ನವದೆಹಲಿ:ಒಂದೆಡೆ ಭಾರತ ಕರೊನಾ ಪಿಡುಗಿನ ವಿರುದ್ಧ ಹೋರಾಡುತ್ತಿರುವಾಗಲೇ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಸಂಜೆ 5.45ರಲ್ಲಿ ಲಘು ಭೂಕಂಪ ಸಂಭವಿಸಿದೆ.
ರಿಕ್ಟರ್​ ಮಾಪದಲ್ಲಿ 3.5ರ ತೀವ್ರತೆ ದಾಖಲಾಗಿದೆ. ಭೂಕಂಪದಿಂದ ಹಾನಿಯಾಗಿರುವ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ.
ಭೂಮಿ ನಡಗುತ್ತಿರುವಂತೆ ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇದ್ದ ಜನರು ಭಯಭೀತರಾಗಿ ಹೊರಗೋಡಿ ಬಂದರು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಭೂಮಿ ಕೆಲವು ಸೆಕೆಂಡ್​ಗಳವರೆಗೆ ನಡುಗಿತು ಎನ್ನಲಾಗಿದೆ. ಜೋರಾದ ಸದ್ದು ಕೇಳಿತು. ನಾನು ಕುಳಿತಿದ್ದ ಕುರ್ಚಿ ಅಲ್ಲಾಡಲಾರಂಭಿಸಿತು. ಆ ಅನುಭವ ತುಂಬಾ ಭಯಾನಕವಾಗಿತ್ತು ಎಂದು ಪೂರ್ವ ದೆಹಲಿಯ ನಿವಾಸಿ ಎಸ್​. ದಾಮ್ಲೆ ಹೇಳಿದ್ದಾರೆ.
ಕಂಪನದ ಅನುಭವ ಹಂಚಿಕೊಂಡಿರುವ ಲಾಜ್​ಪತ್​ ನಗರದ 1ರ ನಿವಾಸಿ ಆರೇಫಾ ಸುಲ್ತಾನ, ನಾವಿ ಟಿವಿ ನೋಡುತ್ತಿದ್ದೆವು. ಭೂಮಿ ಅಲುಗಾಡಿದ ಅನುಭವವಾಯಿತು. ತಕ್ಷಣವೇ ಮನೆಯಿಂದ ಹೊರಗೋಡಿ ಬಂದೆವು. ಅದಾಗಲೇ ನೆರೆಹೊರೆಯ ಕೆಲವರು ಮನೆಯಿಂದ ಹೊರಗೆ ಬಂದು ನಿಂತಿದ್ದರು. ಅವರೆಲ್ಲರನ್ನೂ ದೂರದಿಂದಲೇ ಮಾತನಾಡಿಸಿ ಮನೆಯೊಳಗೆ ಬಂದೆವು ಎಂದು ತಿಳಿಸಿದ್ದಾರೆ.
ಭೂಕಂಪನವಾದ ಬಗ್ಗೆ ಟ್ವೀಟ್​ ಮಾಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​, ಎಲ್ಲರೂ ಸುರಕ್ಷಿತವಾಗಿದ್ದೀರಿ ಎಂದು ಭಾವಿಸಿದ್ದೇನೆ. ನಿಮ್ಮೆಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಮಾಸ್ಕ್​ ಧರಿಸಿ ಇಲ್ಲವೇ 5 ಸಾವಿರ ರೂ. ಜುಲ್ಮಾನೆ ಪಾವತಿಸಿ ಅಥವಾ 3 ವರ್ಷ ಸೆರೆವಾಸ ಶಿಕ್ಷೆ ಅನುಭವಿಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
