ನವದೆಹಲಿ:ಕರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದ್ದು, ಇದೀಗ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಪುನಃ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಕರೊನಾ ಲಸಿಕೆಯ ಎರಡೂ ಡೋಸ್​ಗಳನ್ನು ಪಡೆದುಕೊಂಡಿದ್ದು, ವಿದೇಶ ಪ್ರಯಾಣ ಮಾಡಲಿಚ್ಛಿಸುವ ಭಾರತೀಯರು ಅಂತರರಾಷ್ಟ್ರೀಯ ಸ್ಟ್ಯಾಂಡರ್ಡ್​ನಂತೆ ತಮ್ಮ ಕೋವಿನ್​ ಮೂಲಕ ಲಸಿಕೆ ಸರ್ಟಿಫಿಕೇಟ್ ಪಡೆಯಬಹುದಾಗಿದೆ.
ಡಬ್ಲ್ಯೂಎಚ್​​ಒ ಮಾನದಂಡದಂತೆ ಜನ್ಮದಿನಾಂಕವನ್ನು ತೋರಿಸುವ ವ್ಯಾಕ್ಸಿನ್​ ಸರ್ಟಿಫಿಕೇಟ್​ಗಳನ್ನು ಕೋ-ವಿನ್​ ಪೋರ್ಟಲ್​​ನಲ್ಲಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ(ಎನ್​ಎಚ್​ಎ) ಮುಖ್ಯಸ್ಥ ಆರ್​.ಎಸ್​.ಶರ್ಮ ತಿಳಿಸಿದ್ದಾರೆ. ಹಾಲಿ, ಜನಿಸಿದ ವರ್ಷದ ಮಾಹಿತಿಯ ಆಧಾರದ ಮೇಲೆ ವಯಸ್ಸನ್ನು ಮಾತ್ರ ಸರ್ಟಿಫಿಕೇಟಿನಲ್ಲಿ ಬಿಂಬಿಸಲಾಗುತ್ತಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಚಿಕಿತ್ಸೆಗೆ ಟೆಲಿ ರೊಬಾಟಿಕ್ ಅಲ್ಟ್ರಾಸೌಂಡ್: ಕನ್ನಡಿಗನ ವಿನೂತನ ಸಂಶೋಧನೆ
ಇದೀಗ ಲಸಿಕೆ ಫಲಾನುಭವಿಗಳು ಕೋವಿನ್​ ಪೋರ್ಟಲ್​ಗೆ ಹೋಗಿ ತಮ್ಮ ಪಾಸ್​ಪೋರ್ಟ್​ನಲ್ಲಿರುವಂತೆ ಜನ್ಮದಿನಾಂಕವನ್ನು ‘yyyy-mm-dd’ ಫಾರ್ಮಾಟ್​ನಲ್ಲಿ ಅಪ್ಡೇಟ್​ ಮಾಡಬಹುದು. ತದನಂತರ ಅಂತರರಾಷ್ಟ್ರೀಯ ಯಾತ್ರಿಕರಿಗೆ ಅವಶ್ಯಕವಾಗಿರುವ ರೀತಿಯಲ್ಲಿ ಜನ್ಮದಿನಾಂಕದ ವಿವರದೊಂದಿಗೆ ವ್ಯಾಕ್ಸಿನ್​ ಸರ್ಟಿಫಿಕೇಟನ್ನು ಡೌನ್ಲೋಡ್​ ಮಾಡಿಕೊಳ್ಳಬಹುದು ಎಂದು ಶರ್ಮ ತಿಳಿಸಿದ್ದಾರೆಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.(ಏಜೆನ್ಸೀಸ್)
ಭಾರತದಿಂದ ನೇರ ವಿಮಾನಗಳಿಗೆ ಪ್ರವೇಶ ನೀಡಿದ ಕೆನಡಾ

ವಿದ್ಯಾರ್ಥಿಗಳಿಗೆ ಸಿಹಿಸುದ್ದಿ: ಅಮೆರಿಕದಲ್ಲಿ STEM ಉನ್ನತ ವ್ಯಾಸಂಗಕ್ಕೆ ‘ಖ್ವಾಡ್​ ಫೆಲೋಶಿಪ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
