ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 23ರಂದು ಪ್ರಧಾನಿ ಮೋದಿ 3.0 ಸರ್ಕಾರದ ಮತ್ತು ಎನ್‌ಡಿಎ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಅನ್ನು ಮಂಡಿಸಲಿದ್ದಾರೆ. ಅದಕ್ಕೂ ಒಂದು ದಿನ ಮೊದಲು ಸೋಮವಾರ (ಜುಲೈ 22 ) ಲೋಕಸಭೆಯಲ್ಲಿ ಬಜೆಟ್ ಪೂರ್ವ ದಾಖಲೆಯನ್ನು ಅಂದರೆ ಆರ್ಥಿಕ ಸಮೀಕ್ಷೆ 2023-24 ಅನ್ನು ಮಂಡಿಸಿದ್ದಾರೆ. ಆರ್ಥಿಕ ಸಮೀಕ್ಷೆಯು ಹಣಕಾಸಿನ ದಾಖಲೆಯಾಗಿದ್ದು, 1964ರಿಂದ ಬಜೆಟ್‌ಗೆ ಒಂದು ದಿನ ಮುಂಚಿತವಾಗಿ ಆರ್ಥಿಕ ಸಮೀಕ್ಷೆ ಮಂಡಿಸುವ ಸಂಪ್ರದಾಯವಿದೆ.
ಇದನ್ನು ಓದಿ:ಕನ್ವರ್​ಯಾತ್ರೆ ನಾಮಫಲಕ ಆದೇಶಕ್ಕೆ ಸುಪ್ರೀಂ ತಡೆ; ಒತ್ತಾಯಿಸದಂತೆ ಸೂಚನೆ
ಈ ವೇಳೆ ಪ್ರಧಾನಿ ಮೋದಿ ಅವರು ಮಾತನಾಡಿ, ಸರ್ಕಾರವು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಬಜೆಟ್ ಅಮೃತ ಕಾಲಕ್ಕೆ ಮಹತ್ವದ ಬಜೆಟ್ ಆಗಿದೆ. ಈ ಬಜೆಟ್ ನಮ್ಮ ಅಧಿಕಾರಾವಧಿಯ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸುತ್ತದೆ. ಇದು ನಮ್ಮ ಕನಸಿನ ವಿಕಸಿತ ಭಾರತಕ್ಕೆ ಬಲವಾದ ಅಡಿಪಾಯವಾಗಲಿದೆ ಎಂದು ಹೇಳಿದ್ದಾರೆ.
ಆರ್ಥಿಕ ಸಮೀಕ್ಷೆ 2024ರ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯು 6.5 ರಿಂದ 7 ಪ್ರತಿಶತದಷ್ಟು ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಮೃತ ಕಾಲದ ಸಮಯದಲ್ಲಿ ಆರ್ಥಿಕ ಪ್ರಗತಿಯನ್ನು ಹೆಚ್ಚಿಸಲು ಅಗತ್ಯವಾದ ಆರು ಪ್ರಮುಖ ಕ್ಷೇತ್ರಗಳನ್ನು ಸಮೀಕ್ಷೆಯು ಗುರುತಿಸಿದೆ. ಈ ಕೇಂದ್ರೀಕೃತ ಪ್ರದೇಶಗಳ ಮಾಹಿತಿ ಹೀಗಿದೆ.
ನಮ್ಮ ಮನೆ ಬಾಗಿಲು ತಟ್ಟುವ ಅಸಹಾಯಕರಿಗೆ ಆಶ್ರಯ ನೀಡಲು ಸಿದ್ಧ; ಮಮತಾ ಬ್ಯಾನರ್ಜಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − four =
Remember me
