾರಿಗೆ ಒಲಿಯಲಿದೆ ಪಂಜಾಬ್‌ ಖುರ್ಚಿ?
ತೆಲಂಗಾಣ ಸರ್ಕಾರದ ಯೋಜನೆಯಲ್ಲಿ ಡನ್ಜೊ ಮೆಡ್​ಏರ್​ ಕನ್ಸಾರ್ಟಿಯಂಅನ್ನು ರಚಿಸಲಾಗಿದ್ದು, ಡನ್ಜೊ ಡಿಜಿಟಲ್ ಕಂಪೆನಿ ಮತ್ತು ಡ್ರೋನ್​ ಆಧಾರಿತ ಲಾಜಿಸ್ಟಿಕ್ಸ್​ ಒದಗಿಸುವ ಸ್ಕೈ ಏರ್​ ಕಂಪೆನಿಗಳು ಸೆಪ್ಟೆಂಬರ್​ 20 ರಿಂದ 25 ರವರೆಗೆ ರಾಜ್ಯದ ವಿಕಾರಾಬಾದ್​ನಲ್ಲಿ ಪ್ರಾಯೋಗಿಕ ಡೆಲಿವರಿಗಳನ್ನು ನಡೆಸಲಿವೆ. ಈ ಸಂದರ್ಭದಲ್ಲಿ ಬ್ಯಾಗ್ಮೊದ ತಾಪಮಾನ ನಿಯಂತ್ರಿತ ಬಾಕ್ಸ್​ಗಳಲ್ಲಿ ಕರೊನಾ ಲಸಿಕೆಗಳನ್ನು ಕೊಂಡೊಯ್ಯುವ 50 ಫ್ಲೈಟ್​ಗಳನ್ನು ನಡೆಸಲಾಗುವುದು ಎಂದು ಸ್ಕೈ ಏರ್​ನ ಸ್ವಪ್ನಿಕ್ ಜಕ್ಕಂಪುಂಡಿ ಹೇಳಿದ್ದಾರೆ.(ಏಜೆನ್ಸೀಸ್)
ಅಪಾಯಕಾರಿ ಸೆರೋಟೈಪ್​-2 ಡೆಂಘೆ ಜ್ವರ: 11 ರಾಜ್ಯಗಳಿಗೆ ಕೇಂದ್ರದ ಎಚ್ಚರಿಕೆ

VIDEO| ಬಾಲಿವುಡ್​ ಹೀರೋ ಇಮ್ರಾನ್​ ಹಶ್ಮಿ ಜಿಮ್​ ವರ್ಕೌಟ್​ ನೋಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 16 =
Remember me
