ನವದೆಹಲಿ:ಮನಮೋಹನ್​ ಸಿಂಗ್​ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು 600 ಅತಿಕ್ರಮಣಗಳನ್ನು ಮಾಡಿ, ಭಾರತದ 43 ಸಾವಿರ ಕಿ.ಮೀ. ಭೂಪ್ರದೇಶವನ್ನು ವಶಪಡಿಸಿಕೊಂಡಿರುವುದಾಗಿ ಬಿಜೆಪಿ ಆರೋಪಿಸಿದೆ.
2010 ಮತ್ತು 2013ರ ಅವಧಿಯಲ್ಲಿ ಪಿಎಲ್​ಎಯಿಂದ ಈ ಅತಿಕ್ರಮಣಗಳು ಆಗಿವೆ. ಅದರ ಆರ್ಭಟಕ್ಕೆ ಹೆದರಿ, ಶರಣಾದ ಮನಮೋಹನ್​ ಸಿಂಗ್​ ನೇತೃತ್ವದ ಸರ್ಕಾರ ಚೀನಿಯರಿಗೆ ಭಾರತದ ಭೂಪ್ರದೇಶವನ್ನು ಸುಲಭವಾಗಿ ಬಿಟ್ಟುಕೊಟ್ಟಿತು ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸೋಮವಾರ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್​ ಮಾಡಿರುವ ಅವರು, ನಮ್ಮ ಬಲಿಷ್ಠ ಸೇನಾಪಡೆಯ ಪ್ರತಿಷ್ಠೆಗೆ ಮುಕ್ಕು ತರುವ ರೀತಿಯಲ್ಲಿ ಕನಿಷ್ಠ ಮಟ್ಟದ ಪ್ರತಿರೋಧವನ್ನೂ ತೋರಲು ಅವಕಾಶ ಕೊಡದೆ ಡ್ರ್ಯಾಗನ್​ಗೆ ಶರಣಾದ ಯುಪಿಎ ಸರ್ಕಾರ ಭಾರತದ ಭೂಭಾಗವನ್ನು ಬಿಟ್ಟುಕೊಟ್ಟಿತು ಎಂದು ದೂರಿದ್ದಾರೆ.ಲಡಾಖ್​ ಬಿಕ್ಕಟ್ಟಿನ ನಿರ್ವಹಣೆ ಕುರಿತು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಟೀಕಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ಭಾರತದ ಭೂಭಾಗವನ್ನು ಚೀನಿಯರ ವಶಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆಗೆ ಜೆ.ಪಿ. ನಡ್ಡಾ ಪ್ರತಿಕ್ರಿಯಿಸಿದ್ದಾರೆ.
ತಪ್ಪು ಮಾಹಿತಿ ನೀಡುವುದು ರಾಜನೀತಿಜ್ಞತೆಗೆ ಅಥವಾ ನಿರ್ಣಾಯಕ ನಾಯಕತ್ವ ಎಂಬ ಪದಗಳಿಗೆ ಪರ್ಯಾಯವಾಗುವುದಿಲ್ಲ ಎಂದು ಹೇಳಿರುವ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಭಾರತದ 130 ಕೋಟಿ ಜನರಿಗೆ ನಂಬಿಕೆ ಇದೆ. ಅತ್ಯಂತ ಕಠಿಣ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ ಅವರ ಚಾಕಚಕ್ಯತೆಯನ್ನು ಜನರು ಸೂಕ್ಷ್ಮವಾಗಿ ಗಮನಿಸಿ, ಒಪ್ಪಿಕೊಂಡಿದ್ದಾರೆ. ತಮ್ಮನ್ನು ತಾವು ಮರೆದು ರಾಷ್ಟ್ರದ ಹಿತಕಾಯುವ ಅವರ ಕರ್ತವ್ಯನಿಷ್ಠೆ ಎಷ್ಟು ಎಂಬುದು ಅವರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚೀನಿಯರ ಅತಿಕ್ರಮಣ ಹಿಮ್ಮೆಟ್ಟಿಸಲು ಪರ್ವತಶ್ರೇಣಿಯ ಸಮರಕಲಿಗಳ ನಿಯೋಜನೆ
ಚೀನಾದ ಬೆದರಿಕೆಯನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿರಬೇಕು ಎಂಬ ಮನಮೋಹನ್​ ಸಿಂಗ್​ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನಡ್ಡಾ, ಚೀನಾವನ್ನು ಮಣಿಸಲು ಇಡೀ ರಾಷ್ಟ್ರವೇ ಒಂದಾಗಿದೆ. ಆದರೆ ಈ ಒಗ್ಗಟ್ಟನ್ನು ಮುರಿಯುವ ರೀತಿಯಲ್ಲಿ ವರ್ತಿಸುತ್ತಿರುವವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಈಗಲಾದರೂ ಮನಮೋಹನ್​ ಸಿಂಗ್​ ಅವರು ತಮ್ಮ ಪಕ್ಷದವರಿಗೆ ಒಗ್ಗಟ್ಟನ್ನು ಮುರಿಯುವಂಥ ಹೇಳಿಕೆಗಳನ್ನು ನೀಡದಂತೆ ಹೇಳಬೇಕು ಎಂದು ಸಲಹೆ ನೀಡಿದ್ದಾರೆ.
ಸೇನಾಪಡೆ ಯೋಧರನ್ನು ಅವಮಾನಿಸುವ, ಅವರ ಧೈರ್ಯ, ಸಾಹಸವನ್ನು ಅಲ್ಲಗಳೆಯುವ ಮನೋಭಾವವನ್ನು ನಿಲ್ಲಿಸುವಂತೆ ಕಾಂಗ್ರೆಸ್​ ಮುಖಂಡರಲ್ಲಿ ಜೆ.ಪಿ. ನಡ್ಡಾ ಮನವಿ ಮಾಡಿಕೊಂಡಿದ್ದಾರೆ.
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲಿನ ಸರ್ಜಿಕಲ್​ ದಾಳಿ ಮತ್ತು ವೈಮಾನಿಕ ದಾಳಿಯ ನಂತರದಲ್ಲೂ ಇಂಥ ಸಾಧ್ಯತೆ ಬಗ್ಗೆ ಕಾಂಗ್ರೆಸ್​ನವರು ಪ್ರಶ್ನಿಸಿ, ಟೀಕಿಸಿದ್ದರು. ಚೀನಾದ ವಿಷಯದಲ್ಲೂ ಅವರು ಹೀಗೆಯೇ ನಡೆದುಕೊಳ್ಳುತ್ತಿದ್ದಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಾದರೂ ಕಾಂಗ್ರೆಸ್​ನವರು ರಾಷ್ಟ್ರೀಯ ಏಕತೆಯ ಮಹತ್ವವನ್ನು ಅರಿತು ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಚೀನಾ ಗುರಿಯಾಗಿಸಿ ಕ್ಷಿಪಣಿ ಸಜ್ಜುಗೊಳಿಸಿರುವ ಜಪಾನ್​; ಯಾವುದರ ಮುನ್ಸೂಚನೆ ಇದು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − three =
Remember me
