ನವದೆಹಲಿ:ಹಣದುಬ್ಬರದ ಏರಿಕೆ, ಬಡ್ಡಿ ದರ ಹೆಚ್ಚಳ, ಯೂಕ್ರೇನ್-ರಷ್ಯಾ ಕದನ, ಚೀನಾದಲ್ಲಿ ಕರೊನಾ ಸೋಂಕು ಉಲ್ಬಣಿಸಿರುವ ಕಾರಣ ವಿಶ್ವದ ಮೂರನೇ ಒಂದು ಭಾಗದಲ್ಲಿ ಆರ್ಥಿಕ ಹಿಂಜರಿತ ಆವರಿಸಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹೇಳಿದೆ. ಜಾಗತಿಕವಾಗಿ ದೊಡ್ಡ ಆರ್ಥಿಕತೆಯಾದ ಅಮೆರಿಕ, ಐರೋಪ್ಯ ಒಕ್ಕೂಟ, ಚೀನಾದಲ್ಲಿ ಪರಿಸ್ಥಿತಿ ಕಷ್ಟಕರವಾಗತೊಡಗಿದೆ. ಆರ್ಥಿಕ ಹಿಂಜರಿತ ಬಾಧಿಸದ ದೇಶಗಳಲ್ಲೂ ಅದರ ಪರಿಣಾಮ ತುಸು ಮಟ್ಟಿಗಾದರೂ ಅನುಭವಿಸಬೇಕಾಗುತ್ತದೆ ಎಂದು ಐಎಂಎಫ್​ನ 2023ರ ಆರ್ಥಿಕ ಮುನ್ನೋಟ ಅಂದಾಜು ಮಾಡಿದೆ.
ಚೀನಾದಲ್ಲಿ ಶೂನ್ಯ ಕೋವಿಡ್ ನೀತಿ ಯಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಕೈಗಾರಿಕೆಗಳಲ್ಲಿ ಉತ್ಪಾದನೆ ಕುಸಿತವಾಗುತ್ತಿದೆ. ಇತ್ತ ದೇಶದಲ್ಲಿ ಸೋಂಕು ಪ್ರಸರಣ ಮತ್ತು ಸಾವಿನ ಸಂಖ್ಯೆ ಅಂಕೆ ಮೀರಿ ಹೆಚ್ಚುತ್ತಿದೆ. ಇದು ಚೀನಾ ಆರ್ಥಿಕ ಬೆಳವಣಿಗೆಯ ಮೇಲೆ ಋಣಾತ್ಮಕ ಪ್ರಭಾವ ಉಂಟು ಮಾಡುತ್ತಿದ್ದು, ಇದು 2022ರ ಕೊನೆಯಲ್ಲಿ ವ್ಯಕ್ತವಾಗಿದೆ. ಡಿಸೆಂಬರ್​ನಲ್ಲಿ ಖರೀದಿ ವಹಿವಾಟು 3 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿತ ಕಂಡಿದೆ ಎಂದು ಐಎಂಎಫ್​ನ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿಯಾ ಹೇಳಿದ್ದಾರೆ. ಭಾರತದ ಬಗ್ಗೆ ಕ್ರಿಸ್ಟಲಿನಾ ಯಾವುದೇ ಮಾಹಿತಿ ನೀಡಿಲ್ಲ. ಚೀನಾದಲ್ಲಿ ಪರಿಸ್ಥಿತಿ ವಿಷಮಿಸುತ್ತಿದ್ದರೂ ಅಧ್ಯಕ್ಷ ಷಿ ಜಿನ್​ಪಿಂಗ್, ದೇಶ ಹೊಸ ಯುಗ ಪ್ರವೇಶಿಸುತ್ತಿದೆ. ಹೊಸ ಪ್ರಯತ್ನಗಳನ್ನು ಒಗ್ಗಟ್ಟಿನಿಂದ ಮಾಡಬೇಕು. ಕರೊನಾ ಪ್ರಸರಣ ವ್ಯಾಪಕವಾಗುತ್ತಿದ್ದು, ಅದನ್ನು ನಿಯಂತ್ರಿಸದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ, ಕರೊನಾ ಸಾವು-ನೋವಿನ ಅಂಕಿಸಂಖ್ಯೆ, ಆರ್ಥಿಕತೆ ಬೆಳವಣಿಗೆ ಕುರಿತು ಯಾವುದೇ ನಿಖರ ಮಾಹಿತಿಯನ್ನು ನೀಡಿಲ್ಲ.
ಪ್ರಮುಖ ಕಾರಣ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 9 =
Remember me
