ಹೊಸದಿಲ್ಲಿ:ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಟ್ವೀಟ್​ ಸದ್ಯ ಭಾರೀ ವಿವಾದಕ್ಕೆ ತಿರುಗಿದ್ದು, ದ್ವೀಪರಾಷ್ಟ್ರದ ವಿರುದ್ಧ ದೇಶವ್ಯಾಪಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದೀಗ ಈ ವಿವಾದಗಳ ಬೆನ್ನಲ್ಲೇ ಹೆಸರಾಂತ ಟ್ರಾವೆಲ್ ಏಜೆನ್ಸಿ ‘ಈಸ್​ ಮೈ ಟ್ರಿಪ್’​ ಮಾಲ್ಡೀವ್ಸ್‌ನತ್ತ ಸಾಗಬೇಕಿದ್ದ ತನ್ನೆಲ್ಲಾ ವಿಮಾನದ ಬುಕಿಂಗ್ಸ್​ಗಳನ್ನು ಸ್ಥಗಿತಗೊಳಿಸಿದೆ.
ಇದನ್ನೂ ಓದಿ:ಕೊರಗಜ್ಜ ಚಿತ್ರಕ್ಕೆ ಗೋಪಿ ಸಂಗೀತ; ಸುಧೀರ್ ಅತ್ತಾವರ್ ನಿರ್ದೇಶನದ ಸಿನಿಮಾ
ಕಳೆದ 48 ಗಂಟೆಗಳಲ್ಲಿ ಅನೇಕ ಭಾರತೀಯರು ಮಾಲ್ಡೀವ್ಸ್​ಗೆ ತೆರಳಲು ಮಾಡಿದ್ದ ಬುಕಿಂಗ್ ಅನ್ನು ವ್ಯಾಪಕವಾಗಿ ರದ್ದುಗೊಳಿಸಿದ್ದು, ನಮ್ಮ ಭಾರತವನ್ನು ದ್ವೇಷಿಸುವ ದೇಶಕ್ಕೆ ಹೋಗಲು ಭಾರೀ ಹಣವನ್ನು ಖರ್ಚು ಮಾಡುವುದರಲ್ಲಿ ಅರ್ಥವಿಲ್ಲ ಎಂದು ಎಕ್ಸ್​ನಲ್ಲಿ (ಈ ಹಿಂದೆ ಟ್ವಿಟರ್​) ಪೋಸ್ಟ್​ ಮಾಡುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ಪ್ರಧಾನಿಗಳು ಲಕ್ಷದ್ವೀಪ ಭೇಟಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್‌ಗಳು ವ್ಯಾಪಕವಾಗಿ ಹರಿದಾಡಿದ್ದು, ಇದನ್ನು ಗಮನಿಸಿದ ಭಾರತೀಯ ಆನ್‌ಲೈನ್ ಟ್ರಾವೆಲ್ ಏಜೆನ್ಸಿಯಾದ ‘ಈಸ್​ ಮೈ ಟ್ರಿಪ್’ (EaseMyTrip) ಮಾಲ್ಡೀವ್ಸ್‌ಗೆ ಹೋಗಬೇಕಿದ್ದ ಎಲ್ಲಾ ವಿಮಾನಗಳ ಬುಕಿಂಗ್​ಗಳನ್ನು ಇದೀಗ ದಿಢೀರ್​ ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.
ಇದನ್ನೂ ಓದಿ:ಅಕಾಲ ಬಡ್ತಿಯಿಂದ ಅಡಕತ್ತರಿಯಲ್ಲಿ ಮಕ್ಕಳ ಭವಿಷ್ಯ: ಶಿಕ್ಷಣ ಇಲಾಖೆ ತೀರ್ಮಾನ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ಮಾರಕ
ತಮ್ಮ ಎಕ್ಸ್​ನಲ್ಲಿ ಬರೆದುಕೊಂಡ ‘ಈಸ್​ ಮೈ ಟ್ರಿಪ್’ ಸಂಸ್ಥಾಪಕರಾದ ನಿಶಾಂತ್ ಪಿಟ್ಟಿ, “ಒಗ್ಗಟ್ಟಿನಿಂದ ನಮ್ಮ ರಾಷ್ಟ್ರದೊಂದಿಗೆ ಇದೀಗ ಈಸ್​ ಮೈ ಟ್ರಿಪ್​ ಎಲ್ಲಾ ಮಾಲ್ಡೀವ್ಸ್ ಫ್ಲೈಟ್ ಬುಕಿಂಗ್ ಅನ್ನು ಸ್ಥಗಿತಗೊಳಿಸಿದೆ” ಎಂದು ಟ್ವೀಟ್ ಮಾಡಿದ್ದಾರೆ. ಇದು ನಮ್ಮ ದೇಶಕ್ಕೆ ನೀಡುತ್ತಿರುವ ಬೆಂಬಲ ಎಂಬುದನ್ನು ಕೂಡ ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ಈ ರಾಜ್ಯದಿಂದ ಬರಲಿದೆ ರಾಮನ ಚಿತ್ರಗಳಿರುವ ವಿಶೇಷ ಸೀರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
