ಮತ್ಸ್ಯ ಯೋಜನೆಯ ಪ್ರಮುಖಾಂಶಗಳು
* ಮೀನುಗಾರಿಕೆ ವಲಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ
* ಕೃಷಿ ವಲಯದ ನಿರುಪಯುಕ್ತ ವಸ್ತುಗಳನ್ನು ಮೀನುಗಾರಿಕೆಯಲ್ಲಿ ಬಳಸಲು ಚಿಂತನೆ, ಇದರಿಂದ ಕೃಷಿ ತ್ಯಾಜ್ಯ ಇಳಿಕೆ
* ಜಲಚರ ಸಾಕಣೆಗಾಗಿ ಕೊಳ, ಫಿನ್ ಫಿಶ್ ಮೊಟ್ಟೆ ಕೇಂದ್ರಗಳು, ಹೊಸ ಕೊಳಗಳ ನಿರ್ಮಾಣ
* ಅಲಂಕಾರಿಕ ಮೀನು ಸಾಕಣೆ ಘಟಕಗಳು, ಶೈತ್ಯೀಕರಣ ವಾಹನಗಳು, ಐಸ್ ಬಾಕ್ಸ್ ಸಹಿತ ವಾಹನಗಳಿಗೆ ನೆರವು
* ಮೀನು ಸಾಕಣೆದಾರರಿಗೆ ಸಕಾಲದಲ್ಲಿ ಕೈಗೆಟಕುವ ದರದಲ್ಲಿ ಗುಣಮಟ್ಟದ ಮೀನು ಮೊಟ್ಟೆ ಲಭ್ಯತೆ
* ಜಲ ಹಾಗೂ ಮಣ್ಣು ಪರೀಕ್ಷೆ ಕೇಂದ್ರಗಳ ನಿರ್ಮಾಣ
ನವದೆಹಲಿ:ಮೀನುಗಾರಿಕೆ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್​ವೈ) ಮತ್ತು ಕೃಷಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಲು ಇ-ಗೋಪಾಲ ಆಪ್​ಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಮೀನುಗಾರಿಕೆ ಕ್ಷೇತ್ರದಲ್ಲಿ ಸುಮಾರು 20,500 ಕೋಟಿ ರೂ. ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದು ಮೀನುಗಾರಿಕೆ ವಲಯದ ಈವರೆಗಿನ ಅತಿದೊಡ್ಡ ಹೂಡಿಕೆಯಾಗಲಿದೆ. ಇದರಲ್ಲಿ ಸಾಗರ, ಒಳನಾಡು ಮೀನುಗಾರಿಕೆಗಾಗಿ ಸುಮಾರು 12,340 ಕೋಟಿ ರೂ. ಹಾಗೂ ಮೀನುಗಾರಿಕೆ ಮೂಲಸೌಕರ್ಯಕ್ಕಾಗಿ ಸುಮಾರು 7,710 ಕೋಟಿ ರೂ. ಹೂಡಿಕೆಯಾಗಲಿದೆ.
ಇದನ್ನೂ ಓದಿ:VIDEO: ಪಾರ್ಕ್​​ಗಳು ಮತ್ತೆ ತೆರೆದ ಖುಷಿಯಲ್ಲಿ ಪರಮಾವಧಿ ಮೂರ್ಖತನ ತೋರಿದ ಸಾರ್ವಜನಿಕರು
ಬಿಹಾರದ ಪುರ್ನಿಯಾದಲ್ಲಿ 75 ಎಕರೆ ಪ್ರದೇಶದಲ್ಲಿ 84.27 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಜಾನುವಾರು ವೀರ್ಯ ಕೇಂದ್ರವನ್ನೂ ಮೋದಿ ಉದ್ಘಾಟಿಸಿದ್ದಾರೆ. ಇದರ ಜತೆಗೆ ಬಿಹಾರದ 1,390 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಕೇಂದ್ರದ ಪಾಲು 535 ಕೋಟಿ ರೂ. ನೆರವನ್ನು ಪ್ರಧಾನಿ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲಿ 4 ಲಕ್ಷದ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲೇ ಲಕ್ಷ ಮೀರಿದೆ
ಕೃಷಿಕರ ಮಿತ್ರ ಇ-ಗೋಪಾಲ
ಕೃಷಿಕರಿಗೆ ತಳಿ ಅಭಿವೃದ್ಧಿ ಮತ್ತು ಇತರೆ ಮಾಹಿತಿಗಳನ್ನು ನೀಡಲು ಇ-ಗೋಪಾಲ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ಪಶುಗಳಿಗೆ ಲಸಿಕೆ ಹಾಕಿಸುವ ದಿನಾಂಕ, ನೀಡಬೇಕಾದ ಪೌಷ್ಟಿಕಾಂಶ, ಆಹಾರದ ಬಗ್ಗೆ ಇದರಲ್ಲಿ ಮಾಹಿತಿ ನೀಡಲಾಗುತ್ತದೆ. ಪಶುಗಳಿಗೆ ಕಾಲಕಾಲಕ್ಕೆ ಸೂಕ್ತ ಔಷಧ ನೀಡಿ ಅವುಗಳ ಆರೈಕೆ ಮಾಡುವುದು, ಇನ್ನಿತರ ಅಗತ್ಯ ಮಾಹಿತಿಗಳು ಇದರಲ್ಲಿ ಲಭ್ಯವಿರಲಿವೆ. ಇದು ನಮ್ಮ ಶ್ರಮಶೀಲ ರೈತರಿಗೆ ಸಮಗ್ರ ತಳಿ ಸುಧಾರಣಾ ಮಾರುಕಟ್ಟೆ ಮತ್ತು ಮಾಹಿತಿಯನ್ನು ಒದಗಿಸುತ್ತದೆ. ಇದು ನವೀನ ಪ್ರಯತ್ನವಾಗಿದ್ದು, ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಎಂದು ಮೋದಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ದೇಶದಲ್ಲಿ ಜಾನುವಾರುಗಳನ್ನು ನಿರ್ವಹಿಸುವ ರೈತರಿಗೆ ಈವರೆಗೆ ಯಾವುದೇ ಡಿಜಿಟಲ್ ವೇದಿಕೆ ಲಭ್ಯವಿರಲಿಲ್ಲ. ಆದರೆ ಪ್ರಸ್ತುತ ಬಿಡುಗಡೆಗೊಳಿಸಲಾಗಿರುವ ಇ-ಗೋಪಾಲ ಅಪ್ಲಿಕೇಷನ್​ನಿಂದ ರೈತರಿಗೆ ಜಾನುವಾರುಗಳ ಕೃತಕ ಗರ್ಭಧಾರಣೆ, ಪ್ರಥಮ ಚಿಕಿತ್ಸೆ, ವ್ಯಾಕ್ಸಿನೇಷನ್ ಹಾಗೂ ಇತ್ಯಾದಿಗಳಿಗೆ ಮಾರ್ಗದರ್ಶನ ಪಡೆಯಬಹುದು.
2019ರ ಜುಲೈ 5ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ಸ್ಯ ಸಂಪದ ಯೋಜನೆಯನ್ನು ಘೊಷಿಸಿದ್ದರು. ಆತ್ಮನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21 ರಿಂದ 2024-25ರವರೆಗೆ 5 ವರ್ಷಗಳಲ್ಲಿ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದು ಜಾರಿಯಾಗಲಿದೆ. ಸುಮಾರು 20 ಲಕ್ಷ ಜನರು ಫಲಾನುಭವಿಗಳಾಗಲಿದ್ದಾರೆ.
ಇದನ್ನೂ ಓದಿ:ಪಬ್‌ಜಿ ಆಡಬೇಡ ಎಂದಿದ್ದಕ್ಕೆ ಈ ಹುಡುಗ ಹೀಗೆ ಮಾಡೋದಾ?
ಯೋಜನೆ ಮೂಲಕ ಮೀನುಗಾರಿಕೆ ಕ್ಷೇತ್ರವನ್ನು ಹೆಚ್ಚು ಅಭಿವೃದ್ಧಿಪಡಿಸಲು ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 2024-25ರ ವೇಳೆಗೆ ಹೆಚ್ಚುವರಿ 70 ಲಕ್ಷ ಟನ್ ಮೀನುಗಾರಿಕೆ ಉತ್ಪನ್ನ ರಫ್ತು ಮಾಡುವ ಗುರಿ ಹೊಂದಲಾಗಿದೆ. ಮೀನು ಸಾಕಣೆದಾರರ ಆದಾಯ ದುಪ್ಪಟ್ಟುಗೊಳಿಸುವುದರ ಜತಗೆ ಮತ್ಸ್ಯ ಉತ್ಪನ್ನಗಳ ರಫ್ತಿನಿಂದ 1 ಲಕ್ಷ ಕೋಟಿ ರೂ. ಆದಾಯವನ್ನು ಸರ್ಕಾರ ನಿರೀಕ್ಷಿಸಿದೆ.
ಇದನ್ನೂ ಓದಿ:ವಾಹನದ ನಂಬರ್​ ಪ್ಲೇಟ್​ಗೆ ಕೆಸರು ಮೆತ್ತಿಕೊಂಡು 3 ಕೊಲೆ ಮಾಡಿದ್ದವರ ಬಂಧನ
ಕೊಯ್ಲು ನಂತರದ ನಷ್ಟವನ್ನು ಶೇಕಡ 20-25 ರಿಂದ ಶೇಕಡ 10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಮೀನು ಉತ್ಪಾದನೆ ಹೆಚ್ಚಳಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಯೋಜನೆ ರೂಪಿಸಿದ್ದು, ನೀರು ಮತ್ತು ಮಣ್ಣಿನ ಪರೀಕ್ಷೆ, ರೋಗ ಪರೀಕ್ಷೆ ಕೇಂದ್ರಗಳ ಮೂಲಕ ಮೀನುಗಾರರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ:ಬ್ಯಾಡ್ಮಿಂಟನ್: ಪಿವಿ ಸಿಂಧು, ಶ್ರೀಕಾಂತ್‌ಗೆ ಭಾರತ ತಂಡಗಳ ಸಾರಥ್ಯ
ಮತ್ಸ್ಯ ಸಂಪದ ಯೋಜನೆಯ ಪ್ರಯೋಜನವು ಮೀನುಗಾರ ಸಮುದಾಯಕ್ಕೆ ಸೇರಿದ ಜನರಿಗೆ ಮಾತ್ರ ಲಭ್ಯವಿರುತ್ತದೆ. ಮೀನುಗಾರಿಕೆಯನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್​ನೊಂದಿಗೆ ಸಂರ್ಪಸಲಾಗಿದ್ದು, ಮೀನುಗಾರರು ಶೇ. 4 ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗಿನ ಸಾಲವನ್ನು ಸುಲಭವಾಗಿ ಪಡೆಯಬಹುದು. ಒಂದು ವೇಳೆ ಮೀನುಗಾರರು ಮುಂಚಿತವಾಗಿ ಸಾಲ ಮರುಪಾವತಿ ಮಾಡಿದಲ್ಲಿ ಅವರಿಗೆ ಕಡಿಮೆ ಬಡ್ಡಿಯನ್ನು ವಿಧಿಸಲಾಗುತ್ತದೆ.
ಡ್ರಗ್ ಕೇಸ್: ಬಂಧಿತ ನಟಿಯರಿಗೆ ಚಿಕನ್ ಬಿರಿಯಾನಿ ಕೊಡಿಸಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + eleven =
Remember me
