ನವದೆಹಲಿ:ನ್ಯಾಷನಲ್​ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಕ್ಕೆ ಒಳಗಾಗಿ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಪಟ್ಟಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಸದ್ಯಕ್ಕಂತೂ ನಿರಾಳರಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಏಕೆಂದರೆ ಜಾರಿ ನಿರ್ದೇಶನಾಲಯ (ಇ.ಡಿ.) ನಾಳೆಯೂ ವಿಚಾರಣೆಗೆ ಬರುವಂತೆ ಸೂಚಿಸಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಜೂ. 13ರಂದು ಇ.ಡಿ. ರಾಹುಲ್​ ಗಾಂಧಿಯ ವಿಚಾರಣೆ ಆರಂಭಿಸಿದ್ದು, ಸತತ ಮೂರು ದಿನ ವಿಚಾರಣೆ ನಡೆದಿತ್ತು. ಇಂದಿನ ವಿಚಾರಣೆ ನಾಲ್ಕನೇ ದಿನದ್ದಾಗಿದ್ದು, ನಾಳೆಯೂ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿ ಇದುವರೆಗೆ ಒಟ್ಟು ಸುಮಾರು 40 ಗಂಟೆಗಳ ಕಾಲ ಇ.ಡಿ. ವಿಚಾರಣೆ ಒಳಪಟ್ಟಿದ್ದಾರೆ. ಕಳೆದ ಸೋಮವಾರ, ಮಂಗಳವಾರ, ಬುಧವಾರ ಒಟ್ಟು 30 ಗಂಟೆಗಳ ವಿಚಾರಣೆಗೆ ಒಳಪಟ್ಟಿದ್ದ ರಾಹುಲ್​ಗೆ, ತಾಯಿ ಸೋನಿಯಾ ಅನಾರೋಗ್ಯ ಹಿನ್ನೆಲೆಯಲ್ಲಿ ವಿಚಾರಣೆಯಿಂದ ಒಂದಷ್ಟು ಮುಕ್ತಿ ಸಿಕ್ಕಿತ್ತು.
ಆದರೆ ಇಂದು ಮತ್ತೆ ವಿಚಾರಣೆಗೆ ಒಳಪಡಿಸಿರುವ ಇ.ಡಿ. ನಾಳೆಗೂ ವಿಚಾರಣೆ ಮುಂದುವರಿಸುವುದಾಗಿ ಹೇಳಿದೆ. ಇನ್ನು ನಿನ್ನೆ ರಾಹುಲ್ ಗಾಂಧಿ ಜನ್ಮದಿನವಿದ್ದು, ಸತತ ವಿಚಾರಣೆ, ತಾಯಿಯ ಅನಾರೋಗ್ಯ, ಕೇಸ್​ ಕುರಿತ ಆತಂಕ ಎಲ್ಲವೂ ಸೇರಿ ಹುಟ್ಟುಹಬ್ಬದ ಖುಷಿಯನ್ನೇ ಮಂಕಾಗಿಸಿದ್ದವು.
ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ; ಒಂದು ಮನೆಯಲ್ಲಿ 6, ಇನ್ನೊಂದು ಮನೆಯಲ್ಲಿ 3 ಶವ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 6 =
Remember me
