ನವದೆಹಲಿ:ಚಂದ್ರಶೇಖರ್​ ಅಜಾದ್​ ನೇತೃತ್ವದ ಭೀಮ್​​ ಆರ್ಮಿ ಮತ್ತು ಪಾಪುಲರ್​ ಫ್ರಂಟ್​ ಆಫ್​ ಇಂಡಿಯಾ (ಪಿಎಫ್​ಐ) ಸಂಘಟನೆ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿರುವ ಜಾರಿ ನಿರ್ದೇಶನಾಲಯ (ಇಡಿ) ಹಾಥರಸ್ ಘಟನೆ ನೆಪದಲ್ಲಿ ಕೋಮು ಸಂಘರ್ಷಕ್ಕೆ 100 ಕೋಟಿ ರೂ. ಹರಿದುಬಂದಿದೆ ಎಂಬ ವಿಚಾರವನ್ನು ತಳ್ಳಿಹಾಕಿದೆ.​ಭೀಮ್​ ಆರ್ಮಿ ಮತ್ತು ಇತರೆ ಸಂಘಟನೆಗಳು ಹಾಥರಸ್​ನಲ್ಲಿ ನಡೆದಿದೆ ಎನ್ನಲಾದ ಪ್ರಕರಣವನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿವೆ ಎಂದು ಉತ್ತರ ಪ್ರದೇಶದ ಮಾಜಿ ಡಿಜಿಪಿ ಬ್ರಿಜ್​ ಲಾಲ್​ ಹೇಳಿಕೆ ನೀಡಿದ ಬೆನ್ನಲ್ಲೇ ಇಡಿ ಈ ಸ್ಪಷ್ಟನೆ ನೀಡಿದೆ.
ಇದೇ ವೇಳೆ ಹಾಥರಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ತೆರಳಿದ್ದ ಪಿಎಫ್​ಐ ಸಂಘಟನೆಯ ಸದಸ್ಯರು ಎನ್ನಲಾದ ನಾಲ್ವರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಓರ್ವ ಪತ್ರಕರ್ತನೂ ಇದ್ದಾರೆ. ಕೇರಳ ಮೂಲದ ಪತ್ರಕರ್ತ ಸಿದ್ದಿಖ್​ ಕಪ್ಪನ್​ ಸೇರಿದಂತೆ ನಾಲ್ವರ ವಿರುದ್ಧ ದೇಶದ್ರೋಹ ಸೇರಿದಂತೆ ಇತರೆ ಪ್ರಕರಣಗಳನ್ನು ಮಥುರಾದಲ್ಲಿ ದಾಖಲಿಸಲಾಗಿದೆ.
ಹಾಥರಸ್​ ಘಟನೆಯಲ್ಲಿ ಸಂತ್ರಸ್ತೆಯ ತಾಯಿ ಮತ್ತು ಆಕೆಯ ಕುಟುಂಬದವರೇ ಮೊದಲ ಆರೋಪಿಗಳು ಎಂದು ಬ್ರಿಜ್​ ಲಾಲ್​ ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಡಿಜಿಪಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಪರಿಶಿಷ್ಟ ಜಾತಿ ಮತ್ತು ಪಂಗಡ ಆಯೋಗದ ಮಾಜಿ ಮುಖ್ಯಸ್ಥರಾಗಿರುವ ಬ್ರಿಜ್​ ಲಾಲ್​, ಹಾಥರಸ್​ ಘಟನೆಯನ್ನು ನೆಪವಾಗಿಸಿಕೊಂಡು ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಪಿಎಫ್​ಐಗೆ 100 ಕೋಟಿ ರೂ. ಹದಿದು ಬಂದಿದೆ ಎಂದು ದೂರಿದ್ದರು.
ಇದನ್ನೂ ಓದಿ:ಫುಟ್​ಬಾಲರ್​ ಆಗುವ ಕನಸನ್ನೇ ಕಸಿದ ಸೊಳ್ಳೆ ಕಡಿತ: ಊದಿದ ಕಾಲು, ಭಯಾನಕ ರೋಗಕ್ಕಿಲ್ಲ ಮದ್ದು..!
ತಮ್ಮ ಬೆಂಬಲಿಗರೊಂದಿಗೆ ಭೀಮ್​ ಆರ್ಮಿ ಮುಖ್ಯಸ್ಥ ಚಂದ್ರಶೇಖರ್​ ಅಜಾದ್​ ಆಸ್ಪತ್ರೆಯಲ್ಲಿದ್ದ ಸಂತ್ರಸ್ತೆಯನ್ನು ನೋಡಲು ಹೋದಾಗಲೇ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿತು. ಮೊದಲೇ ಒತ್ತಡದಲ್ಲಿದ್ದ ಕುಟುಂಬ ಜನರು ನೀಡುವ ವಿಭಿನ್ನ ಹೇಳಿಕೆಗಳಿಗೆ ಗೊಂದಲಕ್ಕೀಡಾಗಿದ್ದರು. ಇದೀಗ ಕುಟುಂಬದವರು ಸಿಬಿಐ ವಿಚಾರಣೆ ಮತ್ತು ನಾರ್ಕೊ/ಪಾಲಿಗ್ರಾಫ್ ಪರೀಕ್ಷೆಯಿಂದ ಹಿಂದೆ ಸರಿಯುತ್ತಿದ್ದಾರೆಂದು ಲಾಲ್​ ಹೇಳಿದ್ದರು.
ಮಧ್ಯರಾತ್ರಿ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ್ದ ಲಾಲ್​, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಸಂಘರ್ಷ ಉಂಟು ಮಾಡಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಭೀಮ್​ ಆರ್ಮಿ, ಕಾಂಗ್ರೆಸ್​ ಮತ್ತು ಆಪ್​ ಪಕ್ಷಗಳು ಸಂಚು ರೂಪಿಸಿದ್ದವು. ಇದು ಗುಪ್ತಚರ ಇಲಾಖೆ ಗಮನಕ್ಕೆ ಬಂದಿತ್ತು. ಹೀಗಾಗಿ ಆತುರವಾಗಿ ನಡುರಾತ್ರಿ ಅಂತ್ಯಕ್ರಿಯೆ ನೆರವೇರಿಸಬೇಕಾಯಿತು ಎಂದು ಉತ್ತರ ಪ್ರದೇಶದ ಪೊಲೀಸರ ಕ್ರಮವನ್ನು ಲಾಲ್​ ಸಮರ್ಥಿಸಿಕೊಂಡಿದ್ದಾರೆ.
ಲಾಲ್​ ಹೇಳಿಕೆ ತುಂಬಾ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಇಡಿ 100 ಕೋಟಿ ರೂ. ಹಣದ ಹರಿವು ಮತ್ತು ಭೀಮ್​ ಆರ್ಮಿ ಹಾಗೂ ಪಿಎಫ್​ಐ ನಡುವೆ ಸಂಬಂಧವಿದೆ ಎಂಬುದನ್ನು ತಳ್ಳಿಹಾಕಿದೆ.(ಏಜೆನ್ಸೀಸ್​)
ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
