ನವದೆಹಲಿ:ಇಂದು ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಲಿದ್ದೇವೆ ಎಂದು ಭಾರತೀಯ ಚುನಾವಣಾ ಆಯೋಗವು (ಇಸಿಐ) ತಿಳಿಸಿದ್ದು, ಮಧ್ಯಾಹ್ನ 3 ಗಂಟೆಗೆ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಯಾವ ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಜಿಲ್ಲಾಡಳಿತದಿಂದ 28 ಸಮಿತಿ ರಚನೆ
ಹರಿಯಾಣ ಮತ್ತು ಮಹಾರಾಷ್ಟ್ರದ ಶಾಸಕಾಂಗ ಸಭೆಗಳ ಅವಧಿಯು ಕ್ರಮವಾಗಿ ನವೆಂಬರ್ 3 ಮತ್ತು 26ರಂದು ಅಂತ್ಯಗೊಳ್ಳಲಿದೆ. ಇನ್ನು ಸುಪ್ರೀಂ ಕೋರ್ಟ್ ಕೊಟ್ಟಿರುವ ಸೆ.30ರ ಗಡುವು ಕೊನೆಗೊಳ್ಳುವ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಲು ಚುನಾವಣಾ ಸಮಿತಿಯು ಯೋಜಿಸಿದೆ. ಚುನಾವಣಾ ಸಿದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಇತ್ತೀಚೆಗೆಷ್ಟೇ ಜಮ್ಮು-ಕಾಶ್ಮೀರ ಮತ್ತು ಹರಿಯಾಣಕ್ಕೆ ಭೇಟಿ ನೀಡಿದ್ದ ಚುನಾವಣಾ ಆಯೋಗವು, ಮಹಾರಾಷ್ಟ್ರಕ್ಕೆ ಇನ್ನು ಭೇಟಿ ಕೊಟ್ಟಿಲ್ಲ ಎಂದು ವರದಿಯಾಗಿದೆ.
ಈ ಸಾಲಿನಲ್ಲಿ ಜಾರ್ಖಂಡ್‌ ವಿಧಾನಸಭೆ ಚುನಾವಣೆಯೂ ಇದೆ. ಜನವರಿ 2025ಕ್ಕೆ ಜಾರ್ಖಂಡ್‌ನ ಶಾಸಕಾಂಗ ಸಭೆಯ ಅವಧಿಯು ಮುಕ್ತಾಯಗೊಳ್ಳುತ್ತದೆ. ಚುನಾವಣಾ ಆಯೋಗವು ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ವೇಳಾಪಟ್ಟಿಯನ್ನು  ಪ್ರಕಟಿಸುವ ಸಾಧ್ಯತೆಯಿದ್ದು, ಇದು ಸಂಭವಿಸಿದಲ್ಲಿ, 10 ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರವು ವಿಧಾನಸಭಾ ಚುನಾವಣೆಗೆ ಸಾಕ್ಷಿಯಾಗಲಿದೆ,(ಏಜೆನ್ಸೀಸ್).
1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಕಳೆದ 34 ದಿನದಿಂದ ಊಟ ಮಾಡಿಲ್ಲ! 1.2 ಕೋಟಿ ರೂ. ಸಾಲವಿದೆ, ಕೈಯಲ್ಲಿ ಕೆಲಸವಿಲ್ಲ: ಕಣ್ಣೀರಿಟ್ಟ ನಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
