ಕೋಲ್ಕತ್ತ:ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆ ಅತ್ಯಂತ ದೊಡ್ಡ ಹಬ್ಬ. ಆದರೆ ಈ ಬಾರಿ ಕೊವಿಡ್​-19 ಇರುವುದರಿಂದ ಹಬ್ಬದ ಅದ್ದೂರಿ ಆಚರಣೆಗೆ ಕಡಿವಾಣ ಬೀಳುವ ಎಲ್ಲ ಸಾಧ್ಯತೆಗಳೂ ಇವೆ.
ಹೀಗಿರುವಾಗ ಕೋಲ್ಕತ್ತದ ದುರ್ಗಾ ಪೂಜಾ ಕ್ಲಬ್​ ದುರ್ಗಾ ದೇವಿಯ ದೊಡ್ಡ ಮೂರ್ತಿಯನ್ನು ಅನಾವರಣಗೊಳಿಸಿದೆ. ಇದೊಂದು ವಿಭಿನ್ನ ಪ್ರತಿಮೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ಕೊವಿಡ್​-19 ಬಗ್ಗೆ ಅರಿವು ಮೂಡಿಸುವ ಸಲುವಾಗಿ ದುರ್ಗಾ ಮಾತಾ ಮೂರ್ತಿಗೆ ಬೆಳ್ಳಿಯ ಮಾಸ್ಕ್​ ತೊಡಿಸಲಾಗಿದ್ದು, ಇದರ ತೂಕ ಸುಮಾರು 4 ಗ್ರಾಂ. ಹಾಗೇ ದೇವಿಯ 10 ಕೈಯಿಗಳಲ್ಲೂ ಸ್ಯಾನಿಟೈಸರ್​ ಬಾಟಲಿಯನ್ನೂ ಇಡಲಾಗಿದೆ.ಇದನ್ನೂ ಓದಿ:ಮತ್ತೆ ನ್ಯೂಕ್ಲಿಯರ್​ ದಾಳಿಯ ಗೊಡ್ಡು ಬೆದರಿಕೆಯನ್ನೊಡ್ಡಿದ ಪಾಕಿಸ್ತಾನ; ಅವರ ಅಸ್ತ್ರ ಪರ್ಫೆಕ್ಟ್​ ಇದ್ಯಂತೆ !
ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ 27,299 ಸಕ್ರಿಯ ಕರೊನಾ ಪ್ರಕರಣಗಳು ಇವೆ. ಇದೇ ಕಾರಣಕ್ಕೆ ಅಲ್ಲಿ ದುರ್ಗಾ ಪೂಜೆ ಆಚರಣೆಗಳೂ ವಿಳಂಬವಾಗುತ್ತಿದೆ. ಇದೆಲ್ಲದರ ಮಧ್ಯೆ ಈ ವಿಭಿನ್ನ ದುರ್ಗಾ ದೇವಿ ಎಲ್ಲರ ಗಮನ ಸೆಳೆಯುತ್ತಿದ್ದಾಳೆ.(ಏಜೆನ್ಸೀಸ್​)
ಹಾಸಿಗೆ ಮೇಲೆಯೇ ನಡೆಯಿತು ಹೃದಯಸ್ಪರ್ಶಿ ಮದುವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + sixteen =
Remember me
