ನವದೆಹಲಿ:ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ಸದ್ಯ ಯಾವುದೇ ಪ್ರಕರಣಗಳ ತನಿಖೆಗಳನ್ನು ತನಿಖಾಧಿಕಾರಿಗಳು ಮುಂದುವರೆಸುತ್ತಿಲ್ಲ. ಆದ್ದರಿಂದ ಪ್ರಮುಖ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯವಾಗಲೀ, ಸಿಬಿಐ, ಸಿಐಡಿಯಾಗಲೀ ಎಲ್ಲವೂ ಸದ್ಯದ ಮಟ್ಟಿಗೆ ತನಿಖೆಗಳಿಗೆ ಬ್ರೇಕ್‌ ಹಾಕಿವೆ.
ತನಿಖೆಗಳಿಗೇನೋ ಬ್ರೇಕ್‌ ಬಿದ್ದಿವೆ ನಿಜ, ಆದರೆ ಕರೊನಾ ವೈರಸ್‌ ಕಾರಣನೀಡಿ ಜಾಮೀನು ಕೋರುವ ಆರೋಪಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ, ಈ ತನಿಖಾ ಸಂಸ್ಥೆಗಳು ದಿನವಿಡೀ ಕೆಲಸ ಮಾಡಬೇಕಾಗಿವೆ. ಜಾಮೀನು ಅರ್ಜಿಗಳು ತುಂಬಿಹೋಗಿರುವ ಕಾರಣ, ತನಿಖಾಧಿಕಾರಿಗಳು ಫುಲ್‌ ಸುಸ್ತಾಗಿದ್ದಾರೆ.
‘ಎಲ್ಲಾ ಆರೋಪಿ, ಅಪರಾಧಿಗಳನ್ನು ಸುರಕ್ಷತೆಯ ದೃಷ್ಟಿಯಿಂದ ಪ್ರತ್ಯೇಕ ಕೋಣೆಗಳಲ್ಲಿಯೇ ಇಡಲಾಗಿದೆ. ಆದರೆ ಕರೊನಾ ವೈರಸ್‌ ಅವರಿಗೀಗ ಒಳ್ಳೆಯ ನೆಪವಾಗಿದೆ. ಅದನ್ನೇ ಮುಂದಿಟ್ಟುಕೊಂಡು ತಮಗೆ ಜಾಮೀನು ನೀಡಬೇಕೆಂದು ಕೇಳಿಕೊಳ್ಳುತ್ತಿದ್ದಾರೆ. ಆದ್ದರಿಂದ ನಾವು ಹೆಚ್ಚಿನ ಕೇಸುಗಳಲ್ಲಿ ಜಾಮೀನು ನಿರಾಕರಿಸುತ್ತಿದ್ದೇವೆ’ ಎಂದಿದ್ದಾರೆ ತನಿಖಾಧಿಕಾರಿಗಳು.
“ನಮ್ಮ ಹೆಚ್ಚಿನ ಸಿಬ್ಬಂದಿ ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಜಾಮೀನು ಕೋರಿ ಬಂದಿರುವ ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಆದರೆ ಅವುಗಳ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿದ ನಂತರ ಕೋರ್ಟ್‌ನಲ್ಲಿ ಜಾಮೀನು ನೀಡದಂತೆ ಕೋರಿಕೊಳ್ಳುತ್ತಿದ್ದೇವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ವೈರಸ್ ಜೈಲಿನಿಂದ ಹೊರಬರುವ ಕಾರ್ಡ್ ಅಲ್ಲಕರೊನಾ ವೈರಸ್‌ ತಮ್ಮನ್ನು ಜೈಲಿನಿಂದ ಹೊರಬರಿಸುವ ಕಾರ್ಡ್‌ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ತಾವು ಅದಕ್ಕೆ ಆಸ್ಪದ ಕೊಡುವುದಿಲ್ಲ. ಪ್ರತಿಯೊಂದು ಕೇಸಿನ ಹಿನ್ನೆಲೆ ತಿಳಿದುಕೊಂಡೇ ಜಾಮೀನು ನೀಡಿಕೆ ಬಗ್ಗೆ ವಿಚಾರಣೆ ಮಾಡುತ್ತೇವೆ ಎನ್ನುತ್ತಾರೆ ತನಿಖಾಧಿಕಾರಿಗಳು.
ಕರೊನಾ ಸೋಂಕಿನ ನೆಪವೊಡ್ಡಿ ವಿಮಲ್ ಬರೋಟ್, ಕ್ರಿಶ್ಚಿಯನ್ ಮೈಕೆಲ್, ಶಿವೀಂದರ್ ಮೋಹನ್ ಸಿಂಗ್ ಸೇರಿದಂತೆ ಅನೇಕ ಮಂದಿ ಜಾಮೀನು ಕೋರಿದ್ದರು. 245 ಕೋಟಿ ರೂಪಾಯಿಗಳ ದೇನಾ ಬ್ಯಾಂಕ್ ಹಗರಣದ ಆರೋಪಿ ವಿಮಲ್ ಬರೋಟ್ ಜೈಲಿನಲ್ಲಿ ಸೋಂಕು ತಗಲುವ ಅಪಾಯವಿದ್ದು, ಜಾಮೀನು ನೀಡುವಂತೆ ಕೋರಿದ್ದರು.
ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಆಪಾದಿತ ಮಧ್ಯವರ್ತಿ ಮೈಕೆಲ್ ತಿಹಾರ್ ಜೈಲಿನಿಂದ ಬಿಡುಗಡೆ ಕೋರಿದ್ದರು. ತಮ್ಮ ವಯಸ್ಸು 59 ಆಗಿದ್ದು, ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ, ಸೋಂಕಿಗೆ ಗುರಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಜಾಮೀನು ಕೊಡಿ ಎಂದಿದ್ದರು. ಇನ್ನು, ರಾನ್‌ಬಾಕ್ಸಿಯ ಮಾಜಿ ಪ್ರವರ್ತಕ ಶಿವೀಂದರ್‌ ಸಿಂಗ್ ಜೈಲಿನಲ್ಲಿ ಜನದಟ್ಟಣೆ ಇರುವ ಕಾರಣ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯವಾಗಿದೆ. ಆದ್ದರಿಂದ ಆರೋಗ್ಯದ ದೃಷ್ಟಿಯಿಂದ ನನಗೆ ಜಾಮೀನು ಬೇಕು ಎಂದು ಮನವಿ ಮಾಡಿಕೊಂಡಿದ್ದರು. 177 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವರ ಪುತ್ರ ಹಿಲಾಲ್ ರಾಥರ್ ಕೂಡ ಇದೇ ರೀತಿಯ ಮನವಿಯನ್ನು ಸಲ್ಲಿಸಿದ್ದರು. ಆದರೆ ಎಲ್ಲರ ಮನವಿಯನ್ನೂ ತನಿಖಾಧಿಕಾರಿಗಳು ತಿರಸ್ಕರಿಸಿದ್ದಾರೆ.
ಜೈಲುಗಳಲ್ಲಿನ ಜನಸಂದಣಿಯನ್ನು ಕಡಿತಗೊಳಿಸಲು, ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಿರುವ ಕೈದಿಗಳಿಗೆ ಜಾಮೀನು ನೀಡಬಹುದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.
ಲಾಕ್‌ಡೌನ್‌ನಿಂದಾಗಿ ದಾಳಿಗಳನ್ನು ನಡೆಸುವಂತಿಲ್ಲ. ಆದರೆ ಈಗಾಗಲೇ ನಡೆದಿರುವ ದಾಳಿಯ ದತ್ತಾಂಶ ಸಂಗ್ರಹಣೆ, ದಾಖಲೆ ಪರಿಶೀಲನೆ ಮತ್ತು ಬ್ಯಾಂಕ್ ಖಾತೆಗಳನ್ನು ವಿಶ್ಲೇಷಣೆ ಮಾಡಬಹುದಾಗಿದೆ. ಮನೆಯಿಂದ ಕೆಲಸ ಮಾಡುವ ಸಿಬ್ಬಂದಿ ಚಾರ್ಜ್‌ಶೀಟ್‌ಗಳು ಮತ್ತು ಪ್ರಾಸಿಕ್ಯೂಷನ್ ದೂರುಗಳನ್ನು ಅಂತಿಮಗೊಳಿಸುತ್ತಿದ್ದಾರೆ, ಲಾಕ್‌ಡೌನ್ ಮುಗಿದ ನಂತರ ಅಫಿಡಿವೇಟ್‌ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. (ಏಜನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + seventeen =
Remember me
