ನವದೆಹಲಿ:ಭಾನುವಾರ ಬೆಳಗ್ಗೆ ಪಾಕಿಸ್ತಾನದ ಹಲವೆಡೆ 6.0 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ ಮತ್ತು ನಿವಾಸಿಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ.
ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದ ಗಡಿ ಪ್ರದೇಶವಾಗಿದ್ದು ಇದು 223 ಕಿಮೀ ಆಳದಲ್ಲಿ ಹುಟ್ಟಿಕೊಂಡಿತ್ತು. ಭೂಮಿಯ ಇಸ್ಲಾಮಾಬಾದ್‌ನ ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಪ್ರಕಾರ ಆಳದಲ್ಲಿ ಭೂಕಂಪ ಶುರುವಾಗಿದ್ದರಿಂದ ವಿನಾಶಕಾರಿ ಪರಿಣಾಮ ಗಣನೀಯವಾಗಿ ಕಡಿಮೆಯಾಗಿದೆ.
#Earthquakepossibly felt 29 sec ago in#Pakistan. Felt it? Tell us via:📱https://t.co/LBaVNedgF9🌐https://t.co/AXvOM7I4Th🖥https://t.co/wPtMW5ND1t⚠ Automatic crowdsourced detection, not seismically verified yet. More info soon!pic.twitter.com/XrQc6U1zfa
— EMSC (@LastQuake)May 28, 2023

ಇಸ್ಲಾಮಾಬಾದ್, ಪೇಶಾವರ, ಸ್ವಾತ್, ಹರಿಪುರ್, ಮಲಕಂದ್, ಅಬೋಟಾಬಾದ್, ಬಾತ್‌ಗ್ರಾಮ್, ಪಾಕ್ ಆಕ್ರಮಿತ ಕಾಶ್ಮೀರ, ಟೆಕ್ಸ್ಲಿಯಾ, ಪಿಂಡ್ ದಾದನ್ ಖಾನ್ ಮತ್ತು ದೇಶದ ಹಲವಾರು ಭಾಗಗಳಲ್ಲಿ ಆಘಾತಗಳು ವರದಿಯಾಗಿವೆ.
ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಹರಿಯಾಣ ಮತ್ತು ನವದೆಹಲಿ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಲಘು ಕಂಪನದ ಅನುಭವವಾಗಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ. ಪಾಕಿಸ್ತಾನವು ಆಗಾಗ್ಗೆ ವಿವಿಧ ಪ್ರಮಾಣದ ಭೂಕಂಪಗಳಿಗೆ ಸಾಕ್ಷಿಯಾಗಿದೆ. 2005ರಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ 74,000ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − one =
Remember me
