ನವದೆಹಲಿ:20 ಕೋಟಿ ರೂಪಾಯಿ ವ್ಯವಹಾರ ಹೊಂದಿದ ಕಂಪನಿಗಳು ಈ ವರ್ಷ ಏಪ್ರಿಲ್​ 1ರಿಂದ ಕಡ್ಡಾಯವಾಗಿ ಸ್ವಯಂಚಾಲಿತವಾಗಿ ಇಲೆಕ್ಟ್ರಾನಿಕ್​ ಇನ್​ವಾಯ್ಸ್​ ರೂಪಿಸಬೇಕೆಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್​ ಮಂಡಳಿ (ಸಿಬಿಐಟಿಸಿ) ಹೇಳಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕಾನೂನು ಅನ್ವಯ ಬಿಸಿನೆಸ್​ ಟು ಬಿಸಿನೆಸ್​ (ಬಿ-ಟು-ಬಿ) ವ್ಯವಹಾರಗಳಿಗೆ ಇದು ಕಡ್ಡಾಯ ಎಂದು ಅದು ತಿಳಿಸಿದೆ.
ಕಳೆದ ವರ್ಷ ಏಪ್ರಿಲ್​ 1ರಿಂದ 50 ಕೋಟಿ ರೂಪಾಯಿ ಮೇಲ್ಪಟ್ಟ ಬಿ ಟು ಬಿ ವ್ಯವಹಾರದವರಿಗೆ ಇ&ಇನ್​ವಾಯ್ಸ್​ ಕಡ್ಡಾಯಗೊಳಿಸಲಾಗಿದೆ. ಅದನ್ನು ಈಗ 20 ಕೋಟಿ ವ್ಯವಹಾರದ ಕಂಪೆನಿಗಳಿಗೂ ವಿಸ್ತರಿಸಲಾಗಿದೆ. ಒಂದು ವೇಳೆ ಈ ನಿಯಮವನ್ನು ಪಾಲಿಸದಿದ್ದರೆ ಆ ಕಂಪೆನಿಗಳಿಗೆ ಇನ್​ಪುಟ್​ ಟ್ಯಾಕ್ಸ್​ ಕ್ರೆಡಿಟ್​ ಸೌಲಭ್ಯ ಪಡೆಯಲು ಆಗುವುದಿಲ್ಲ. ಮಾತ್ರವಲ್ಲದೆ ದಂಡವನ್ನೂ ವಿಧಿಸಲಾಗುತ್ತದೆ. ಈ ಕ್ರಮದಿಂದಾಗಿ ನಿಯಮ ಪಾಲನೆ ಸರಳವಾಗುತ್ತದೆ ಹಾಗೂ ತೆರಿಗೆ ತಪ್ಪಿಸಿಕೊಳ್ಳುವುದನ್ನು ತಡೆಯಲು ಸಾಧ್ಯವಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − three =
Remember me
