ಗ್ವಾಲಿಯರ್​:ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೆ ರಿಕ್ಷಾದಲ್ಲಿ ಮೃತದೇಹ ಕೊಂಡೊಯ್ಯುವಂಥ ಪರಿಸ್ಥಿತಿ ಒಂದು ಕಡೆ ಬಂದಿದ್ದು, ಆ ಕುರಿತ ವಿಡಿಯೋ ವೈರಲ್ ಆಗಿದೆ. ರಿಕ್ಷಾದಲ್ಲಿ ಶವ ಇರಿಸಿಕೊಂಡು ಮುಂದಿಬ್ಬರು ಕೂತಿದ್ದ ವಿಡಿಯೋ/ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಸಾರ್ವಜನಿಕರು ಈ ಕುರಿತು ಪ್ರಶ್ನಿಸಿ ವಿಡಿಯೋ ಮಾಡಿದ್ದರು. ಆಟೋ ಒಂದರಲ್ಲಿ ಶವವನ್ನು ಇರಿಸಿಕೊಂಡು ಹೋಗುತ್ತಿದ್ದಾಗ, ಯಾಕೆ ಎಂದು ವಿಡಿಯೋ ಮಾಡಿದ್ದವರು ಪ್ರಶ್ನೆ ಮಾಡಿದ್ದರು.
ಸಂಬಂಧಿಕರ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ತೆಗೆದುಕೊಂಡು ಹೋಗುತ್ತಿದ್ದು, ಆ್ಯಂಬುಲೆನ್ಸ್ ಲಭ್ಯವಿರದ ಕಾರಣ ಆಟೋದಲ್ಲಿ ಒಯ್ಯಲಾಗುತ್ತಿದೆ ಎಂದು ರಿಕ್ಷಾದಲ್ಲಿದ್ದವರು ಉತ್ತರಿಸಿದ್ದರು. ಈ ಕುರಿತ ವಿಡಿಯೋ ವೈರಲ್​ ಆಗಿದ್ದು, ಅಲ್ಲಿನ ಜಿಲ್ಲಾಧಿಕಾರಿಗೂ ಮಾಹಿತಿ ತಲುಪಿದೆ.
ಇದನ್ನೂ ಓದಿ:ಪ್ರಯಾಣದಲ್ಲಿದ್ದ ತಮಿಳುನಾಡು ಸಚಿವರಿಗೆ ಹಠಾತ್ ಎದೆನೋವು; ನಾರಾಯಣ ಹೆಲ್ತ್​ ಸಿಟಿಗೆ ಕರೆ ತರುತ್ತಿರುವ ಬೆಂಬಲಿಗರು
ವಿಡಿಯೋ ವೈರಲ್ ಆಗುವವರೆಗೂ ಆ್ಯಂಬುಲೆನ್ಸ್ ಕೊರತೆ ಕುರಿತು ಮಾಹಿತಿ ಇರಲಿಲ್ಲ. ಈ ಕುರಿತು ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಲ್ಲಿನ ಕಲೆಕ್ಟರ್​ ಅಕ್ಷಯ್​ ಕುಮಾರ್​ ಸಿಂಗ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಗ್ವಾಲಿಯರ್​​ನ ವಲಿ ಚಂಬೊಲ್ ವಲಯದ ಜೈರೋಗ್ಯ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ ಎನ್ನಲಾಗಿದ್ದು, ಈ ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಮಾಫಿಯಾ ದುಬಾರಿ ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪವೂ ಇದೆ. –ಏಜೆನ್ಸೀಸ್
ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’

ಮದುವೆ ಫೋಟೋಗ್ರಫಿಗೆ ಹೋದವಳು ವರನೊಂದಿಗೇ ಅಫೇರ್ ಇಟ್ಟುಕೊಂಡಳು​; ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ ವಧು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 1 =
Remember me
