ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ರಿಕ್ಟರ್​ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪ ಸಂಭವಿಸಿದೆ. ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ನಷ್ಟದ ಕುರಿತು ವರದಿಯಾಗಿಲ್ಲ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೇ ತೀವ್ರತೆಯಲ್ಲಿ ಮೂರನೇ ಬಾರಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ (ಎನ್​ಸಿಎಸ್​) ತಿಳಿಸಿದೆ. ಈ ಹಿಂದೆ ಏಪ್ರಿಲ್​ 12 ಹಾಗೂ 13ರಂದು ಕೂಡ ಭೂಕಂಪ ಸಂಭವಿಸಿತ್ತು.
ಇದನ್ನೂ ಓದಿ;ನೇಪಾಳದಲ್ಲಿ ಸಂಭವಿಸಿದ ಭೂಕಂಪಕ್ಕೆ ಕುಸಿಯಿತಾ ಮೌಂಟ್ ಏವರೆಸ್ಟ್​?
ಭಾನುವಾರ ಸಂಭವಿಸಿದ ಭೂಕಂಪದ ಕೇಂದ್ರಬಿಂದು ಈಶಾನ್ಯ ದೆಹಲಿಯ ವಾಜಿಪುರ ಆಗಿದೆ ಎಂದು ಎನ್​ಸಿಎಸ್​ನ ನಿರ್ವಹಣಾ ಮುಖ್ಯಸ್ಥ ಜೆ.ಎಲ್​. ಗೌತಮ್​ ಮಾಹಿತಿ ನೀಡಿದ್ದಾರೆ.
ಈ ಮೊದಲು ಸಂಭವಿಸಿದ ಭೂಕಂಪಗಳಿಗೂ ಕೂಡ ಇದರ ಸುತ್ತಮುತ್ತಲಿನ ಪ್ರದೇಶಗಳೇ ಕೇಂದ್ರಸ್ಥಾನಗಳಾಗಿದ್ದವು. ಏಪ್ರಿಲ್​ 12ರಂದು 3.5 ಹಾಗೂ ಏಪ್ರಿಲ್​ 13ರಂದು 2.7 ತೀವ್ರತೆಯಲ್ಲಿ ಭೂಕಂಪನವಾಗಿತ್ತು. ಅಂದಾಜು ಐದು ಕಿ.ಮೀ. ಆಳದಲ್ಲಿ ಇದರ ಕೇಂದ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ;ಮೌಂಟ್​ ಎವರೆಸ್ಟ್​ ಬುಡಕ್ಕೂ ಬಂತು ಚೀನಾ ಗಡಿ ತಂಟೆ ವಿವಾದ
ದೆಹಲಿ ಭೂಕಂಪನದ ನಾಲ್ಕನೇ ವಲಯಕ್ಕೆ ಸೇರುತ್ತದೆ. 2004ರಲ್ಲಿ 2.8 ತೀವ್ರತೆಯ ಭೂಕಂಪವಾಗಿತ್ತು. ಇದಕ್ಕೂ ಹಿಂದೆ 2001ರಲ್ಲಿ 3.4 ತೀವ್ರತೆಯಲ್ಲಿ ಭೂಮಿ ನಡುಗಿತ್ತು. ಇದಕ್ಕೂ ಹಿಂದೆ ಅಂದರೆ, 1956ರಲ್ಲಿ ಬುಲಂದ್​ಶಹರ್​ ಬಳಿ 6.7 ತೀವ್ರತೆಯ ಭಾರಿ ಭೂಕಂಪವಾಗಿತ್ತು ಅ ಎಂದು ಅಧಿಕಾರಿಗಳು ಅಂಕಿ-ಅಂಶ ನೀಡಿದ್ದಾರೆ.
ಕಾರ್ಮಿಕರನ್ನು ಬೆಂಗಳೂರಿಗೆ ಕರೆತರಲು ಜಿಲ್ಲೆಗಳಿಂದ ಹೊರಡುತ್ತಿವೆ ವಿಶೇಷ ಬಸ್​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
