ನವದೆಹಲಿ:ಗಾಂಧಿ ಕುಟುಂಬಕ್ಕೆ ಭಾರಿ ಆಘಾತವನ್ನುಂಟು ಮಾಡಿರುವ ಬೆಳವಣಿಗೆಯೊಂದರಲ್ಲಿ ಜಾರಿ ನಿರ್ದೇಶನಾಲಯ ಮುಂಬೈನಲ್ಲಿ ಕೋಟ್ಯಂತರ ರೂ. ಮೌಲ್ಯದ ಬೃಹತ್​ ಕಟ್ಟಡವೊಂದನ್ನು ವಶಕ್ಕೆ ಪಡೆದಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ವಯ ಬೃಹತ್​ ಆಸ್ತಿಯ ಒಂದು ಭಾಗ ಅಂದಾಜು 16.38 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ದಾಖಲೆಗಳ ಪ್ರಕಾರ 3,500 ಚದರ ಮೀಟರ್​ ವಿಸ್ತೀರ್ಣದ ಜಾಗ ದಲಿತರ ಹಾಸ್ಟೆಲ್​ ನಿರ್ಮಾಣಕ್ಕಾಗಿ ಮೀಸಲಾಗಿರಿಸಿತ್ತು. ಬಳಿಕ ಇದನ್ನು 1983ರಲ್ಲಿ ಅಸೋಸಿಯೇಟೆಡ್​ ಜರ್ನಲ್ಸ್​ ಲಿಮಿಟೆಡ್​ ಸಂಸ್ಥೆ ಭಾರಿ ಕಡಿಮೆ ಬೆಲೆಯಲ್ಲಿ ಖರೀದಿಸಿತ್ತು.
ಇದನ್ನೂ ಓದಿ;ಕರೊನಾ ನಿರ್ಬಂಧ ಉಲ್ಲಂಘಿಸಿದ 10 ಭಾರತೀಯರ ಗಡಿಪಾರು; ಮತ್ತೆ ಆ ದೇಶಕ್ಕೆ ಕಾಲಿಡುವಂತಿಲ್ಲ
ಮುಂಬೈನ ಬಾಂದ್ರಾ ಪೂರ್ವದ ಐಷಾರಾಮಿ ಪ್ರದೇಶದಲ್ಲಿರುವ ಈ ಭೂಮಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯ 262 ಕೋಟಿ ರೂ.ಗೂ ಅಧಿಕ ಎಂದು ಅಂದಾಜಿಸಲಾಗಿದೆ. ದಶಕಗಳವರೆಗೆ ಈ ಭೂಮಿಯಲ್ಲಿ ಯಾವುದೇ 2000 ದಲ್ಲಿ 9 ಅಂತಸ್ತುಗಳ ಬೃಹತ್​ ಕಟ್ಟಡವನ್ನು ಕಟ್ಟಲಾಗಿದೆ. ಈ ಕಟ್ಟಡವನ್ನೇ ಜಾರಿ ನಿರ್ದೇಶನಾಲಯ ತನ್ನ ವಶಕ್ಕೆ ಪಡೆದುಕೊಂಡಿದೆ.
ಕಟ್ಟಡ ನಿರ್ಮಿಸುವಲ್ಲಿಯೂ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ. 20 ಸಾವಿರ ಚದರಡಿಯ ಕಟ್ಟಡ ನಿರ್ಮಿಸಬೇಕಿದ್ದರೂ 80 ಸಾವಿರ ಚದರಡಿಯ ಕಟ್ಟಡ ಇಲ್ಲಿ ತಲೆ ಎತ್ತಿದೆ.
ಇದನ್ನೂ ಓದಿ;ರಾಜಸ್ಥಾನ ಡಿಸಿಎಂ ಸ್ಥಾನದಿಂದ ಸಚಿನ್​ ಪೈಲಟ್​ಗೆ ಕೊಕ್​; ಕಾಂಗ್ರೆಸ್​ ಘೋಷಣೆ
ಸರ್ಕಾರದಿಂದ ಪಡೆದ ಜಾಗದಲ್ಲಿ ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿದರೆ, ಅದರ ಶೇ.50 ಆದಾಯವನ್ನು ಸರ್ಕಾರಕ್ಕೆ ನೀಡಬೇಕು. ಆದರೆ, ಈ ಪ್ರಕರಣದಲ್ಲಿ ಗಾಂಧಿ ಪರಿವಾರದ ಅಸೋಸಿಯೇಟೆಡ್​ ಜರ್ನಲ್ಸ್​ ಶೇ.70 ಹಣ ಉಳಿಸಿಕೊಂಡು ಸರ್ಕಾರಕ್ಕೆ ಕೇವಲ ಶೇ.30 ಮಾತ್ರ ಪಾವತಿಸುವ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಎಜೆಎಲ್​ಗೆ ಸದ್ಯ ಹಿರಿಯ ಕಾಂಗ್ರೆಸ್​ ಮುಖಂಡ ಮೋತಿಲಾಲ್​ ವೊಹ್ರಾ ಅಧ್ಯಕ್ಷರಾಗಿದ್ದರೆ, ಗಾಂಧಿ ಕುಟುಂಬದವರು ಸದಸ್ಯರಾಗಿದ್ದಾರೆ. ಒಟ್ಟಾರೆ, ಗಾಂಧಿ ಕುಟುಂಬ ಜಾರಿ ನಿರ್ದೇಶನಾಲಯದ ಕ್ರಮದಿಂದ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.
ಆಗಸ್ಟ್​ 15ಕ್ಕೆ ಬಳಕೆಗೆ ದೊರೆಯಲಿದೆ ಕರೊನಾ ಲಸಿಕೆ; ಆದರೆ ಭಾರತದ್ದಲ್ಲ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
