ನವದೆಹಲಿ:ದೇಶದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತಲೂ ವೇಗವಾಗಿ ಹಳಿಗೆ ಮರಳುತ್ತಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಹೇಳಿದ್ದಾರೆ.
ಇಂಧನಕ್ಕೆ ಹೆಚ್ಚುತ್ತಿರುವ ಬೇಡಿಕೆ, ಜಿಎಸ್​ಟಿ ಸಂಗ್ರಹದಲ್ಲಿ ಏರಿಕೆ ಮೊದಲಾದ ಅಂಶಗಳು ಆರ್ಥಿಕ ಚಟುವಟಿಕೆಗಳು ಹೆಚ್ಚುತ್ತಿರುವ ಸಂಕೇತವಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ (ಎಫ್​ಡಿಐ) ಹೆಚ್ಚಳವೂ ಆರ್ಥಿಕ ಚೇತರಿಕೆಯ ಚಿಹ್ನೆಯಾಗಿದೆ ಎಂದಿದ್ದಾರೆ. ಉತ್ತಮ ಮಳೆಯಿಂದಾಗಿ ಕೃಷಿ ಕ್ಷೇತ್ರದಲ್ಲಿ ಇಂಧನ ಬಳಕೆ ಕಡಿಮೆಯಾಗಿದ್ದರೂ, ರೈಲ್ವೆ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸದಿದ್ದರೂ ಇಂಧನ ಬೇಡಿಕೆ ಹೆಚ್ಚಿದೆ.
ಇಂಧನ ಬೇಡಿಕೆ ಶೇ. 12 ಏರಿಕೆಯಾಗಿರುವುದು ಉತ್ಪಾದನಾ ಕ್ಷೇತ್ರ ಸಂಪೂರ್ಣವಾಗಿ ಯಥಾಸ್ಥಿತಿಗೆ ಮರಳಿರುವುದರ ಸೂಚನೆಯಾಗಿದೆ. ದೇಶದ ಆರ್ಥಿಕತೆ ವೇಗವಾಗಿ ಸುಧಾರಿಸುತ್ತಿದ್ದು ಶೀಘ್ರವೇ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದೆ ಎಂದು ಹಣಕಾಸು ಕಾರ್ಯದರ್ಶಿ ತರುಣ್ ಬವೇಜಾ ಕೂಡ ಮಂಗಳವಾರ ಆಶಾವಾದ ವ್ಯಕ್ತಪಡಿಸಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
