ನವದೆಹಲಿ:ವರ್ಷದ ಕೊನೆಯ ಖಗೋಳ ಕೌತುಕ ಸೂರ್ಯ ಗ್ರಹಣ ಡಿ.4ರಂದು ಸಂಭವಿಸಲಿದೆ. ಆದರೆ, ಭಾರತದಲ್ಲಿ ಗೋಚರಿಸುವುದಿಲ್ಲ. ಸಂಪೂರ್ಣ (ಖಗ್ರಾಸ) ಸೂರ್ಯ ಗ್ರಹಣ ಅಂಟಾರ್ಕ್ಟಿಕಾದಲ್ಲಿ ಪೂರ್ಣವಾಗಿ ಕಾಣಿಸಲಿದೆ. ಇನ್ನುಳಿದಂತೆ ದಕ್ಷಿಣ ಅಮೆರಿಕದ ದಕ್ಷಿಣ ತುದಿ, ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್​ಗಳಲ್ಲಿ ಭಾಗಶಃ ಸೂರ್ಯಗ್ರಹಣ ವೀಕ್ಷಿಸಲು ಸಾಧ್ಯವಿದೆ. ಗ್ರಹಣದ ಒಟ್ಟು ಕಾಲಾವಧಿ 4 ಗಂಟೆ 8 ನಿಮಿಷ. ಭಾರತೀಯ ಕಾಲಮಾನ ಬೆಳಗ್ಗೆ 10.59ಕ್ಕೆ ಆರಂಭವಾಗಿ ಮಧ್ಯಾಹ್ನ 3.07ಕ್ಕೆ ಅಂತ್ಯವಾಗಲಿದೆ. ಸತತ ಮೂರು ವರ್ಷಗಳಿಂದ ಡಿಸೆಂಬರ್​ನಲ್ಲಿ ಸೂರ್ಯಗ್ರಹಣ ಸಂಭವಿಸುತ್ತಿದೆ.
ಶಿಗ್ಗಾಂವ್​ನಲ್ಲಿದ್ದು ಗ್ರಹಣ ವೀಕ್ಷಣೆ:ಭಾರತದಲ್ಲಿ 1980ರ ಫೆ.16ರಂದು ಶತಮಾನದ ಮೊದಲ ಸಂಪೂರ್ಣ ಸೂರ್ಯಗ್ರಹಣ ಗೋಚರಿಸಿತ್ತು. ಇದರ ವೀಕ್ಷಣೆಗಾಗಿ ಶಿಗ್ಗಾಂವ್ ಎಂಬ ಗ್ರಾಮಕ್ಕೆ ತೆರಳಿದ್ದೆವು. ಅಲ್ಲಿ ಒಂದು ಪುಟ್ಟ ಬೆಟ್ಟ ಏರಿ ಪೋಲರಾಯ್್ಡ ಲೈಟ್ ಬಳಸಿಕೊಂಡು ಗ್ರಹಣದ ಚಿತ್ರ ತೆಗೆಯಲು ಪ್ರಯತ್ನಿಸಿದ್ದೆವು. ತಾತ್ಕಾಲಿಕ ಡಾರ್ಕ್​ರೂಮ್ ನಿರ್ವಿುಸಿ ಅಲ್ಲೇ ಫೋಟೋದ ಫಿಲಂ ಅನ್ನು ಅಭಿವೃದ್ಧಿ ಪಡಿಸಿದ್ದೆವು ಎಂದು ಮುಂಬೈನ ನೆಹರು ತಾರಾಲಯದ ನಿರ್ದೇಶಕ ಅರವಿಂದ ಪರಾಂಜಪೆ ಸ್ಮರಿಸಿದ್ದಾರೆ.
ಅರವಿಂದ ಪರಾಂಜಪೆ ಅವರು ನಾಲ್ಕು ಸಂಪೂರ್ಣ ಸೂರ್ಯಗ್ರಹಣದ ಫೋಟೋಗಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡಿದ್ದಾರೆ. ಭಾರತದಲ್ಲಿ (1995), ಇರಾನ್ (1999), ಜಾಂಬಿಯಾ (2001), ಅಮೆರಿಕ (2017)ದಲ್ಲಿ ಕಾಣಿಸಿದ ಗ್ರಹಣಗಳಿವು. ಈ ಬಾರಿ ಅಂಟಾರ್ಕ್ಟಿಾದಲ್ಲಿ ಮಾತ್ರ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸುವ ಕಾರಣ, ಫೋಟೋ ತೆಗೆಯುವುದರಿಂದ ಅರವಿಂದ್ ವಂಚಿತರಾಗಿದ್ದಾರೆ.
‘ಪದ್ಮಶ್ರೀ’ ಡಾ. ವಿಜಯ ಸಂಕೇಶ್ವರ ಅವರಿಗೆ ರಾಜ್ಯಪಾಲರಿಂದ ಸನ್ಮಾನ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
