ನವದೆಹಲಿ:ಚುನಾವಣೆಗಾಗಿ ಭಾರಿ ಮೊತ್ತದ ಹಣದ ಹೊಳೆ ಹರಿಸುವುದು ಹೊಸದೇನಲ್ಲ. ಚುನಾವಣೆ ಖರ್ಚಿಗೆಂದೇ ಎಲ್ಲೆಲ್ಲಿಂದಲೋ ಹಣವನ್ನು ಹೊಂದಿಸಲಾಗುತ್ತದೆ. ಅದರಲ್ಲೂ ಇಲ್ಲೊಂದು ಕಡೆ ಬೆಟ್ಟಿಂಗ್​ ಆ್ಯಪ್​ನವರಿಂದ ಕೋಟಿಗಟ್ಟಲೆ ಹಣ ಮುಖ್ಯಮಂತ್ರಿಯೊಬ್ಬರು ಪಡೆದಿರುವುದು ಚುನಾವಣೆ ಆಸುಪಾಸಲ್ಲೇ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮಹದೇವ ಬೆಟ್ಟಿಂಗ್ ಆ್ಯಪ್​, ಛತ್ತೀಸ್​ಗಢ ಮುಖ್ಯಮಂತ್ರಿಗೆ ಈ ವರೆಗೆ ಭಾರಿ ಮೊತ್ತದ ಹಣ ಸರಬರಾಜು ಮಾಡಿರುವುದು ಜಾರಿ ನಿರ್ದೇಶನಾಲಯದ ದಾಳಿಯಿಂದ ಬೆಳಕಿಗೆ ಬಂದಿದೆ.
ED claims Mahadev betting app promoters have given Rs 508 crore to Chhattisgarh CM Bhupesh Baghel so far, says probe on
— Press Trust of India (@PTI_News)November 3, 2023

ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರಿಗೆ ಮಹದೇವ ಬೆಟ್ಟಿಂಗ್ ಆ್ಯಪ್ ಪ್ರಮೋಟರ್ಸ್ ಕಡೆಯಿಂದ 508 ಕೋಟಿ ರೂ. ಸಂದಾಯ ಆಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದ್ದು, ತನಿಖೆ ನಡೆಯುತ್ತಿದೆ.
ED has conducted search operations on 2/11/2023 against the money laundering networks linked with Mahadev Book Online Betting APP in Chhatishgarh in which Cash of Rs. 5.39 Crore and Bank balance Rs. 15.59 Crore has been intercepted and frozen/ seized.pic.twitter.com/ZItQV2VWOB
— ED (@dir_ed)November 3, 2023

ನಿನ್ನೆ ಛತ್ತೀಸ್​ಗಢದ ಹಲವೆಡೆ ದಾಳಿ ನಡೆಸಿ ತಪಾಸಣೆ ಮಾಡಿದ್ದ ಜಾರಿ ನಿರ್ದೇಶನಾಲಯ ಮಹದೇವ ಬೆಟ್ಟಿಂಗ್ ಆ್ಯಪ್​ಗೆ ಸೇರಿದ್ದ 5.39 ಕೋಟಿ ರೂ. ನಗದು ವಶ ಪಡಿಸಿಕೊಂಡಿದ್ದು, ಬ್ಯಾಂಕ್​ ಖಾತೆಯಲ್ಲಿರುವ 15.59 ಕೋಟಿ ರೂ. ಮುಟ್ಟುಗೋಲು ಹಾಕಿಕೊಂಡಿದೆ.
ಇಬ್ಬರ ಮಧ್ಯೆ ಮನಸ್ತಾಪ ಬಂದ ಮಾತ್ರಕ್ಕೆ ಅತ್ಯಾಚಾರ ಪ್ರಕರಣ ದಾಖಲಿಸುವುದು ಸರಿಯಲ್ಲ: ಹೈಕೋರ್ಟ್

ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
