ನವದೆಹಲಿ:ಸಾಮಾನ್ಯ ಜನರಿಗೆ ಬಾಹ್ಯಾಕಾಶಕ್ಕೆ ತೆರಳಲು ಅವಕಾಶ ಸಿಗುವುದೇ ಇಲ್ಲ. ಬಾಹ್ಯಾಕಾಶಕ್ಕೆ ಹೋಗಿಬಂದವರು ಅಥವಾ ಉಪಗ್ರಹಗಳು ರವಾನಿಸಿದ ಬಾಹ್ಯಾಕಾಶದ ಚಿತ್ರಗಳನ್ನು ನೋಡಿ, ಹಾಂ, ಬಾಹ್ಯಾಕಾಶದಲ್ಲಿ ಹೀಗೆಲ್ಲಾ ಇದೆಯಾ ಎಂದು ನಿಬ್ಬೆರಗಾಗಿ ನೋಡುತ್ತಾ ನಿಲ್ಲಲಷ್ಟೇ ಅವರು ಶಕ್ತರು. ಅಂಥದ್ದರಲ್ಲಿ ಬಾಹ್ಯಾಕಾಶಕ್ಕೆ ಹೋಗದೆ, ಭೂಮಿಯೇ ಮೇಲೆಯೇ ಅಲ್ಲಿನ ವಾತಾವರಣದ ವಾಸನೆ ಹೇಗಿದೆ ಎಂಬುದನ್ನು ಅರಿತುಕೊಳ್ಳಲು ಸಾಧ್ಯವಾದರೆ…!?
ಕೆಲವರ ಇಂಥ ಆಲೋಚನೆಯೇ ವಿಶಿಷ್ಟ ಸುಗಂಧದ್ರವ್ಯ ಸಿದ್ಧಪಡಿಸಲು ಕಾರಣವಾಗಿದೆ. ಯು ಡೆ ಸ್ಪೇಸ್​ ಎಂಬ ಹೆಸರಿನಲ್ಲಿ ಬಾಹ್ಯಾಕಾಶದ ವಾತಾವರಣದಲ್ಲಿರುವ ವಾಸನೆಯನ್ನೇ ಹೋಲುವ ಈ ಸುಗಂಧದ್ರವ್ಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಅಕ್ಟೋಬರ್​ನಲ್ಲಿ ಈ ಸುಗಂಧದ್ರವ್ಯದ ಪರಿಮಳ ವಿಶ್ವಾದ್ಯಂತ ಹರಡಲು ಆರಂಭವಾಗಲಿದೆ.
ಬಾಹ್ಯಾಕಾಶದ ವಾತಾವರಣದಲ್ಲಿನ ವಾಸನೆ ಹೇಗಿರುತ್ತದೆ ಎಂಬುದನ್ನು ತರಬೇತಿನಿರತ ಬಾಹ್ಯಾಕಾಶಯಾನಿಗಳಿಗೆ ತೋರಿಸಿಕೊಡುವ ಆಲೋಚನೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾಕ್ಕೆ 2008ರಲ್ಲಿ ಬಂದಿತು. ತಕ್ಷಣವೇ ಅದು ಒಮೇಗಾ ಇಂಗ್ರೀಡಿಯೆಂಟ್ಸ್​ ಎಂಬ ರಾಸಾಯನಿಕ ಮಳಿಗೆಯ ಮಾಲೀಕ ರಾಸಾಯನಶಾಸ್ತ್ರಜ್ಞ ಸ್ಟೀವ್​ ಪಿಯರ್ಸ್​ ಅವರನ್ನು ಸಂಪರ್ಕಿಸಿತು.
ಇದನ್ನೂ ಓದಿ:ಭಾರತದ ಮೊದಲ ಕೋವಿಡ್​ ಚುಚ್ಚುಮದ್ದು ಕೊವಾಕ್ಸಿನ್​ ಸಿದ್ಧವಾಗಿದ್ದು ಹೀಗೆ…
ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹೋದಾಗ ಅಲ್ಲಿನ ಯಾವುದೇ ಒಂದು ಪರಿಸ್ಥಿತಿಯನ್ನು ಕಂಡು ಅಚ್ಚರಿಗೆ ಒಳಗಾಗಬಾರದು ಎಂಬುದು ನಾಸಾದ ಉದ್ದೇಶವಾಗಿತ್ತು. ಅದರಂತೆ ಅದು, ಅಲ್ಲಿನ ವಾತಾವರಣದ ವಾಸನೆಯನ್ನು ಸೃಷ್ಟಿಸಿ ಗಗನಯಾತ್ರಿಗಳ ತರಬೇತಿ ವೇಳೆ ಬಳಸಲು ನಿರ್ಧರಿಸಿತ್ತು ಎಂದು ಒಮೇಗಾ ಇಂಗ್ರೀಡಿಯೆಂಟ್ಸ್​ ಹೇಳಿಕೊಂಡಿದೆ.
ಬಾಹ್ಯಾಕಾಶಕ್ಕೆ ತೆರಳಿ ಸಾಕಷ್ಟು ಕಾಲ ಅಲ್ಲಿದ್ದು ಭೂಮಿಗೆ ಮರಳಿದ ಬಾಹ್ಯಾಕಾಶಯಾನಿಗಳ ಸಹಾಯಪಡೆದು, ಯು ಡೆ ಸ್ಪೇಸ್​ ಸುಗಂಧದ್ರವ್ಯವನ್ನು ಸಿದ್ಧಪಡಿಸಲಾಗಿದೆ. ಅವರ ಪ್ರಕಾರ ಬಾಹ್ಯಾಕಾಶದಲ್ಲಿ ಕಬಾಬ್​ ಬೇಯಿಸುವಾಗ ಬರುವ ವಾಸನೆ, ರಾಸಪ್​ಬೆರ್ರಿಗಳ ವಾಸನೆ ಮತ್ತು ರಂನ ವಾಸನೆಯಂತೆ ಇರುತ್ತದೆ ಎಂದು ಹೇಳಿದ್ದರು. ಅವೆಲ್ಲವನ್ನೂ ಮೇಳೈಸಿ ಇದೀಗ ಯು ಡೆ ಸ್ಪೇಸ್​ ಸುಗಂಧದ್ರವ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದೆ.
ಅಂದಾಜು ನಾಲ್ಕು ವರ್ಷ ಸತತ ಶ್ರಮದ ಬಳಿಕ ಈ ಸುಗಂಧದ್ರವ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಯು ಡೆ ಸ್ಪೇಸ್​ ಉತ್ಪನ್ನದ ವ್ಯವಸ್ಥಾಪಕ ಮ್ಯಾಟ್​ ರಿಚ್​ಮಂಡ್​ ಹೇಳಿದ್ದಾರೆ. ಕೆ-12 ವಿದ್ಯಾರ್ಥಿಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್​ ಮತ್ತು ಗಣಿತಶಾಸ್ತ್ರದಲ್ಲಿ ಆಸಕ್ತಿ ಮೂಡುವಂತೆ ಮಾಡಲು ಈ ಸುಂಗಧದ್ರವನ್ನು ಬಳಸಿಕೊಳ್ಳುವುದಾಗಿ ಕಂಪನಿ ಹೇಳಿಕೊಂಡಿದೆ.
ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + five =
Remember me
