ಎನ್​ಐಎ ತನಿಖೆಯಲ್ಲಿ ಸಂಚು ಬಯಲು | ಪಾಕ್ ಉಗ್ರರ ಮಟ್ಟ ಹಾಕಲು ಮೋದಿ ಪಣ
ಭಾರತದಲ್ಲಿ ದಿನೇ ದಿನೆ ನೆಲೆ ವಿಸ್ತರಿಸಿಕೊಳ್ಳುತ್ತಿರುವ ಐಸಿಸ್ ಭಯೋತ್ಪಾದಕರು ಜಿಲ್ಲಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಮುನ್ನುಗ್ಗುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಬಳ್ಳಾರಿ ಐಸಿಸ್ ಮಾಡ್ಯುಲ್ ಪ್ರಕರಣದ ತನಿಖೆ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ. ಮತ್ತೊಂದೆಡೆ ಕಾಶ್ಮೀರದ ನಾಲ್ಕೂ ದಿಕ್ಕುಗಳಲ್ಲಿ ಅಡಗಿ ಹಿಂಸಾಕೃತ್ಯ ಆರಂಭಿಸಿರುವ ಪಾಕ್ ಪ್ರೇರೇಪಿತ ಉಗ್ರರ ಬೇಟೆಗೆ ಪ್ರಧಾನಿ ನರೇಂದ್ರ ಮೋದಿ ಕಹಳೆ ಮೊಳಗಿಸಿದ್ದಾರೆ.
ವಿಜಯವಾಣಿ ಸುದ್ದಿಜಾಲಬೆಂಗಳೂರು
ಭಾರತದಲ್ಲಿ ಭಯೋತ್ಪಾದನೆ ಮಟ್ಟಹಾಕಲು ಪ್ರಧಾನಿ ನರೇಂದ್ರ ಮೋದಿ ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ ಹೊತ್ತಲ್ಲೇ ದೇಶದ ಪ್ರತಿ ಜಿಲ್ಲೆಯಲ್ಲಿ 50 ಸ್ಲೀಪರ್ ಸೆಲ್​ಗಳನ್ನು ನಿರ್ವಿುಸಿಸಲು ಐಸಿಸ್ ಉಗ್ರರು ಸಂಚು ರೂಪಿಸಿದ್ದ ಆತಂಕಕಾರಿ ಸಂಗತಿ ಎನ್​ಐಎ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಬಳ್ಳಾರಿ ಐಸಿಸ್ ಮಾಡ್ಯೂಲ್ ತನಿಖೆ ನಡೆಸುತ್ತಿರುವ ಎನ್​ಐಎ ಅಧಿಕಾರಿಗಳು ಗುರುವಾರ ಬೆಂಗಳೂರು ನಗರದ ವಿಶೇಷ ಕೋರ್ಟ್​ಗೆ ಸಲ್ಲಿಸಿದ 7 ಶಂಕಿತ ಆರೋಪಿಗಳ ವಿರುದ್ಧದ ಆರೋಪಪಟ್ಟಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದೆ. ಏಳು ಶಂಕಿತರಿಗೆ ಸ್ಲೀಪರ್ ಸೆಲ್​ಗಳಾಗಿ ಕಾರ್ಯನಿರ್ವಹಿಸಲು ಜಿಹಾದಿ ಬೋಧನೆ ಮಾಡಲಾಗಿತ್ತು. ಇದರ ಹಿಂದೆ ಜಿಹಾದಿಗಳು ಮತ್ತು ಐಸಿಸ್ ಕೈವಾಡ ಇರುವುದು ಬೆಳಕಿಗೆ ಬಂದಿದೆ.
2025ರ ವೇಳೆಗೆ ಭಾರತದ ಪ್ರತಿ ಜಿಲ್ಲೆಗಳಲ್ಲಿ ತಲಾ 50 ಸ್ಲೀಪರ್ ಸೆಲ್ ನಿರ್ವಿುಸುವ ಐಸಿಸ್ ಪಿತೂರಿಯ ಭಾಗ ಬಳ್ಳಾರಿ ಐಸಿಎಸ್ ಮಾಡ್ಯೂಲ್ ಆಗಿತ್ತು. ಶಂಕಿತರು ಐಸಿಸ್ ಸಿದ್ಧಾಂತ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇದರ ಆಧಾರದ ಮೇಲೆ ಐಪಿಸಿ, ಯುಎ(ಪಿ) ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಪೋಟಕ ವಸ್ತುಗಳ ಕಾಯ್ದೆ ವಿವಿಧ ಸೆಕ್ಷನ್​ಗಳ ಅಡಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ. 2023ರ ಡಿಸೆಂಬರ್​ನಲ್ಲಿ ಬಳ್ಳಾರಿ ಐಸಿಸ್ ಮ್ಯಾಡೂಲ್ ಜಾಲ ಪತ್ತೆಹಚ್ಚಲಾಗಿತ್ತು.
ಟಾರ್ಗೆಟ್ ಯಾರು?:ಭಾರತೀಯ ಸೈನಿಕರು, ಪೊಲೀಸರು, ಹಿಂದು ಮುಖಂಡರ ಮೇಲೆ ಗೆರಿಲ್ಲಾ ದಾಳಿ ನಡೆಸಲು ಸ್ಲೀಪರ್ ಸೆಲ್​ಗಳನ್ನು ಐಸಿಸ್​ಗೆ ಸೇರ್ಪಡೆ ಮಾಡುವುದೇ 7 ಶಂಕಿತರ ಟಾರ್ಗೆಟ್ ಆಗಿತ್ತು. ಗೆರಿಲ್ಲಾ ದಾಳಿಗೆ ಬೇಕಾದ ಸುಧಾರಿತ ಸ್ಪೋಟಕ ಬಳಸಿ ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರ ನಡೆಸಲು ಪ್ಲಾ್ಯನ್ ಮಾಡಿದ್ದರು. ಬಳ್ಳಾರಿಯಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಪೋಟಿಸಿ ಪರೀಕ್ಷೆ ಮಾಡಿದ್ದರು. ಯುವಕರಿಗೆ ಪ್ರಚೋದನೆ ನೀಡುವ ಉದ್ದೇಶಕ್ಕೆ ಜಿಹಾದ್ ಸಂಬಂಧಿತ ಡಿಜಿಟಲ್ ದಾಖಲೆ, ಡೇಟಾವನ್ನು ಯುವಕರಿಗೆ ಪೂರೈಕೆ ಮಾಡುತ್ತಿದ್ದರು.
ಎನ್​ಐಎ ತನಿಖೆ ವೇಳೆ ಸ್ಪೋಟಕ ಸಾಮಗ್ರಿಗಳು, ಹರಿತವಾದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿತ್ತು. ಈ ವಸ್ತುಗಳನ್ನು ಬಳಸಿಕೊಂಡು ಜಿಹಾದ್ ಅಥವಾ ಕ್ಯಾಲಿಫೇಟ್ ದಾಳಿ ನಡೆಸಬೇಕೆಂದು ಪ್ರಚೋದನೆ ನೀಡುತ್ತಿದ್ದರು. ಐಸಿಸ್ ಸೇರಿದಂತೆ ವಿವಿಧ ಉಗ್ರ ಸಂಘಟನೆಗಳು ಪ್ರಕಟಿಸಿದ ಫಿದಾಯಿನ್ ದಾಳಿಗೆ ಸಂಬಂಧಿಸಿದ ಪ್ರಚಾರ ನಿಯತಕಾಲಿಕೆಗಳು ಮತ್ತು ಡಿಜಿಟಲ್ ಸಾಧನಗಳು, ಐಸಿಸ್ ಮಾರ್ಗಸೂಚಿ ಜಪ್ತಿ ಮಾಡಲಾಗಿದೆ. ಈ ಎಲ್ಲವನ್ನು ಆರೋಪಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ ಎಂದು ಎನ್​ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಬಯಾತ್ ಸ್ವೀಕಾರ:ಐಸಿಸ್​ನ ಶಂಕಿತ ಸುಲೈಮಾನ್ ಮಿನಾಜ್​ನಿಂದ ಆರು ಶಂಕಿತರು ಬಯಾತ್ (ನಿಷ್ಠೆಯ ಪ್ರತಿಜ್ಞೆ) ಸ್ವೀಕರಿಸಿದ್ದರು. ಈ ಗುಂಪನ್ನು ಆಮೀರ್ ಎಂದು ಘೊಷಿಸಿಕೊಂಡಿದ್ದರು. ಮಿನಾಜ್ ಅಲ್ಲದೆ, ಎನ್​ಐಎ ಆರೋಪಪಟ್ಟಿಯಲ್ಲಿ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀರ್ ಮತ್ತು ಎಂಡಿ ಮುಝುಮ್ಮಿಲ್ ಹೆಸರು ಸೇರಿಸಲಾಗಿದೆ. ಮಹಾರಾಷ್ಟ್ರದ ನಿವಾಸಿ ಅನಾಸ್ ಇಕ್ಬಾಲ್ ಶೇಖ್, ಮೊಹಮ್ಮದ್. ಜಾರ್ಖಂಡ್​ನ ಶಹಬಾಜ್ ಜುಲ್ಪಿಕರ್ ಮತ್ತು ದೆಹಲಿಯ ಶಯಾನ್ ರೆಹಮಾನ್ ಹುಸೇನ್ ಈ ಎಲ್ಲರೂ ಉಗ್ರ ಪಿತೂರಿಯಲ್ಲಿ ಭಾಗಿಯಾಗಿದ್ದರು.
ಕ್ಯಾಲಿಫೇಟ್ ಜಾರಿ ಗುರಿ:ಜಿಹಾದ್ ನಡೆಸುವ ಮೂಲಕ ಭಾರತದಲ್ಲಿ ಕ್ಯಾಲಿಫೇಟ್ (ಇಸ್ಲಾಂನಲ್ಲಿ ಅರೆ-ಧಾರ್ವಿುಕ ರಾಜಕೀಯ ಆಡಳಿತ) ವ್ಯವಸ್ಥೆ ಸ್ಥಾಪಿಸುವ ಗುರಿಯನ್ನು ಐಸಿಸ್ ಹೊಂದಿತ್ತು. ಇದರ ಭಾಗವಾಗಿ ಗೆರಿಲ್ಲಾ ಮಾದರಿ ದಾಳಿ ನಡೆಸಲು ಮತ್ತು ದೇಶದ ಎಲ್ಲ ಜಿಲ್ಲೆಗಳಲ್ಲಿ ತಲಾ 50 ಸ್ಲೀಪರ್ ಸೆಲ್​ಗಳ ತಂಡ ರಚಿಸಲಾಗುತ್ತಿತ್ತು. ಜತೆಗೆ ಸ್ಪೋಟಕ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದರು.
ನವದೆಹಲಿ:ನರೇಂದ್ರ ಮೋದಿ 3.0 ಸರ್ಕಾರ ರಚನೆಯಾದ ದಿನವೇ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ರಕ್ತದೋಕುಳಿ ನಡೆಸಿದ್ದ ಉಗ್ರರ ಹುಟ್ಟಡಗಿಸುವ ಕಾರ್ಯ ಶುರುವಾಗಿದೆ. ರಿಯಾಸಿ, ಕಥುವಾ ಮತ್ತು ದೋಡಾ ಜಿಲ್ಲೆಗಳಲ್ಲಿ ಕಳೆದ ನಾಲ್ಕು ದಿನದಲ್ಲಿ ನಡೆದ ಮೂರು ಉಗ್ರ ದಾಳಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಭದ್ರತಾ ಸಲಹೆಗಾರ(ಎನ್​ಎಸ್​ಎ) ಸ್ಥಾನಕ್ಕೆ ಸತತ ಮೂರನೇ ಬಾರಿ ಅಜಿತ್ ದೋವಲ್ ಅವರನ್ನು ನೇಮಕ ಮಾಡಿದ್ದಾರೆ. ದೋವಲ್ ನೇತೃತ್ವದಲ್ಲೇ ಗುರುವಾರ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಉಗ್ರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ. ಅದರ ಬೆನ್ನಲ್ಲೇ, ಹಿಂದು ಯಾತ್ರಿಕರಿದ್ದ ಬಸ್ ಮೇಲೆ ನಡೆದ ಉಗ್ರ ದಾಳಿ ಪ್ರಕರಣ ಸಂಬಂಧ 50ಕ್ಕೂ ಹೆಚ್ಚು ಶಂಕಿತರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಕಾಶ್ಮೀರದಲ್ಲಿ ನಡೆದ ಮೂರು ಪ್ರತ್ಯೇಕ ದಾಳಿ ಘಟನೆಯಲ್ಲಿ 9 ಯಾತ್ರಿಕರು, ಓರ್ವ ಸಿಆರ್​ಪಿಎಫ್ ಜವಾನ ಮೃತಪಟ್ಟಿದ್ದಾರೆ. ಜತೆಗೆ ಏಳು ಭದ್ರತಾ ಸಿಬ್ಬಂದಿ ಸಹಿತ ಹಲವರು ಗಾಯಗೊಂಡಿದ್ದಾರೆ.

ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ರಚನೆ ಆಗಬಹುದೆಂಬ ಕನಸು ಕಂಡಿದ್ದ ಪಾಕಿಸ್ತಾನ ಮತ್ತು ಚೀನಾ ಭಾರತದಲ್ಲಿ ಅಶಾಂತಿಯೆಬ್ಬಿಸಲು ಸಂಚು ರೂಪಿಸಿದ್ದು, ಸಿಪಿಇಸಿ (ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್) ಮಾರ್ಗದ ಮೂಲಕ ಉಗ್ರರನ್ನು ಭಾರತಕ್ಕೆ ನುಸುಳಿಸುವ ಕುತಂತ್ರ ಶುರುವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ಮೋದಿ ಭಾರತದ ಭಯೋತ್ಪಾದನಾ ನಿಗ್ರಹ ಸಾಮರ್ಥ್ಯ ಹೆಚ್ಚಿಸುವ ಜತೆಗೆ ಕಣಿವೆಯಲ್ಲಿ ಸಂಪೂರ್ಣ ಭದ್ರತಾ ಶ್ರೇಣಿ ನಿಯೋಜಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಉಗ್ರರು ನುಸುಳಬಹುದಾದ ನಾಲ್ಕೂ ದಿಕ್ಕುಗಳಲ್ಲಿ ಕಣ್ಗಾವಲಿಟ್ಟು, ಶತ್ರುಗಳ ಕುತಂತ್ರ ವಿಫಲಗೊಳಿಸುವಂತೆ ಗೃಹ ಸಚಿವ ಅಮಿತ್ ಷಾ ಕೂಡ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಏತನ್ಮಧ್ಯೆ ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ರಕ್ಷಣಾ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇನ್ನು ಪರಿಸ್ಥಿತಿ ಅವಲೋಕಿಸಲು ಮೋದಿ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜತೆ ಕೂಡ ರ್ಚಚಿಸಿದ್ದಾರೆ.
ತಲೆಗೆ 20 ಲಕ್ಷ ಘೋಷಣೆ:ಕಾಶ್ಮೀರ ಉಗ್ರ ದಾಳಿ ಪ್ರಕರಣದಲ್ಲಿ ಶಂಕಿತ ಭಯೋತ್ಪಾದಕನ ರೇಖಾಚಿತ್ರವನ್ನು ತನಿಖಾ ಸಂಸ್ಥೆ ಬಿಡುಗಡೆ ಮಾಡಿದೆ. ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದೆ.
ಪಾಕ್-ಚೀನಾಗೆ ನಡುಕ:ಪಾಕ್, ಚೀನಾ ಕುತಂತ್ರ ಮಟ್ಟಹಾಕುವ ಕಾರ್ಯ ಮತ್ತೆ ಭಾರತದ ಜೇಮ್ಸ್​ಬಾಂಡ್ ಖ್ಯಾತಿಯ ಅಜಿತ್ ದೋವಲ್ ಮುಡಿಗೇರಿದೆ. ಸತತ ಮೂರನೇ ಬಾರಿಗೆ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರನ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಪಾಕಿಸ್ತಾನಿ ಉಗ್ರರ ವಿರುದ್ಧದ ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ವಾಯುದಾಳಿ ಸೇರಿ ಹಲವು ಕಾರ್ಯಾಚರಣೆಗಳಿಗೆ ದೋವಲ್ ಅವರೇ ಸೂತ್ರಧಾರಿ. ಹೀಗಾಗಿ ದೋವಲ್ ಮೂರನೇ ಅವಧಿ ಮತ್ತಷ್ಟು ಕಠಿಣವಾಗಿರಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
* ಆರ್ಟಿಕಲ್ 370 ರದ್ದತಿಯ ಬಳಿಕ ಕಾಶ್ಮೀರ ಅಭಿವೃದ್ಧಿ
* ಅಭಿವೃದ್ಧಿಶೀಲ ಕಾಶ್ಮೀರದ ಮೇಲೆ ಪಾಕ್​ಗೆ ಹೊಟ್ಟೆಉರಿ
* ಲೋಕಸಭೆ ಚುನಾವಣೆ ಯಶಸ್ಸಿನ ಬಳಿಕ ಹೆಚ್ಚಿದ ಮತ್ಸರ
* ವಿಧಾನಸಭೆ ಚುನಾವಣೆ ಸಿದ್ಧತೆ ವಿಫಲಗೊಳಿಸಲು ಹುನ್ನಾರ
* ಕಣಿವೆ ರಾಜ್ಯದಲ್ಲಿ ಸುಭದ್ರ ಸರ್ಕಾರ ಬರಬಾರದೆಂಬ ತಂತ್ರ
* ಕಾಶ್ಮೀರದಲ್ಲಿ ಭಯೋತ್ಪಾದನೆ ಜೀವಂತವಾಗಿಡುವ ಕುತಂತ್ರ
* ಇದೇ ಕಾರಣಕ್ಕೆ ಪಾಕಿಸ್ತಾನದ ಜತೆ ಸೇರಿ ದುಷ್ಕೃತ್ಯಕ್ಕೆ ಸಂಚು
. ಮೋದಿ ವರ್ಚಸ್ಸಿನಿಂದ ಕಂಗೆಟ್ಟ ಪಾಕಿಸ್ತಾನ, ಚೀನಾ
. ಮೋದಿ ಪ್ರಮಾಣವಚನದಂದೇ ಕಾಶ್ಮೀರದಲ್ಲಿ ಉಗ್ರರ ದಾಳಿ
. ಹಿಂದು ಯಾತ್ರಿಕರಿದ್ದ ಬಸ್ ಮೇಲೆ ನಡೆದಿದ್ದ ದಾಳಿ
. ಸಿಪಿಇಸಿ ಮೂಲಕ ಉಗ್ರರ ನುಸುಳುವ ಷಡ್ಯಂತ್ರ
. ಚೀನಾ, ಪಾಕ್ ಕುತಂತ್ರ ವಿಫಲಗೊಳಿಸಿದ ಭಾರತ
. ಅರುಣಾಚಲವನ್ನು ತನ್ನ ನಕ್ಷೆಯಲ್ಲಿ ಸೇರಿಸಿದ್ದ ಚೀನಾ
ಬೆಳಗ್ಗೆ ರಾಷ್ಟ್ರಗೀತೆಯೊಂದಿಗೆ ಶಾಲೆಗಳನ್ನು ಆರಂಭಿಸಲು ಜಮ್ಮು ಕಾಶ್ಮೀರ ಸರ್ಕಾರ ಸೂಚನೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಶಾಲೆ, ಮನೆಗಳಿಗೆ ಬೆಂಕಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 8 =
Remember me
