ಕ್ಯಾಲಿಫೋರ್ನಿಯ:ಆನ್​ಲೈನ್​ ಷಾಪಿಂಗ್​ ವೆಬ್​ಸೈಟ್​ಗಳ ಮೂಲಕ ವಸ್ತುಗಳನ್ನು ಖರೀದಿ ಮಾಡಿದಾಗ, ಸಹಜವಾಗಿ ವಿಮರ್ಶೆಗಳನ್ನು (ರಿವ್ಯೂ) ಬರೆಯುವಂತೆ ಅಲ್ಲಿ ಕೇಳಲಾಗುತ್ತದೆ, ಇಲ್ಲವೇ ಸ್ಟಾರ್​ಗಳನ್ನು ಹಾಕುವಂತೆ ಸೂಚಿಸಲಾಗುತ್ತದೆ.
ಹಾಗೆಂದು ಪ್ರತಿಸಲವೂ ಒಳ್ಳೆಯ ವಿಮರ್ಶೆಯನ್ನೇ ಹಾಕಬೇಕು ಎಂದರೆ ಹೇಗೆ? ಕೆಟ್ಟ ವಿಮರ್ಶೆ ಬರೆದ ಕಾರಣ, ಇಲ್ಲಿನ ದಂಪತಿ ಷಾಪಿಂಗ್​ ತಾಣದಿಂದ ಇನ್ನಿಲ್ಲದ ಕಿರುಕುಳ ಬಂದಿದೆ.
ಇಂಥ ಕಿರುಕುಳ ನೀಡುತ್ತಿರುವ ಆರೋಪ ಹೊತ್ತ ಆನ್​ಲೈನ್​ ಷಾಪಿಂಗ್​ ತಾಣ ಇ-ಬೇ. ಆನ್​ಲೈನ್​ ಪತ್ರಿಕೆಯ ಸಂಪಾದಕ ಹಾಗೂ ಪಬ್ಲಿಷರ್‌ ದಂಪತಿ ಇ-ಬೇ ವಿರುದ್ಧ ಇದೀಗ ದೂರು ದಾಖಲಿಸಿದ್ದು, ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಪುರಿ ಜಗನ್ನಾಥನೇ ನಮ್ಮನ್ನು ಕ್ಷಮಿಸುವುದಿಲ್ಲ ಎಂದ ಸುಪ್ರೀಂ ಕೋರ್ಟ್​
ಅಷ್ಟಕ್ಕೂ ಆಗಿರುವುದು ಏನೆಂದರೆ, ಇ-ಬೇ ತಾಣದಿಂದ ಕೆಲವೊಂದು ವಸ್ತುಗಳನ್ನು ಖರೀದಿಸಿದ್ದ ದಂಪತಿಗೆ ಅದರ ಸೇವೆ ಸರಿಯಾಗಿ ಇಲ್ಲ ಎಂದು ಎನಿಸಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ರಿಕೆಯಲ್ಲಿ ಈ ಕಂಪನಿ ವಿರುದ್ಧ ವಿಮರ್ಶೆ ಬರೆದಿದ್ದಾರೆ. ಇ-ಬೇ ಕಂಪನಿಯು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಗ್ರಾಹಕರಿಗೆ ಸರಿಯಾದ ಸೇವೆ ಒದಗಿಸುತ್ತಿಲ್ಲ ಎಂದು ಹೇಳಿದ್ದಾರೆ.
ಇದರಿಂದ ಸಿಡಿದೆದ್ದಿರುವ ಕಂಪೆನಿ ಇವರ ಜೀವಂತ ಜೇಡಗಳು ಹಾಗೂ ಜಿರಲೆಗಳನ್ನು ಕಳಿಸುತ್ತಿದೆ. ಸಾಲದು ಎಂಬುದಕ್ಕೆ ರಕ್ತಭರಿತ ಹಂದಿಯನ್ನು ಹೋಲು ಮಾಸ್ಕ್​ಗಳು, ಅಶ್ಲೀಲ ಸಾಹಿತ್ಯಗಳು, ಶವಸಂಸ್ಕಾರದ ವಸ್ತುಗಳು ಕೂಡ ಇವರ ಮನೆಗೆ ಬಂದಿವೆ.ಅಷ್ಟೇ ಅಲ್ಲದೇ, ದಂಪತಿಯ ಕಾರಿನಲ್ಲಿ ಜಿಪಿಎಸ್ ಸಾಧನವನ್ನೂ ಅಳವಡಿಸಿದ್ದರು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ದಂಪತಿ ದೂರು ದಾಖಲು ಮಾಡಿದ್ದಾರೆ. ಕಂಪನಿಯ ಹಿರಿಯ ನಿದೇರ್ಶಕನನ್ನೂ ಸೇರಿದಂತೆ ಅನೇಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.(ಏಜೆನ್ಸೀಸ್​)
ಹೇಡಿ ಚೀನಿಯರು ಬಳಸಿದ ಅಸ್ತ್ರ ನೋಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty − seven =
Remember me
