ನವದೆಹಲಿ:ಕರೊನಾ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್​ಡೌನ್ ಕಾರಣಕ್ಕೆ ಮುಗ್ಗರಿಸಿದ್ದ ದೇಶದ ಆರ್ಥಿಕತೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಚಟುವಟಿಕೆಗಳು ಚುರುಕು ಪಡೆಯುತ್ತಿವೆ. ಇಂಧನ ಮತ್ತು ವಿದ್ಯುತ್ ಬಳಕೆ, ರೈಲು ಸರಕು ಸಾಗಾಟ, ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹದಲ್ಲಿ ಹೆಚ್ಚಳ ಕಂಡುಬಂದಿದೆ. ದೇಶೀಯ ಮಾರಾಟ ಹಾಗೂ ಆಮದು ಪ್ರಮಾಣದಲ್ಲಿ ಕೂಡ ಏರಿಕೆ ದಾಖಲಾಗುತ್ತಿದೆ. ಪ್ರಸ್ತುತ ಆರ್ಥಿಕ ಸ್ಥಿತಿ ಕೋವಿಡ್ ಪೂರ್ವದ ಪ್ರಮಾಣಕ್ಕಿಂತ ಕಡಿಮೆಯಿದ್ದರೂ, ಚೇತರಿಕೆ ಸೂಚನೆ ನೀಡುತ್ತಿವೆ.
ಜಿಎಸ್​ಟಿ ಸಂಗ್ರಹ ಶೇ. 4 ಏರಿಕೆ:ಜಿಎಸ್​ಟಿ ಸಂಗ್ರಹ ಸೆಪ್ಟೆಂಬರ್​ನಲ್ಲಿ ಶೇ 4ರಷ್ಟು ಏರಿಕೆಯಾಗಿದ್ದು ಒಟ್ಟು 95,000 ಕೋಟಿ ರೂಪಾಯಿ ಆಕರಣೆಯಾಗಿದೆ. ಲಾಕ್​ಡೌನ್​ನಿಂದಾಗಿ ಜಿಎಸ್​ಟಿ ಸಂಗ್ರಹ ಕುಸಿತವಾಗಿ ರಾಜ್ಯಗಳು ಆದಾಯ ಕೊರತೆಯಿಂದ ಸೊರಗುತ್ತಿವೆ. ಈಗ ಏರಿಕೆ ಕಂಡುಬಂದಿರುವುದು ತುಸು ನಿರಾಳತೆ ತಂದಿದೆ. ಜತೆಗೆ ಸರಕುಗಳ ಆಮದು, ದೇಶೀಯ ವ್ಯವಹಾರಗಳಿಂದ ಬರುವ ಆದಾಯವೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಇದನ್ನೂ ಓದಿ:ಈ ಸರ್ಕಾರ ಯಾವಾಗ ಹೋಗುತ್ತೋ ಗೊತ್ತಿಲ್ಲ: ಸಚಿವ ಆನಂದ್ ಸಿಂಗ್ ಅಚ್ಚರಿಯ ಹೇಳಿಕೆ
ಹೊಸ ಮಾಡೆಲ್​ಗಳು, ಬೆಲೆ ಕಡಿತ ಮೊದಲಾದ ಕ್ರಮಗಳಿಂದ ಆಟೋ ಮೊಬೈಲ್ ಕ್ಷೇತ್ರದಲ್ಲಿ ಲವಲವಿಕೆ ಕಂಡುಬಂದಿದೆ. ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ದಾಖಲಾಗುತ್ತಿದೆ. ಹಬ್ಬಗಳ ಹಿನ್ನೆಲೆಯಲ್ಲಿ ನೀಡಲಾಗುವ ವಿಶೇಷ ರಿಯಾಯಿತಿಗಳೂ ವಾಹನೋದ್ಯಮದ ಚೇತರಿಕೆಗೆ ಕಾರಣವಾಗುತ್ತಿದೆ. ಉತ್ಪಾದನೆ ವಲಯ ಲಯ ಕಾಣುತ್ತಿದ್ದು ಆಗಸ್ಟ್​ನಲ್ಲಿ 52 ಇದ್ದ ಪರ್ಚೇಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ (ಪಿಎಂಐ) ಸೆಪ್ಟೆಂಬರ್​ನಲ್ಲಿ 56.8ಕ್ಕೆ ಜಿಗಿದಿದೆ.
ಕಳೆದ ವರ್ಷದ ಸೆಪ್ಟೆಂಬರ್​ಗೆ ಹೋಲಿಸಿದರೆ, ರೈಲ್ವೆ ಸರಕು ಸಾಗಾಟದಲ್ಲಿ ಶೇ. 15.3 ಏರಿಕೆ ಕಂಡಿದೆ. ಇದರಿಂದಾಗುವ ಆದಾಯದಲ್ಲಿ ಶೇ. 13.5 ಏರಿಕೆಯಾಗಿದೆ. ಆಹಾರಧಾನ್ಯಗಳ ಸಾಗಾಟದಲ್ಲಿ ಶೇ. 101 ಏರಿಕೆಯಾಗಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ್ಝ
ಇದನ್ನೂ ಓದಿ:ಸುರೇಶ್​ ಅಂಗಡಿಯವರ ಮನೆಗೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​
ಸೆಪ್ಟೆಂಬರ್​ನಲ್ಲಿ ದಾಖಲೆಯ 5.7 ಕೋಟಿ ಇ-ವೇ ಬಿಲ್​ಗಳನ್ನು ನೀಡಲಾಗಿದೆ. ಇದು ವಾಣಿಜ್ಯ ವ್ಯವಹಾರಗಳು ಚುರುಕುಗೊಂಡು ಆರ್ಥಿಕತೆ ಚೇತರಿಕೆ ಸ್ಪಷ್ಟ ಸೂಚನೆಯಾಗಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ಬಿಗ್​ ಶಾಕ್​! ಅಮೇಜಾನ್​ನ 20 ಸಾವಿರ ಸಿಬ್ಬಂದಿಗೆ ಸೋಂಕು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + 8 =
Remember me
