ಹೈದರಾಬಾದ್​:ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕಮ್ಮಾರನ ಕುಲುಮೆಯಲ್ಲಿ ಉರಿವ ಬೆಂಕಿಯಲ್ಲಿ ಕಬ್ಬಿಣದ ಸಾಮಾನುಗಳನ್ನು ಕಾಯಿಸಿ ಸುತ್ತಿಗೆಯಿಂದ ತಟ್ಟಿಕೊಡುವ ಮೂಲಕ ಮತ್ತೊಮ್ಮೆ ತಮ್ಮ ಬಾಲ್ಯದ ವೃತ್ತಿಪರತೆಯನ್ನು ಪ್ರದರ್ಶಿಸಿದರು.
ಇದನ್ನೂ ಓದಿ:ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಜುಲೈ 31 ಗಡುವು: ಯಾರೆಲ್ಲ ತೆರಿಗೆ ಸಲ್ಲಿಸಬೇಕು? ಫಾರ್ಮ್​ ಯಾವುದು? ಇಲ್ಲಿದೆ ಮಾಹಿತಿ..
ತೆಲಂಗಾಣದ ರಾಜಣ್ಣಸಿರಿಸಿಲ್ಲ ಜಿಲ್ಲೆಯ ವೇಮುಲವಾಡ ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾಗೇಂದ್ರ ಚಾರಿ ಅವರು ಕರ್ತವ್ಯದ ಅಂಗವಾಗಿ ಚಂದೂರ್ತಿ ಮಂಡಲದ ಮಲ್ಯಾಳ ಗ್ರಾಮಕ್ಕೆ ತೆರಳಿದ್ದರು. ವಾಪಸ್ಸು ಬರುವಾಗ ದಾರಿಯ ಬದಿಯಲ್ಲಿ ಅಕ್ಕಸಾಲಿಗನ ಕುಲುಮೆಯನ್ನು ಕಂಡು ತನ್ನ ವಾಹನ ನಿಲ್ಲಿಸಿದರು. ಬಳಿಕ ಕುಲುಮೆ ಹತ್ತಿರ ಹೋಗಿ ಕುಲುಮೆಯಲ್ಲಿ ಕೆಲಸ ಮಾಡುತ್ತಿದ್ದವನ ಹತ್ತಿರ ಮಾತನಾಡಿದರು.
ಕೃಷಿ ಪರಿಕರಗಳನ್ನು ಸಾಣೆ ಮಾಡುತ್ತಾ, ಬಾಲ್ಯದಲ್ಲಿ ತಂದೆಗೆ ಸಹಾಯ ಮಾಡಿದ ನೆನಪುಗಳನ್ನು ಕಮ್ಮಾರನೊಂದಿಗೆ ಮೆಲುಕು ಹಾಕುತ್ತಾ ಸಂತಸದಲ್ಲಿ ಮುಳುಗಿದರು. ಅಧಿಕಾರಿ ಹುದ್ದೆಯಲ್ಲಿದ್ದರೂ, ಬಾಲ್ಯದ ಕೆಲಸ ಮರೆಯದೆ ಜಾತಿ ವೃತ್ತಿಯ ಬಗ್ಗೆ ಅವರಿಗಿದ್ದ ಗೌರವವನ್ನು ಕಂಡು ಗ್ರಾಮಸ್ಥರು ಬೆರಗಾದರು. ಬಳಿಕ ಕುಲುಮೆಯಲ್ಲಿ ಕಬ್ಬಿಣದ ಸಾಮಾನುಗಳನ್ನು ಸರಿಪಡಿಸಿದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಡಿವೈಎಸ್ ಪಿ.ನಾಗೇಂದ್ರ ಅವರ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮನುಷ್ಯ ಎಂತಹ ಉನ್ನತ ಹುದ್ದೆಯಲ್ಲಿದ್ದರೂ ತಾನು ಹುಟ್ಟಿ ಬೆಳೆದ ನೆಲೆಯನ್ನು ಮರೆಯಬಾರದು ಎಂಬುದು ಹಲವರ ಅಭಿಪ್ರಾಯ. ಅಧಿಕಾರಿಯ ಈ ಕೆಲಸಕ್ಕೆ ಶ್ಲಾಘನೆಯ ಮಹಾಪೂರ ಹರಿದುಬರುತ್ತಿದೆ.
ಹೆಂಡತಿ ಗೆಲ್ಲಬೇಕೆಂದು.. ಹೀರೋ ಉರುಳು ಸೇವೆ! ವೀಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + five =
Remember me
