ನವದೆಹಲಿ:ಸಾರ್ವತ್ರಿಕ ಹಾಗೂ ಮುಂಬರುವ ಉಪ ಚುನಾವಣೆಗಳಲ್ಲಿ 65 ವರ್ಷ ಮೀರಿದ ಮತದಾರರಿಗೆ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯ ನೀಡದಿರಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.
ಭದ್ರತೆ, ಮಾನವ ಸಂಪನ್ಮೂಲ, ಸಾಗಾಟದ ತೊಂದರೆ ಹಾಗೂ ಕೋವಿಡ್​ ಕಾರಣದಿಂದಾಗಿ ಕೈಗೊಳ್ಳಬೇಕಾಗಿರುವ ಸುರಕ್ಷತಾ ಕಾರಣದಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ;ಬಿಹಾರ ವಿಧಾನಸಭೆ ಚುನಾವಣೆಗೆ ‘ವಲಸೆ ಕಾರ್ಮಿಕ’ರೇ ನಿರ್ಣಾಯಕರು
ಕೋವಿಡ್​ ಕಾರಣದಿಂದಾಗಿ ಬಿಹಾರದ ಚುನಾವಣೆಯಲ್ಲಿ ಪ್ರತಿ ಮತಗಟ್ಟೆಯಲ್ಲಿ ಒಂದು ಸಾವಿರ ಮತದಾರರಿಗಷ್ಟೇ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಬೇಕಾದ ಸವಾಲು ಹಾಗೂ ಅಡೆತಡೆಗಳು ಚುನಾವಣಾ ಆಯೋಗದ ಮುಂದಿವೆ. ಹೀಗಾಗಿ 65 ವರ್ಷ ಮೇಲ್ಪಟ್ಟವರಿಗೂ ಅಂಚೆ ಮೂಲಕ ಮತ ಚಲಾಯಿಸುವ ಅವಕಾಶ ವಿಸ್ತರಿಸದಿರಲು ನಿರ್ಧರಿಸಿದೆ. ಪ್ರಸ್ತುತ 80 ವರ್ಷ ಮೀರಿದವರಿಗಷ್ಟೇ ಅಂಚೆ ಮೂಲಕ ಮತ ಚಲಾಯಿಸುವ ಸೌಲಭ್ಯ ಪಡೆದಿದ್ದಾರೆ.
80 ವರ್ಷ ಮೇಲ್ಪಟ್ಟವರಿಗೂ ಕೂಡ ಅಂಚೆ ಮತದಾನ ಐಚ್ಛಿಕವಾಗಿದೆ. ಇನ್ನು ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿರುವವರು, ಕ್ವಾರಂಟೈನ್​ನಲ್ಲಿರುವವರು, ಸೋಂಕಿತರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಅಂಚೆ ಮತದಾನದ ಸೌಲಭ್ಯ ವಿಸ್ತರಿಸಲಾಗುವುದು ಎಂದು ಆಯೋಗ ಮಾಹಿತಿ ನೀಡಿದೆ.
ಇದನ್ನೂ ಓದಿ;ಬಿದಿರಿನ ಕಡ್ಡಿ, ಸಿರಿಂಜ್​ಗಳು, ಗ್ಲಾಸ್​ ಶೀಲ್ಡ್​; ಬಿಹಾರ ಚುನಾವಣೆಗೆ ಇವೆಲ್ಲ ಏಕೆ ಬೇಕು…?
ಈ ಬಾರಿ ಚುನಾವಣೆಗೆ 1.8 ಲಕ್ಷ ಸಿಬ್ಬಂದಿ ಬೇಕಾಗುತ್ತಾರೆ. ಹೆಚ್ಚುವರಿ ವಾಹನ ಸೇರಿ ಭಾರಿ ಪ್ರಮಾಣದಲ್ಲಿ ಸಂಪನ್ಮೂಲದ ಅವಶ್ಯಕತೆಯಿದೆ ಎಂದು ಆಯೋಗದ ಅಧಿಕಾರಿಗಳು ಹೇಳಿದ್ದಾರೆ.
ಗುಣಲಕ್ಷಣಗಳಿಲ್ಲದವರಿಂದ ಕರೊನಾ ಹರಡುವುದಿಲ್ಲ; ವಿಶ್ವ ಆರೋಗ್ಯ ಸಂಸ್ಥೆ ಅಧಿಕಾರಿಯಿಂದಲೇ ಹೇಳಿಕೆ; ಇಲ್ಲಿದೆ ಫ್ಯಾಕ್ಟ್​ಚೆಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 12 =
Remember me
